5ಕ್ಕೂ ಹೆಚ್ಚು ಅಬಕಾರಿ ಲೈಸೆನ್ಸ್ ಹೊಂದಿರೋ ಕೆ.ಟಿ ಶ್ರೀನಿವಾಸ್ ಮೂರ್ತಿ
ಸರ್ವೆ ಸೂಪರ್ ವೈಸರ್ ಆಗಿದ್ದ ಮನೆಯಲ್ಲಿ ಕೋಟ್ಯಾಂತರ ಆಸ್ತಿ ಪತ್ತೆ
ಕೆಲ ದಾಖಲೆಗಳನ್ನು ಬೇರೆಡೆಗೆ ಸಾಗಿಸಿದ ಕೆ.ಟಿ ಶ್ರೀನಿವಾಸ್ ಮೂರ್ತಿ!
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದ ಕೆ.ಟಿ ಶ್ರೀನಿವಾಸ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ತುಮಕೂರು ಸೇರಿದಂತೆ ಒಟ್ಟು 14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. 5ಕ್ಕೂ ಹೆಚ್ಚು ಅಬಕಾರಿ ಲೈಸೆನ್ಸ್ ಹೊಂದಿರುವ ಕೆ.ಟಿ ಶ್ರೀನಿವಾಸ್ ಮೂರ್ತಿ ಮನೆಯಲ್ಲಿ ಕೋಟ್ಯಾಂತರ ಆಸ್ತಿ ಪತ್ತೆಯಾಗಿದೆ.
ಕೆ.ಟಿ ಶ್ರೀನಿವಾಸ್ ಮೂರ್ತಿ ಕೆಆರ್ ಪುರಂ ತಾಲೂಕು ಕಚೇರಿಯಲ್ಲಿ ಸರ್ವೆ ಸೂಪರ್ ವೈಸರ್ ಆಗಿದ್ದರು. ಜೊತೆಗೆ 5ಕ್ಕೂ ಹೆಚ್ಚು ಅಬಕಾರಿ ಲೈಸೆನ್ಸ್ ಹೊಂದಿದ್ದರು. ಹೀಗಾಗಿ ಅವರ ಅಂಧ್ರಳ್ಳಿ ನಿವಾಸ, ಸಹೋದರಿಯ ಹೆಣ್ಣೂರು ನಿವಾಸ, ಸಹೋದರನ ತುಮಕೂರಿನ ನಿವಾಸ, ಪತ್ನಿ ಹೆಸರಿನಲ್ಲಿ ಹೋಟೆಲ್ಸ್, ಬೋರ್ಡಿಂಗ್ ಹೌಸ್ಗಳ ಮೇಲೂ ದಾಳಿ ಮಾಡಿ ಪರಿಶೀಲಿಸಿದ್ದಾರೆ.
ಇನ್ನು ಸರ್ವೆ ಸುಪ್ರವೈಸರ್ ಕೆ.ಟಿ ಶ್ರೀನಿವಾಸ್ ಮೂರ್ತಿ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡುತ್ತಿದ್ದ. ಕೆ ಆರ್ ಪುರ ತಹಶೀಲ್ದಾರ್ ಅಜಿತ್ ರೈ ಹಾಗೂ ಕೆ ಟಿ ಶ್ರೀನಿವಾಸ್ ಮೂರ್ತಿ ಆಪ್ತ ಸ್ನೇಹಿತರಾಗಿದ್ದರು. ಕೆ ಆರ್ ಪುರ ತಾಲ್ಲೂಕು ಕಚೇರಿಯಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ರು. ಕೆ ಟಿ ಶ್ರೀಮೂರ್ತಿ ಅಪಾರ್ಟ್ಮೆಂಟ್ ಪ್ಲ್ಯಾಟ್ನಲ್ಲಿ ಪರಿಶೀಲನೆ ವೇಳೆ ಮತ್ತೆ 2 ಅಬಕಾರಿ ಲೈಸನ್ಸ್ ಪತ್ತೆಯಾಗಿವೆ. ಅಜೀತ್ ರೈ ಮೇಲೆ ಲೋಕಾಯುಕ್ತ ದಾಳಿ ನಂತರ ಕೆಲ ದಾಖಲೆಗಳನ್ನು ಕೆ ಟಿ ಶ್ರೀನಿವಾಸ್ ಮೂರ್ತಿ ಬೇರೆಡೆಗೆ ಸಾಗಿಸಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ನಾಪತ್ತೆ ಮಾಡಿರುವ ದಾಖಲೆಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ