newsfirstkannada.com

ಜೆಡಿಎಸ್​-ಬಿಜೆಪಿ ಮೈತ್ರಿ ಕುರಿತ ಚರ್ಚೆ ಬೆನ್ನಲ್ಲೇ ಕುಮಾರಸ್ವಾಮಿ ಭೇಟಿಯಾದ ಈಶ್ವರಪ್ಪ..!

Share :

13-09-2023

    ಈಶ್ವರಪ್ಪ ಭೇಟಿ ವೇಳೆ ಸಾರಾ ಮಹೇಶ್ ಕೂಡ ಇದ್ದರು

    ‘ಜನ ಖುಷಿಯಾಗಿದ್ದಾರೆ’ ಎಂದು ಈಶ್ವರಪ್ಪ ಹೇಳಿದ್ದೇಕೆ..?

    ಈಶ್ವರಪ್ಪ ಭೇಟಿ ವೇಳೆ ಮೈತ್ರಿ ಬಗ್ಗೆ ಚರ್ಚೆ ಆಯಿತಾ..?

ಲೋಕಸಭೆ ಚುನಾವಣೆ ಟಾರ್ಗೆಟ್ ಮಾಡಿರುವ ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ನುಗ್ಗುತ್ತಿವೆ. ಮೈತ್ರಿ ಕುರಿತ ಚರ್ಚೆಗಳು ಜೋರಾಗುತ್ತಿರುವ ಹೊತ್ತಿನಲ್ಲಿಯೇ ಇವತ್ತು ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದಾರೆ.

ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ನಿವಾಸಕ್ಕೆ ತೆರಳಿ ಕುಮಾರಸ್ವಾಮಿ ಜೊತೆ ಸಮಾಲೋಚನೆ ನಡೆಸಿದರು. ಬಳಿಕ ಮಾತನಾಡಿರುವ ಈಶ್ವರಪ್ಪ, ಕುಮಾರಸ್ವಾಮಿ ಅವರ ಆರೋಗ್ಯವನ್ನು ವಿಚಾರಿಸಿದೆ. ಅವರು ಆಸ್ಪತ್ರೆಯಲ್ಲಿದ್ದಾಗ ವಿಚಾರಿಸಲು ಆಗಿರಲಿಲ್ಲ ಎಂದರು.

ಮುಂದುವರಿದು ಮಾತನಾಡಿರುವ ಅವರು, 10 ನೇ ತಾರೀಖು ಬಳ್ಳಾರಿಯಲ್ಲಿ ಹೋಮ ಮಾಡೋವಾಗ ಕರೆ ಮಾಡಿದ್ದರು. ಅಂದೇ ಮೈತ್ರಿ ಬಗ್ಗೆ ಮಾತಾಡಿದ್ದರು. ಒಳ್ಳೆಯದಾಗುತ್ತದೆ ಎಂದು ಹೇಳಿದ್ದೆ. ಇವತ್ತು ಮೈತ್ರಿ ಬಗ್ಗೆ ಚರ್ಚೆ ಆಗಿಲ್ಲ. ಬಿಜೆಪಿ-ಜೆಡಿಎಸ್ ಒಂದಾಗುತ್ತದೆ ಎಂದು ಜನ ಖುಷಿಯಾಗಿದ್ದಾರೆ. ಸೀಟು ಬಗ್ಗೆ ಕೇಂದ್ರ ನಾಯಕರೇ ಅಂತಿಮ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೆಡಿಎಸ್​-ಬಿಜೆಪಿ ಮೈತ್ರಿ ಕುರಿತ ಚರ್ಚೆ ಬೆನ್ನಲ್ಲೇ ಕುಮಾರಸ್ವಾಮಿ ಭೇಟಿಯಾದ ಈಶ್ವರಪ್ಪ..!

https://newsfirstlive.com/wp-content/uploads/2023/09/ESWARAPPA.jpg

Load More