newsfirstkannada.com

×

ಕರ್ನಾಟಕದ ವಿರುದ್ಧ ಅರ್ಜುನ್ ತೆಂಡುಲ್ಕರ್​ ಸಂಚಲನ; ಒಂದೇ ಪಂದ್ಯದಲ್ಲಿ 9 ವಿಕೆಟ್ ಕಿತ್ತು ಸಾಧನೆ

Share :

Published September 17, 2024 at 8:40am

    KSCA Invitational ಟೂರ್ನಮೆಂಟ್​​ನಲ್ಲಿ ಭರ್ಜರಿ ಬೌಲಿಂಗ್

    ಐಪಿಎಲ್ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಡ್ ಆಗುವ ನಿರೀಕ್ಷೆ

    ಗೋವಾ ವಿರುದ್ಧ ಕರ್ನಾಟಕಕ್ಕೆ ಹೀನಾಯ ಸೋಲು

IPL 2025ರ ಮೆಗಾ ಹರಾಜಿನ ದಿನಾಂಕ ಇನ್ನೂ ಬಹಿರಂಗ ಆಗಿಲ್ಲ. ಆದರೆ ಅದರ ಉತ್ಸಾಹ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹರಾಜಿಗೂ ಮುನ್ನ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ ಇನ್ವಿಟೇಶನಲ್ ಟೂರ್ನಮೆಂಟ್)ನಲ್ಲಿ ಗೋವಾ ಪರ ಆಡುತ್ತಿದ್ದಾಗ ಒಂದೇ ಪಂದ್ಯದಲ್ಲಿ 9 ವಿಕೆಟ್ ಪಡೆದಿದ್ದಾರೆ. ಅವರ ಈ ಪ್ರದರ್ಶನ ಐಪಿಎಲ್​ ಹರಾಜಿನಲ್ಲಿ ದೊಡ್ಡ ಬಿಡ್ ಪಡೆಯುವ ಸಾಧ್ಯತೆ ಇದೆ. ಡೊಮೆಸ್ಟಿಕ್ ಸರ್ಕ್ಯೂಟ್‌ನಲ್ಲಿ ಕರ್ನಾಟಕದ ವಿರುದ್ಧದ ಪಂದ್ಯದಲ್ಲಿ ಅರ್ಜುನ್ 9 ವಿಕೆಟ್‌ ಪಡೆದಿದ್ದಾರೆ. ಪರಿಣಾಮ ಕರ್ನಾಟಕದ ವಿರುದ್ಧ ಗೋವಾ ತಂಡವು ಒಂದು ಇನಿಂಗ್ಸ್ ಹಾಗೂ 189 ರನ್‌ಗಳ ಭರ್ಜರಿ ಗೆಲುವು ಕಂಡಿತು.

ಇದನ್ನೂ ಓದಿ:Modi birthday: ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜು ಇಂದು; ಬಂದ ಹಣವನ್ನು ಏನು ಮಾಡ್ತಾರೆ ಗೊತ್ತಾ?

ಮೊದಲ ಇನಿಂಗ್ಸ್‌ನಲ್ಲಿ 41 ರನ್‌ಗಳಿಗೆ 5 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ 4 ವಿಕೆಟ್‌ಗಳನ್ನು ಅರ್ಜುನ್ ಕಬಳಿಸಿದರು. ಇಡೀ ಪಂದ್ಯದಲ್ಲಿ 87 ರನ್ ನೀಡಿ 9 ವಿಕೆಟ್ ಪಡೆದುಕೊಂಡರು. ಮೆಗಾ ಹರಾಜಿನ ಮೊದಲು ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಬಹುದು. ಒಂದು ವೇಳೆ ಅವರು ಹರಾಜಿಗೆ ಪ್ರವೇಶಿಸಿದರೆ ಖಂಡಿತವಾಗಿಯೂ ದೊಡ್ಡ ಬಿಡ್ ಪಡೆಯಬಹುದು ಎನ್ನಲಾಗುತ್ತಿದೆ.

ಅರ್ಜುನ್ 2023ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರು 5 ಪಂದ್ಯಗಳಲ್ಲಿ 3 ವಿಕೆಟ್ ಪಡೆದರು. ಕಳಪೆ ಬೌಲಿಂಗ್ ಪ್ರದರ್ಶನದಿಂದ ತೀವ್ರ ಟೀಕೆಯನ್ನು ಎದುರಿಸಿದರು. ಎಡಗೈ ವೇಗಿ ಮತ್ತು ಚೆಂಡನ್ನು ಸ್ವಿಂಗ್ ಮಾಡುವುದರಿಂದ ಹರಾಜಿನಲ್ಲಿ ದೊಡ್ಡ ಬಿಡ್ ಪಡೆದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: 4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್​​ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕರ್ನಾಟಕದ ವಿರುದ್ಧ ಅರ್ಜುನ್ ತೆಂಡುಲ್ಕರ್​ ಸಂಚಲನ; ಒಂದೇ ಪಂದ್ಯದಲ್ಲಿ 9 ವಿಕೆಟ್ ಕಿತ್ತು ಸಾಧನೆ

https://newsfirstlive.com/wp-content/uploads/2024/09/ARJUN-TENDULKAR-1.jpg

Load More