ಮಂಡ್ಯದಲ್ಲಿ ಮುಂದುವರಿದ ಕಾವೇರಿ ನೀರಿನ ಕಿಚ್ಚು
ಕಾನೂನು ತಜ್ಞರ ಜತೆ ಸಭೆ ನಡೆಸಲು ಡಿ.ಕೆ.ಶಿವಕುಮಾರ್ ಸಿದ್ಧತೆ
ಸೋಮವಾರ ಸೆಮಿಫೈನಲ್, ಶುಕ್ರವಾರ ಕಾವೇರಿ ಕದನಕ್ಕೆ ಫೈನಲ್!
ಮುಂಗಾರಿನ ಮುನಿಸು ಕಾವೇರಿಯನ್ನ ಬರಿದಾಗಿಸಿದೆ. ವರ ತೋರದ ವರುಣ ಬರಕ್ಕೆ ಆಹ್ವಾನ ಕೊಟ್ಟು ಮೌನಕ್ಕೆ ಜಾರಿದ್ದಾನೆ. ಇತ್ತ, ಮಳೆಯನ್ನೇ ನಂಬಿ ಕೂತಿದ್ದ ಜನ ಆಕಾಶದತ್ತ ಹನಿ ಮೇಲೆ ನಿರೀಕ್ಷೆ ಹೊತ್ತು ಕೂತಿದೆ. ಬಿದ್ದ ಅಲ್ಪ ಮಳೆ, ಹರಿದು ಹೋಗಿ ಅರ್ಧ ಜಲ ಬಟ್ಟಲು ತುಂಬಿತ್ತು. ಆದ್ರೀಗ ಅದಕ್ಕೂ ಕಾನೂನು ಪ್ರಕಾರವೇ ಕನ್ನ ಬೀಳ್ತಿದೆ. ಮಾನ್ಸೂನ್ ಮೊಂಡಾಟದಿಂದ ಈ ಬಿರು ಬಿಸಿಲು ಇಳೆಯನ್ನೇ ಕಾದು ಕಬ್ಬಿಣ ಮಾಡ್ತಿದೆ. ಈ ದೃಶ್ಯಗಳು ಅನಧಿಕೃತ ಬರಗಾಲವನ್ನ ಘೋಷಿಸಿದೆ.
ಕಾವೇರಿ ನೀರಿಗಾಗಿ ಕಾನೂನು ಕದನಕ್ಕೆ ಸಿದ್ಧತೆ ನಡೆಸಿದ ಕರ್ನಾಟಕ!
ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಕಟಕಟೆಯಲ್ಲಿ ನಿಂತ ಕಾವೇರಿ ವಿವಾದಕ್ಕೆ ಕದನ ವಿರಾಮ ಘೋಷಿಸಿದೆ. ಇತ್ತ, ರಾಜ್ಯ ಕೂಡ ಕಾನೂನು ಕದನಕ್ಕೆ ಸಿದ್ಧತೆ ನಡೆಸ್ತಿದೆ. ಸೋಮವಾರ ಕಾವೇರಿ ಪ್ರಾಧಿಕಾರ ಸಭೆ ಸೇರಲಿದ್ದು, ರಾಜ್ಯದ ಪರ ವಾದ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಮಧ್ಯೆ ಜಲಜ್ವಾಲೆಯಲ್ಲಿ ರಾಜಕೀಯ ತುಪ್ಪ ಸುರಿದಿದ್ದು, ವಾಕ್ಸಮರಕ್ಕೆ ಚಾಲನೆ ಸಿಕ್ಕಿದೆ.
ರಾಜ್ಯದ ಹಿತಕ್ಕೆ ಶೋಭಾ ಕರಂದ್ಲಾಜೆ ಸಹಕರಿಸಲಿ!
ನೀರಿನ ಕದನ, ಕಾವೇರಿದ ವಾತಾವರಣ ಸೃಷ್ಟಿಸಿದೆ. ಈ ಕುರಿತು ಮಾತನಾಡಿದ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಸರ್ವಪಕ್ಷಗಳ ಸಭೆಗೆ ಕರೆದ್ರೂ ಕರಂದ್ಲಾಜೆ ಬರಲಿಲ್ಲ. ಶೋಭಾ ಕರಂದ್ಲಾಜೆ ರಾಜ್ಯದ ಹಿತಕ್ಕೆ ಸಹಕರಿಸಲಿ ಅಂತ ತಿವಿದ್ರು. ಪ್ರಧಾನಿ ಕಚೇರಿ ಸಮಯ ನೀಡಿದ್ರೆ ಸರ್ವಪಕ್ಷ ನಿಯೋಗ ಹೋಗ್ತೇವೆ ಅಂತ ತಿಳಿಸಿದ್ರು. ಅಲ್ಲದೆ, ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಕಾನೂನು ತಜ್ಞರ ಜತೆ ಸಭೆ ಆಗ್ತಿದೆ ಅಂತ ಡಿಕೆಶಿ ಮಾಹಿತಿ ನೀಡಿದ್ರು.
ಕನ್ನಡ ಪರ ಸಂಘಟನೆಗಳಿಂದ KRS ಮುತ್ತಿಗೆ ಯತ್ನ
ಇತ್ತ, ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರೋದಕ್ಕೆ ಪ್ರತಿಭಟನೆ ಕಿಚ್ಚು ಆರುತ್ತಲೇ ಇಲ್ಲ.. ಇವತ್ತು ಕೆಆರ್ಎಸ್ ಡ್ಯಾಂಗೆ ವಿವಿಧ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟಿಸಿವೆ. ಡ್ಯಾಂನ ಮುಖ್ಯದ್ವಾರದ ಬಳಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ರು. ನೆಲದ ಮೇಲೆ ಬಿದ್ದ ಮಹಿಳೆಯೊಬ್ಬರು ನೀರು ನಿಲ್ಲಿಸುವಂತೆ ಹೊರಳಾಡಿದ್ರು.
102 ಅಡಿಗೆ ಕುಸಿದ ಡ್ಯಾಂ, ಹೆಚ್ಚಿತು ಮತ್ತಷ್ಟು ಆತಂಕ!
ಕಳೆದ 15 ದಿನಗಳಿಂದ ತಮಿಳುನಾಡಿಗೆ ನೀರು ಹರಿದು ಬಿಡಲಾಗ್ತಿದೆ.. ಇದ್ರಿಂದ ಕೆಆರ್ಎಸ್ನಲ್ಲಿನ ನೀರಿನ ಮಟ್ಟ ದಿನ ದಿನವೂ ಇಳಿಕೆ ಆಗ್ತಿದೆ.. 124.80 ಅಡಿ ನೀರಿನ ಸಂಗ್ರಹ ಹೊಂದಿರುವ ಡ್ಯಾಂನಲ್ಲಿ ಇವತ್ತು 102.22 ಅಡಿಗೆ ನೀರು ಕುಸಿತ ಆಗಿದೆ.
KRS ನೀರಿನ ಮಟ್ಟ
ಗರಿಷ್ಠ ಮಟ್ಟ – 49.452 ಟಿಎಂಸಿ
ಇಂದಿನ ಮಟ್ಟ – 24.600 ಟಿಎಂಸಿ
ಒಳ ಹರಿವು – 2461 ಕ್ಯೂಸೆಕ್
ಹೊರ ಹರಿವು – 3897 ಕ್ಯೂಸೆಕ್
ಒಟ್ಟಾರೆ, ಸೋಮವಾರ ಸೆಮಿಫೈನಲ್ ಇದ್ದು, ಶುಕ್ರವಾರ ರಾಜ್ಯದ ಪಾಲಿಗೆ ನಿರ್ಣಾಯಕ ದಿನ ಆಗಿರಲಿದೆ. ನಾಡಿದ್ದು ಕಾವೇರಿ ನದಿ ನೀರು ಪ್ರಾಧಿಕಾರ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಶುಕ್ರವಾರ ಸುಪ್ರೀಂಕೋರ್ಟ್ ತನ್ನ ತೀರ್ಮಾನ ತಿಳಿಸಲಿದೆ. ಹೀಗಾಗಿ ಈ ಎರಡು ದಿನಗಳತ್ತ ತಮಿಳುನಾಡು ಮತ್ತು ಕರ್ನಾಟಕ ಕಣ್ಣು ನೆಟ್ಟು ಕೂತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ