newsfirstkannada.com

WATCH: ಅಂದು ಕೊಳ್ಳೇಗಾಲ, ಇಂದು ಮಳವಳ್ಳಿ; KSRTC ಬಸ್ ಡೋರ್ ಅನ್ನೇ ಕಿತ್ತು ಹತ್ತಿದ ಮಹಿಳೆಯರು

Share :

19-06-2023

    ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್

    ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಹಿಂಡು, ಬಸ್‌ಗಳು ಹೌಸ್ ಫುಲ್‌

    ಬಸ್ಸಿನಲ್ಲಿ ನೂಕುನುಗ್ಗಲು, ಬಸ್​ ಬಾಗಿಲನ್ನೇ ಮುರಿದ ಮಹಿಳಾಮಣಿಗಳು

ಮಂಡ್ಯ: ಫ್ರೀ ಶಕ್ತಿ ಯೋಜನೆಯ ಎಫೆಕ್ಟ್ ರಾಜ್ಯದ ಎಲ್ಲಾ ಸಾರಿಗೆ ಕೆಂಪು ಬಸ್‌ಗಳಿಗೂ ತಟ್ಟಿದೆ. ಉಚಿತ ಸಾರಿಗೆ ಪ್ರಯಾಣ ಶುರುವಾಗಿದ್ದೇ ಆಗಿದ್ದು ಮಹಿಳೆಯರ ಕಾಲು ಮನೆಯಲ್ಲಿ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಮಹಿಳೆಯರ ಪ್ರವಾಸ ಜೋರಾಗಿದೆ. ಉಚಿತ ಬಸ್​​​ ಇದ್ದ ಕಾರಣ ರಾಜ್ಯದ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ. ಹೀಗಾಗಿ ಸರ್ಕಾರಿ ಬಸ್‌ಗಳು ಹೌಸ್ ಫುಲ್‌ ಆಗಿವೆ.​

ಸರ್ಕಾರಿ ಬಸ್‌ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ನಾರಿಶಕ್ತಿಗೆ ಮುರಿದ ಮತ್ತೊಂದು KSRTC ಬಸ್​ ಡೋರ್​ಗಳು ಮುರಿದು ಹೋಗಿದೆ. ಈ ಘಟನೆಯು ಜಿಲ್ಲೆಯ ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೊನ್ನೆಯಷ್ಟೇ ಕೊಳ್ಳೆಗಾಲದಲ್ಲಿ KSRTC ಬಸ್ ಬಾಗಿಲು ಕಿತ್ತು ಬಂದಿತ್ತು. ಇದೀಗ ಮಳವಳ್ಳಿ ಪಟ್ಟಣದಲ್ಲಿ ಮತ್ತೊಂದು ಘಟನೆ ಸಂಭವಿಸಿದೆ. ಮಹಿಳೆಯರು ಬಸ್​​​​ನಲ್ಲಿ ಕುಳಿತುಕೊಳ್ಳಲು ಸೀಟ್​​ ಹಿಡಿಯುಲು ಮುಂದಾಗಿದ್ದರು. ಈ ವೇಳೆ ಹೆಚ್ಚಿನ ತಳ್ಳಾಟ-ನೂಕಾಟ ಉಂಟಾದ ಪರಿಣಾಮ ಬಸ್​​ ಬಾಗಿಲು ಮುರಿದು ಹೋಗಿದೆ. ಇನ್ನು ಬಾಗಿಲು ಕಿತ್ತು ಬಂದ ಕಾರಣ ಸಾರಿಗೆ ಸಿಬ್ಬಂದಿ ಬಸ್​ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಳಿಕ ಕಿತ್ತು ಹೋದ ಡೋರ್ ಅನ್ನು ಬಸ್ಸಿನ ಕಂಡಕ್ಟರ್ ಟಿಸಿಗೆ ಹಸ್ತಾಂತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಅಂದು ಕೊಳ್ಳೇಗಾಲ, ಇಂದು ಮಳವಳ್ಳಿ; KSRTC ಬಸ್ ಡೋರ್ ಅನ್ನೇ ಕಿತ್ತು ಹತ್ತಿದ ಮಹಿಳೆಯರು

https://newsfirstlive.com/wp-content/uploads/2023/06/free-bus-13.jpg

Load More