newsfirstkannada.com

KSRTC ಬಸ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ; ನಾಲ್ವರು ಸಾವು, ಹಲವರಿಗೆ ಗಾಯ

Share :

11-09-2023

    ಲಾರಿಗೆ ಹಿಂಬದಿಯಿಂದ ಗುದ್ದಿದ KSRTC ಬಸ್

    ಅಪಘಾತದ ಬಳಿಕ ಚಾಲಕ ಲಾರಿಯೊಂದಿಗೆ ಪರಾರಿ

    ಚಳ್ಳಕೆರೆಯಿಂದ ಹಿರಿಯೂರಿಗೆ ಹೊರಟಿದ್ದ ಬಸ್​

ಚಿತ್ರದುರ್ಗ: KSRTC ಬಸ್, ಲಾರಿ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿದ ಘಟನೆ ಹಿರಿಯೂರು-ಚೆಳ್ಳಕೆರೆ ರಸ್ತೆಯ ಗೊಲ್ಲಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ ನಾಲ್ವರ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.

ಬಸ್​​ ಚಳ್ಳಕೆರೆಯಿಂದ ಹಿರಿಯೂರಿಗೆ ಹೊರಟಿತ್ತು. ಈ ವೇಳೆ ಲಾರಿಗೆ ಹಿಂಬದಿಯಿಂದ ಬಸ್ ಗುದ್ದಿ ಅವಘಡ ಸಂಭವಿಸಿದೆ. ಇಬ್ಬರು ಪುರುಷರು, ಓರ್ವ ಮಹಿಳೆ, ಒಂದು ಮಗು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಇನ್ನು ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಬೆಂಗಳೂರು ಮೂಲದ ಪಾರ್ವತಮ್ಮ(45) , ಮರಾಯಚೂರಿನ ಮಸ್ಕಿ ಮೂಲದ ರಮೇಶ್(40)‌ ಎಂದು ಗುರುತಿಸಲಾಗಿದೆ.

ಇದನ್ನು ಓದಿ:ಬೆಂಗಳೂರು ಬಂದ್​, ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ; ಸಂಚಾರಕ್ಕೆ ಯಾವ ರೂಟ್​ ಸೂಕ್ತಾ? ಇಲ್ಲಿದೆ ಮಾಹಿತಿ

ಬಸ್ ನಲ್ಲಿದ್ದ ಆರಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಾಯಾಳುಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಚಾಲಕ ಲಾರಿಯೊಂದಿಗೆ ಪರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಐಮಂಗಲ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಬಸ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ; ನಾಲ್ವರು ಸಾವು, ಹಲವರಿಗೆ ಗಾಯ

https://newsfirstlive.com/wp-content/uploads/2023/09/Accident-4.jpg

Load More