newsfirstkannada.com

ನಟ ರಿಷಬ್ ಶೆಟ್ಟಿ ಮನೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ; ಅವಳಿ ಮಕ್ಕಳ ಮುದ್ದಾದ ಫೋಟೋ ಶೇರ್​ ಮಾಡಿದ ನಟಿ ಅಮೂಲ್ಯ..!

Share :

07-09-2023

    ಕೃಷ್ಣ ಹಾಗೂ ರಾಧೆ ಲುಕ್​ನಲ್ಲಿ ಮಿಂಚಿದ ನಟ ರಿಷಬ್‌ ಶೆಟ್ಟಿ ಮದ್ದು ಮಕ್ಕಳು

    ಮಕ್ಕಳ ಜೊತೆ ಯಶೋದೆಯಾಗಿ ಮಿಂಚಿದ ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ

    ಗೋವಿನ ಜತೆ ಬಾಲ ಕೃಷ್ಣರ ಫೋಟೋಶೂಟ್‌ ಮಾಡಿಸಿದ ನಟಿ ಅಮೂಲ್ಯ

ನಾಡಿನೆಲ್ಲೆಡೆ ನಿನ್ನೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಲು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಎಲ್ಲಾ ಹಿಂದೂ ದೇವಾಲಯಗಳಲ್ಲಿ ಶ್ರೀಕೃಷ್ಣನಿಗೆ ವಿಶೇಷವಾಗಿ ಪೂಜೆ ನೆರವೇರಿದೆ. ಭಕ್ತರು ದೇವಸ್ಥಾನಗಳಿಗೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆದು ಪಾವನರಾಗಿದ್ದಾರೆ. ಪ್ರತಿ ವರ್ಷವೂ ಕೃಷ್ಣ ಜನ್ಮಾಷ್ಟಮಿಯಂದು ಸಾಕಷ್ಟು ಜನರು ತಮ್ಮ ಮುದ್ದು ಮಕ್ಕಳಿಗೆ ಕೃಷ್ಣ ಹಾಗೂ ರಾಧೆ ಉಡುಪುಗಳನ್ನು ತೊಡಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.

ಹೌದು, ಶ್ರೀಕೃಷ್ಣನಂತೆ ತಮ್ಮ ಮುದ್ದು ಮಕ್ಕಳಿಗೆ ವೇಷ ತೊಡಿಸಿ ಫೋಟೋಗಳನ್ನು ಕ್ಲಿಕ್ಕಿಸಿ ಸಂಭ್ರಮಿಸುತ್ತಾರೆ. ಹೀಗೆ ಸ್ಯಾಂಡಲ್​ವುಡ್​​ನಲ್ಲಿ ಸ್ಟಾರ್​​ ಜೋಡಿಯ ಮನೆ ಮನೆಗಳಲ್ಲಿಯೂ ಮುದ್ದು ಕೃಷ್ಣನಂತೆ ಮಕ್ಕಳು ಕಂಗೊಳಿಸಿದ್ದಾರೆ. ಸ್ಯಾಂಡಲ್‌ವುಡ್‌ ಖ್ಯಾತ ನಟ ರಿಷಬ್‌ ಶೆಟ್ಟಿ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ. ರಿಷಬ್​​ ಶೆಟ್ಟಿ ಪತ್ನಿ ಹಾಗೂ ಮಕ್ಕಳು ಕೂಡಾ ಕೃಷ್ಣ ಹಾಗೂ ರಾಧೆ ವೇಷ ಧರಿಸಿಕೊಂಡು ಸಖತ್​ ಆಗಿ ಫೋಟೋಗೆ ಪೋಸ್​​ ನೀಡಿದ್ದಾರೆ. ಆ ಸುಂದರವಾದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಈ ಫೋಟೋ ಜೊತೆಗೆ ‘‘ನಮ್ಮ ಮನೆಯ ಮುದ್ದು ರಾಧಾ ಕೃಷ್ಣರಿಂದ ಎಲ್ಲರಿಗೂ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು’’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಜೊತೆಗೆ ಮುದ್ದು ಕೃಷ್ಣನ ಜೊತೆ ಯಶೋದೆ, ತುಂಬಾ ಮುದ್ದಾದ ರಾಧಾ ಮತ್ತು ಕೃಷ್ಣ, ವಾವ್ ಎಷ್ಟು ಅದ್ಭುತವಾಗಿವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೂ, ಸಿನಿಮಾಗಳಿಂದ ದೂರ ಉಳಿದು ಮುದ್ದಾದ ಅವಳಿ ಮಕ್ಕಳ ಆರೈಕೆಯಲ್ಲಿಯೇ ಬ್ಯೂಸಿಯಾಗಿರೋ ಸ್ಯಾಂಡಲ್​​ವುಡ್​​ ನಟಿ ಅಮೂಲ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಆಗಾಗ ಹೊಸ ಹೊಸ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಾ ಇರುತ್ತಾರೆ. ಇದೀಗ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಅವಳಿ ಮಕ್ಕಳ ಜತೆಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅವಳಿ ಮಕ್ಕಳಾದ ಅಥರ್ವ್‌ ಮತ್ತು ಅಧವ್‌ಗೆ ಕೃಷ್ಣನ ವೇಷವನ್ನು ಹಾಕಿದ್ದಾರೆ. ಈ ಫೋಟೋದಲ್ಲಿ ಇಬ್ಬರು ಮಕ್ಕಳು ಮುದ್ದು ಮುದ್ದಾಗಿ ಥೇಟ್​ ಕೃಷ್ಣನಂತೆ ಕಾಣಿಸಿದ್ದಾರೆ. ಇನ್ನು ಈ ಫೋಟೋಗಳ ಜೊತೆಗೆ ನಟಿ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಎಂದು ಬರೆದುಕೊಂಡಿದ್ದಾರೆ. ಈ ಸಖತ್​ ಫೋಟೋಗಳು ಸೋಷಿಯಲ್​ ಮಿಡಿಯಾದಲ್ಲಿ ವೈರಲ್​​ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ನಿಮಗೂ ಹಾಗೂ ನಿಮ್ಮ ಇಬ್ಬರು ಮಕ್ಕಳಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಎಂದು ಶುಭಕೋರಿದ್ದಾರೆ.

View this post on Instagram

A post shared by Amulya (@nimmaamulya)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ರಿಷಬ್ ಶೆಟ್ಟಿ ಮನೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ; ಅವಳಿ ಮಕ್ಕಳ ಮುದ್ದಾದ ಫೋಟೋ ಶೇರ್​ ಮಾಡಿದ ನಟಿ ಅಮೂಲ್ಯ..!

https://newsfirstlive.com/wp-content/uploads/2023/09/rishab-5.jpg

Load More