newsfirstkannada.com

×

‘ನಾನಿದ್ದ ಹೋಟೆಲ್ ರೂಮ್‌ನಲ್ಲಿ ಆ​ ಕ್ಯಾಮೆರಾ ಇಟ್ಟಿದ್ರು’- ಶಾಕಿಂಗ್​ ವಿಚಾರ ಬಾಯ್ಬಿಟ್ಟ ಗೂಗ್ಲಿ ನಟಿ ಕೃತಿ ಕರಬಂಧ

Share :

Published August 23, 2023 at 4:09pm

    ಬಹುಭಾಷಾ ನಟಿ ಕೃತಿ ಕರಬಂಧ ಹೇಳಿಕೆಗೆ ಫಿಲ್ಮ್‌ ಇಂಡಸ್ಟ್ರಿ ಶಾಕ್​​

    ಮಹಿಳೆಯರು ಹೋಟೆಲ್ ರೂಮ್‌ಗೆ ಹೋದಾಗ ಹುಷಾರ್.. ಹುಷಾರ್

    ಹೋಟೆಲ್‌್ ರೂಂನಲ್ಲಿದ್ದ ಹಿಡನ್​ ಕ್ಯಾಮೆರಾವನ್ನು ಪತ್ತೆ ಹಚ್ಚಿದ್ದು ಹೇಗೆ?

ಬಹುಭಾಷಾ ನಟಿ ಕೃತಿ ಕರಬಂಧ ಕನ್ನಡ, ತೆಲುಗು ಸೇರಿದಂತೆ ಬಾಲಿವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಫೇಮಸ್ ನಟಿ ಕೃತಿ ಕರಬಂಧ ಅವರು ಇದೀಗ ಶಾಕಿಂಗ್​​ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾವೊಂದರ ಶೂಟಿಂಗ್‌ಗಾಗಿ ತಾನು ಉಳಿದುಕೊಂಡಿದ್ದ ಹೋಟೆಲ್‌ವೊಂದರ ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿತ್ತು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತಾಡಿರುವ ಕೃತಿ ಕರಬಂಧ ಈ ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಮಹಿಳೆಯರು ಬೇರೆ, ಬೇರೆ ಹೊಸ ಸ್ಥಳಕ್ಕೆ ಹೋದಾಗ ತುಂಬಾ ಎಚ್ಚರ ವಹಿಸಬೇಕು. ಹೋಟೆಲ್‌ಗಳಿಗೆ ಹೋಗಿದ್ದಾಗ ಸಾಕಷ್ಟು ಎಚ್ಚರಿಕೆ ಬೇಕು. ಕೆಲವರು ಕದ್ದು ಶೂಟ್ ಮಾಡಲು ಕ್ಯಾಮೆರಾ ಇಟ್ಟಿರುತ್ತಾರೆ. ಹೀಗೆ ಶೂಟಿಂಗ್ ವೇಳೆ ಹೋಟೆಲ್​ಗೆ ಹೋಗಿದ್ದಾಗ ಕ್ಯಾಮೆರಾ ಹೇಗೆ ಪತ್ತೆ ಹಚ್ಚಿದ್ದರು ಎಂಬುದನ್ನು ಕೂಡ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.

ಕನ್ನಡ ಸಿನಿಮಾದ ಶೂಟಿಂಗ್ ವೇಳೆ ನಾನು ಹೋಟೆಲ್​ಗೆ ಹೋಗಿದ್ದೆ. ಆಗ ಹೋಟೆಲ್ ಸಿಬ್ಬಂದಿಯೊಬ್ಬರು ನನ್ನ ಕೋಣೆಯಲ್ಲಿ ರಹಸ್ಯವಾಗಿ ಕ್ಯಾಮೆರಾ ಅಳವಡಿಸಿದ್ದರು. ನನ್ನ ತಂಡ ಮತ್ತು ನಾನು ಕೊಠಡಿಯನ್ನು ಪರಿಶೀಲಿಸಿದಾಗ ನನ್ನ ಕಣ್ಣಿಗೆ ಹಿಡನ್​​ ಕ್ಯಾಮೆರಾ ಕಾಣಿಸಿತು. ಸೆಟ್ ಟಾಪ್ ಬಾಕ್ಸ್ ಹಿಂದೆ ಹಿಡನ್​ ಕ್ಯಾಮೆರಾವನ್ನು ಇಟ್ಟಿದ್ದರು. ಇದು ತುಂಬಾ ಅಪಾಯಕಾರಿ. ಇಂತಹ ಘಟನೆಗಳನ್ನು ತಪ್ಪಿಸಲು, ನೀವೂ ಎಚ್ಚರದಿಂದ ಇರುವುದು ಬಹಳ ಮುಖ್ಯ ಎಂದು ಕೃತಿ ಹೇಳಿಕೊಂಡಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುವಾಗ ಈ ರೀತಿ ಆಗಿದೆ ಎಂದು ಕೃತಿ ನೀಡಿರೋ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನಿದ್ದ ಹೋಟೆಲ್ ರೂಮ್‌ನಲ್ಲಿ ಆ​ ಕ್ಯಾಮೆರಾ ಇಟ್ಟಿದ್ರು’- ಶಾಕಿಂಗ್​ ವಿಚಾರ ಬಾಯ್ಬಿಟ್ಟ ಗೂಗ್ಲಿ ನಟಿ ಕೃತಿ ಕರಬಂಧ

https://newsfirstlive.com/wp-content/uploads/2023/08/krithi-2.jpg

Load More