newsfirstkannada.com

ಸಚಿವ ಕೃಷ್ಣ ಬೈರೇಗೌಡ ವಿರುದ್ಧ ತಿರುಗಿಬಿದ್ದ ಸಹಕಾರನಗರ ನಿವಾಸಿಗಳು; ಕಾರಣವೇನು?

Share :

Published November 9, 2023 at 12:24pm

    ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಕೃಷ್ಣ ಬೈರೇಗೌಡ

    ಸಚಿವರು ಸಮಸ್ಯೆ ಆಲಿಸೋವರೆಗೂ ನಾವು ಹೋಗಲ್ಲ ಎಂದು ಪಟ್ಟು

    ಕೃಷ್ಣ ಬೈರೇಗೌಡ ವಿರುದ್ಧ ಸಹಕಾರನಗರ ನಿವಾಸಿಗಳ ಆಕ್ರೋಶ

ಬೆಂಗಳೂರು: ಕಳೆದ 2-3 ದಿನಗಳಿಂದ ಸಿಲಿಕಾನ್​ ಸಿಟಿಯಲ್ಲಿ ಸಂಜೆಯಾದ್ರೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಮಳೆಯಿಂದ ಸಹಕಾರನಗರ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಇದೇ ಕಾರಣಕ್ಕೆ ವೇದಿಕೆ ಮೇಲೆ ಮಾತಾಡುತ್ತಿದ್ದ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಸಹಕಾರ ನಗರ ಜನರು ಪ್ರತಿಭಟನೆ ನಡೆಸಿದ್ದಾರೆ.

ಬಿಬಿಎಂಪಿ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತುಕೊಂಡು ಸಚಿವ ಕೃಷ್ಣ ಬೈರೇಗೌಡ ತಾವು ನೀಡುತ್ತಿರುವ ಸೌಲಭ್ಯದ ಬಗ್ಗೆ ಮಾತಾಡುತ್ತಿದ್ದರು. ಇದೇ ವೇಳೆ ನೂರಕ್ಕೂ ಹೆಚ್ಚು ಜನರು ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆಗ ಸಚಿವರು ಪ್ರತಿಭಟನೆ ಮಾಡುತ್ತಿದ್ದವರ ಬಳಿ ಬಂದು ಅವರ ಸಮಸ್ಯೆಯ ಬಗ್ಗೆ ಆಲಿಸಿದ್ದಾರೆ. ಮಳೆ ಬಂದರೆ 6-7 ಅಡಿಯಷ್ಟು ರಸ್ತೆ ಮೇಲೆ ನೀರು ನಿಲ್ಲುತ್ತೆ. ಸಮಸ್ಯೆ ಆಲಿಸೋವರೆಗೂ ನಾವು ಹೋಗಲ್ಲ ಎಂದು ಪಟ್ಟು ಹಿಡಿದು ಯಲಹಂಕದ ಬಿಬಿಎಂಪಿ ಕಚೇರಿ ಬಳಿ ನಿಂತುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಚಿವ ಕೃಷ್ಣ ಬೈರೇಗೌಡ ವಿರುದ್ಧ ತಿರುಗಿಬಿದ್ದ ಸಹಕಾರನಗರ ನಿವಾಸಿಗಳು; ಕಾರಣವೇನು?

https://newsfirstlive.com/wp-content/uploads/2023/11/krishna-2.jpg

Load More