newsfirstkannada.com

ಟ್ರೆಂಡ್ ಸೃಷ್ಟಿಸಿದ್ದ ‘ಕೃಷ್ಣಂ ಪ್ರಣಯ ಸಖಿ’ ಇಂದು ರಿಲೀಸ್​​; ರಾಜ್ಯಾದ್ಯಂತ ‘ಗೋಲ್ಡನ್ ಪ್ರಣಯ’

Share :

Published August 15, 2024 at 9:17am

Update August 15, 2024 at 9:20am

    ದ್ವಾಪರ ದಾಟಲು ಸೇರಿ ವಿವಿಧ ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ

    ನಿನ್ನೆ ರಾತ್ರಿಯೇ ಪ್ರೀಮಿಯರ್‌ ಶೋನಲ್ಲಿ ಸಿನಿಮಾ ಕಣ್ತುಂಬಿಕೊಂಡ ಅಭಿಮಾನಿಗಳು

    ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಮೂಡಿ ಬಂದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ

ಸ್ಯಾಂಡಲ್​ವುಡ್​ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಇಂದು ಬಿಡುಗಡೆಯಾಗಿದೆ.  ಹಾಡುಗಳಿಂದಲೇ ಸೋಷಿಯಲ್​ ಮಿಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಲು ಅಭಿಮಾನಿಗಳು ಉತ್ಸುಕರಾಗಿ ಥಿಯೇಟರ್​​ನತ್ತ ಬರುತ್ತಿದ್ದಾರೆ..

ಇದನ್ನೂ ಓದಿ: ಕಲಾವಿದರ ಮೇಲೆ ನಾಗದೈವ ಕೆಂಡ.. ಸ್ಯಾಂಡಲ್‌ವುಡ್‌ನಲ್ಲಿ ಆಗಿರೋ ದೊಡ್ಡ ತಪ್ಪೇನು? ಪೂಜೆಯಲ್ಲಿ ಆಗಿದ್ದೇನು?

ನಿನ್ನೆ ರಾತ್ರಿ ಪ್ರೀಮಿಯರ್ ಆಯೋಜಿಸಿದ್ದು, ಸ್ಯಾಂಡಲ್​ವುಡ್ ನಟ ಹಾಗೂ ನಟಿಯರು ಸಿನಿಮಾ ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ನಟ ಗಣೇಶ್​ ಕೃಷ್ಣಂ ಪ್ರಣಯ ಸಖಿಗೆ ಬಿಗ್ ಓಪನಿಂಗ್ ಪಡೆಯೋ ಎಲ್ಲಾ ಸೂಚನೆ ಕೊಟ್ಟಿದೆ. ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಮೂಡಿ ಬಂದಿದೆ. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ 8 ನಾಯಕಿಯರ ಜೊತೆಗೆ ಆ್ಯಕ್ಟ್ ಮಾಡಿದ್ದಾರೆ. ಇದು ಇಲ್ಲಿವರೆಗಿನ ಹೈಯೆಸ್ಟ್ ನಂಬರ್ ಅಂತಲೂ ಸ್ವತಃ ಗಣೇಶ್ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಫ್ಯಾಮಿಲಿ ಡ್ರಾಮಾ ಜೊತೆಗೆ ಒಂದಷ್ಟು ವಿಶೇಷ ಕಂಟೆಂಟ್ ಕೂಡ ಇದೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ ಎಂಬ ಸಾಂಗ್​. ಜೊತೆಗೆ ನೋಡುತ್ತಾ ನೋಡುತ್ತಾ ನಾನಂತೂ ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ ಎಂಬ ಸಾಂಗ್​. ವಿಶೇಷ ಎಂದರೆ ದ್ವಾಪರ ದಾಟುತ ಹಾಡು ಯ್ಯೂಟೂಬ್​ನಲ್ಲಿ 19 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಜೊತೆಗೆ ನೋಡುತ್ತಾ ನೋಡುತ್ತಾ ಹಾಡು 13 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ.

ಇದನ್ನೂ ಓದಿ: ರೀಲ್ಸ್ ಚೆಲುವೆಯ ದುರಂತ.. ಬೆಟ್ಟದ ಮೇಲೆ ನಡೆದ ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ; ಆಗಿದ್ದೇನು?

ಈ ಹಾಡುಗಳಿಂದಲೇ ಸಿನಿಮಾ ತಂಡ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದೆ. ಈ ಮೂಲಕವೇ ಗೋಲ್ಡನ್‌ ಸ್ಟಾರ್‌ ನಟನೆಯ ಈ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆ ಹಾಗೂ ಮೆಚ್ಚುಗೆಯ ಸುರಿಮಳೆ ಮೂಡಿತ್ತು. ಗೋಲ್ಡನ್‌ ಸ್ಟಾರ್‌ ಗಣೇಶ, ಮಾಳವಿಕ ನಾಯರ್‌, ಶರಣ್ಯ ಶೆಟ್ಟಿ, ಶಶಿ ಕುಮಾರ್‌, ಗಿರೀಶ್‌ ಶಿವಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಕುರಿ ಪ್ರತಾಪ್‌ ಮುಂತಾದ ತಾರಾ ಬಳಗ ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರೆಂಡ್ ಸೃಷ್ಟಿಸಿದ್ದ ‘ಕೃಷ್ಣಂ ಪ್ರಣಯ ಸಖಿ’ ಇಂದು ರಿಲೀಸ್​​; ರಾಜ್ಯಾದ್ಯಂತ ‘ಗೋಲ್ಡನ್ ಪ್ರಣಯ’

https://newsfirstlive.com/wp-content/uploads/2024/08/ganesh.jpg

Load More