newsfirstkannada.com

KSRTC ಬಸ್​​ನಲ್ಲಿ ಬಿಟ್ಟು ಹೋಗಿದ್ದ ಲಕ್ಷ ಲಕ್ಷ ಹಣ.. ಡ್ರೈವರ್​​, ಕಂಡಕ್ಟರ್ ಆ ದುಡ್ಡನ್ನ​ ಏನ್ ಮಾಡಿದ್ರು?

Share :

Published June 19, 2024 at 10:30pm

    ಬಸ್​ನಲ್ಲಿ ಬಿಟ್ಟು ಹೋಗಿದ್ದ ಲಕ್ಷ ಲಕ್ಷ ಹಣ ಏನಾಯಿತು ಗೊತ್ತಾ..?

    ನಗರದ ಬಸ್ ನಿಲ್ದಾಣದಲ್ಲಿ ಹಣ ಕಳೆದುಕೊಂಡಿದ್ದ ಓರ್ವ ವ್ಯಕ್ತಿ

    ಹಣ ಸಿಕ್ಕ ಮೇಲೆ ನಿರ್ವಾಹಕ ಹಾಗೂ ಚಾಲಕರು ಮಾಡಿದ್ದು ಏನು?

ರಾಯಚೂರು: ಹುಬ್ಬಳ್ಳಿ- ಹೈದರಾಬಾದ್​ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಬಿಟ್ಟು ಹೋಗಿದ್ದ ಎರಡೂವರೆ ಲಕ್ಷ ರೂಪಾಯಿಗಳನ್ನು ಪ್ರಯಾಣಿಕನಿಗೆ ಹಿಂದಿರುಗಿಸಿ ಡ್ರೈವರ್​​ ಹಾಗೂ ಕಂಡಕ್ಟರ್ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯು ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಇದನ್ನೂ ಓದಿ: ಬಟ್ಟೆಯಿಂದ ಚಪ್ಪಲಿವರೆಗೆ ಎಲ್ಲವೂ ಸೀಜ್​.. ಕ್ಲೈಮ್ಯಾಕ್ಸ್‌ನಲ್ಲಿ ಸಖತ್ ಟ್ವಿಸ್ಟ್ ಕೊಟ್ಟ ಐ-ವಿಟ್ನೆಸ್‌ಗಳು; ಏನದು?

ಡ್ರೈವರ್ ಹನುಮಂತ ಹಾಗೂ ಕಂಡಕ್ಟರ್ ಮಂಜುನಾಥ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ರಾಯಚೂರಿನ ಮಾನ್ವಿ ತಾಲೂಕಿನ ಸೋಮಶೇಖರ್ ಅನ್ನೋರು 2.5 ಲಕ್ಷ ರೂಪಾಯಿಗಳನ್ನು ಬಸ್​ನಲ್ಲೇ ಬಿಟ್ಟು ರಾಯಚೂರು ನಗರದಲ್ಲಿ ಇಳಿದುಕೊಂಡಿದ್ದರು. ಹೈದರಾಬಾದ್​​ಗೆ ಹೋಗುವವರೆಗೆ ಈ ಬ್ಯಾಗ್ ಅನ್ನು ಯಾರು ಕೂಡ ಪರಿಶೀಲನೆ ಮಾಡಿಲ್ಲ. ಯಾವಾಗ ಹೈದರಾಬಾದ್​​ಗೆ ಬಸ್ ತಲುಪಿತೋ ಅವಾಗ ಕಂಡಕ್ಟರ್, ಡ್ರೈವರ್ ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬ್ಯಾಗ್​ನಲ್ಲಿ ಹಣ ಪತ್ತೆಯಾಗಿದೆ. ಆದರೆ ಯಾರದು ಎಂಬುದು ಗೊತ್ತಾಗಿಲ್ಲ. ಹೀಗಾಗಿ ಬ್ಯಾಗ್​​ನ್ನು ಇನ್ನಷ್ಟು ಪರಿಶೀಲನೆ ಮಾಡಿದಾಗ ಬ್ಯಾಂಕ್ ಪಾಸ್​ಬುಕ್ ಸಿಕ್ಕಿದೆ.

ಇದನ್ನೂ ಓದಿ: RCBಯ ಅದೃಷ್ಟದ ಕ್ಯಾಪ್ಟನ್​ ಮತ್ತೆ ಸೆಂಚುರಿ.. ಬೆಂಗಳೂರಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸ್ಮೃತಿ ಮಂದನಾ

ಬಳಿಕ ಬ್ಯಾಂಕ್​​ ಪಾಸ್​​ಬುಕ್​​ನಲ್ಲಿದ್ದ ಫೋನ್ ನಂಬರ್​ನಿಂದ ಆ ಹಣದ ಮಾಲೀಕನನ್ನ ಸಂಪರ್ಕ ಮಾಡಲಾಗಿದೆ. ಈ ವೇಳೆ ರಾಯಚೂರಿಗೆ ಬಸ್ ಬಂದಾಗ ಬರುವಂತೆ ತಿಳಿಸಲಾಗಿದೆ. ಅದರಂತೆ ಬಸ್​ ರಾಯಚೂರಿಗೆ ಬಂದಾಗ ಅಧಿಕಾರಿಗಳ ಸಮ್ಮುಖದಲ್ಲಿ 2.5 ಲಕ್ಷ ರೂಪಾಯಿಗಳನ್ನು ಸೋಮಶೇಖರ್​​ಗೆ ಹಸ್ತಾಂತರ ಮಾಡಿದ್ದಾರೆ. ಕಳೆದು ಹೋಗಿದ್ದ ಹಣ ಮತ್ತೆ ವಾಪಸ್ ಬಂದಿದ್ದಕ್ಕೆ ಮಾಲೀಕ ಫುಲ್ ಖುಷಿಯಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಬಸ್​​ನಲ್ಲಿ ಬಿಟ್ಟು ಹೋಗಿದ್ದ ಲಕ್ಷ ಲಕ್ಷ ಹಣ.. ಡ್ರೈವರ್​​, ಕಂಡಕ್ಟರ್ ಆ ದುಡ್ಡನ್ನ​ ಏನ್ ಮಾಡಿದ್ರು?

https://newsfirstlive.com/wp-content/uploads/2024/06/KSRTC_BUS_NEW.jpg

Load More