newsfirstkannada.com

×

ಮಂಡ್ಯ ಭೀಕರ ಅಪಘಾತಕ್ಕೆ ಕಾರಣ ಮೊಬೈಲ್‌.. ಶಾಕಿಂಗ್ ವಿಚಾರ ಬಿಚ್ಚಿಟ್ಟ ವಿದ್ಯಾರ್ಥಿ; ಅಸಲಿಗೆ ಆಗಿದ್ದೇನು?

Share :

Published September 30, 2024 at 2:33pm

    ನಿಂತಿದ್ದ ಕಂಟೈನರ್‌ ಗಾಡಿಗೆ KSRTC ಚಾಲಕ ಡಿಕ್ಕಿ ಹೊಡೆದಿದ್ದು ಯಾಕೆ?

    ಎಕ್ಸ್‌ಪ್ರೆಸ್ ಹೈವೇಯಿಂದ ಮಂಡ್ಯ ಸರ್ವೀಸ್ ರಸ್ತೆಗೆ ತಿರುಗಿಸಿದ ಚಾಲಕ

    ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಹೇಳಿದ್ದೇನು?

ಮಂಡ್ಯ: ಬೆಂಗಳೂರು-ಮೈಸೂರು ‌ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ನಿಂತಿದ್ದ ಕಂಟೈನರ್‌ ಗಾಡಿಗೆ KSRTC ಬಸ್ ಡಿಕ್ಕಿಯಾಗಿದೆ. KSRTC ಗುದ್ದಿದ ರಭಸಕ್ಕೆ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ.

ಇದನ್ನೂ ಓದಿ: ಕಟ್ಟಡ ಧ್ವಂಸಗೊಳಿಸುವಾಗ ವ್ಯಕ್ತಿಯ ನೆತ್ತಿ ಸೀಳಿತು ತೂರಿ ಬಂದ ಕಲ್ಲು; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ 

ತುಮಕೂರಿನಿಂದ ಮಂಡ್ಯ ಕಡೆಗೆ ಪ್ರಯಾಣಿಸುತ್ತಿದ್ದ KSRTC ಬಸ್‌ನಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದರು. ಎಕ್ಸ್‌ಪ್ರೆಸ್ ಹೈವೇಯಿಂದ ಮಂಡ್ಯಕ್ಕೆ ತೆರಳಲು ಚಾಲಕ ಸರ್ವೀಸ್ ರಸ್ತೆಗೆ ತಿರುಗಿಸಿದ್ದಾನೆ. ಈ ವೇಳೆ ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಬಸ್ ಪಲ್ಟಿಯಾಗಿದೆ. ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

KSRTC ಬಸ್‌ ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಗಾಯಗೊಂಡ ವಿದ್ಯಾರ್ಥಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಅಸಲಿಗೆ ಆಗಿದ್ದೇನು?
ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ನೀಡಿರೋ ಮಾಹಿತಿ ಪ್ರಕಾರ ಚಾಲಕ ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಮತ್ತೊಂದು ಕೈನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬಸ್ ತಿರುಗಿಸುವಾಗ ಪಲ್ಟಿಯಾಗಿದೆ.

ಈ ಬಸ್​ ಅಪಘಾತಕ್ಕೆ ಮೊದಲಿಗೆ ಗುಂಡಿ ಕಾರಣ ಎನ್ನಲಾಗಿತ್ತು. ಆದರೆ ಬಸ್ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಾ ಇದ್ದಿದ್ದ ಎನ್ನಲಾಗಿದೆ. ಸುಮಾರು 4-5 ಕಿಲೋ ಮೀಟರ್ ದೂರದಿಂದ ಬಸ್ ಚಾಲಕ ಮೊಬೈಲ್​ ಬಳಸುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಚಾಲಕರಿಗೆ ಮೊಬೈಲ್ ಬಳಸಬೇಡ ಅಂತ ಹೇಳಿದ್ರು ಅವರು ಪ್ರಯಾಣಿಕರ ಮಾತೇ ಕೇಳಲ್ಲ. ಹೀಗಾಗಿ ಚಾಲಕನ ನಿರ್ಲಕ್ಷ್ಯದಿಂದಲೇ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಾಯಗೊಂಡಿರುವ ಬಸ್ ಚಾಲಕ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ಭೀಕರ ಅಪಘಾತಕ್ಕೆ ಕಾರಣ ಮೊಬೈಲ್‌.. ಶಾಕಿಂಗ್ ವಿಚಾರ ಬಿಚ್ಚಿಟ್ಟ ವಿದ್ಯಾರ್ಥಿ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/09/Mandya-KSRTC-Accident-1.jpg

Load More