ಬೆಲೆ ಬಾಳುವ ವಸ್ತುಗಳನ್ನ ಹಿಂತಿರುಗಿಸಿ ಮಾನವೀಯತೆ ಮೆರೆದ ಕಂಡಕ್ಟರ್
ಕೃಷ್ಣಪ್ಪ ಎಂಬುವವರನ್ನು ಗೌರಿಬಿದನೂರು ಘಟಕಕ್ಕೆ ಕರೆಸಿ ಹಣ ವಾಪಸ್
ಎಲ್ಲೆಡೆ ಮೆಚ್ಚುಗೆಗೆ ಪಾತ್ರರಾದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಓಬಲೇಶ್
ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ ಎಲ್ಲಾದರೂ ಬೆಲೆ ಬಾಳುವ ವಸ್ತುಗಳನ್ನ ಇಟ್ಟು ಸ್ವಲ್ಪ ಯಾಮಾರಿದ್ರೂ ಕ್ಷಣಾರ್ದದಲ್ಲಿ ಕದ್ದು ಪರಾರಿಯಾಗುತ್ತಾರೆ. ಇಂತಹ ಕಾಲದಲ್ಲಿ ಕೆಎಸ್ಆರ್ಟಿಸಿ ನಿರ್ವಾಹಕನೋರ್ವ ಬಸ್ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಮಾಲೀಕರಿಗೆ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗೌರಿಬಿದನೂರು ಘಟಕದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಹಾಗೂ ಗುಡಿಬಂಡೆ ಮೂಲದ ಜಿ.ಎ. ಓಬಲೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಪ್ರಯಾಣಿಕರೊಬ್ಬರು ಒಂದು ಲಾಪ್ ಟಾಪ್, ಐಫೋನ್, ಎರಡು ಸಾವಿರ ರೂಪಾಯಿ ಹಣ ಹಾಗೂ ದಾಖಲೆಗಳಿರುವ ಬ್ಯಾಗ್ ಅನ್ನು ಬಸ್ನಲ್ಲಿಯೇ ಮರೆತು ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ನಿರ್ವಾಹಕ ಓಬಲೇಶ್ ಬ್ಯಾಗ್ ಸುರಕ್ಷಿತವಾಗಿ ಇಟ್ಟುಕೊಂಡು ಅದರ ಮಾಲೀಕರಾದ ಕೃಷ್ಣಪ್ಪ ಎನ್ನುವವರನ್ನ ಗೌರಿಬಿದನೂರಿ ಘಟಕಕ್ಕೆ ಕರೆಸಿ ಎಲ್ಲರ ಸಮ್ಮುಖದಲ್ಲಿ ಬೆಲೆ ಬಾಳುವ ವಸ್ತುಗಳನ್ನ ಹಿಂತಿರುಗಿಸಿ ಮಾನವೀಯ ಮೆರೆದಿದ್ದಾರೆ.
ಇಷ್ಟೇ ಅಲ್ಲದೆ ಈ ಹಿಂದೆ ಹಲವು ಪ್ರಯಾಣಿಕರು ಅಮೂಲ್ಯವಾದ ವಸ್ತುಗಳಿರುವ ಬ್ಯಾಗ್ಗಳನ್ನು ಬಸ್ನಲ್ಲಿಯೇ ಬಿಟ್ಟು ಹೋಗಿದ್ದರು. ಅದನ್ನ ಕೂಡ ಓಬಲೇಶ್ ಅವರು ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಓಬಲೇಶ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ