ಸರ್ಕಾರಿ ಶಾಲೆಯನ್ನ ದತ್ತುತೆಗೆದುಕೊಂಡ ಶಾಸಕ ಮಹೇಂದ್ರ ತಮ್ಮಣ್ಣ
ಮುಂದಿನ ದಿನಗಳಲ್ಲಿ 5 ಶಾಲೆಗಳನ್ನ ದತ್ತು ತೆಗೆದುಕೊಳ್ಳಲಿರುವ ಶಾಸಕ
ಮೊದಲ ಗೌರವಧನ ವಿತರಣೆ ಮಾಡಿದ ಕುಡಚಿ ಮತಕ್ಷೇತ್ರದ ಶಾಸಕ
ಬೆಳಗಾವಿಯ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣ ತಮ್ಮ ಮೊದಲ ಸಂಬಳವನ್ನ ಸರ್ಕಾರಿ ಶಾಲೆಗೆ ಮೀಸಲಿಟ್ಟದ್ದಾರೆ. ಕುಡಚಿಯ ಬಸ್ತವಾಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯನ್ನ ದತ್ತುತೆಗೆದುಕೊಳ್ಳಲಾಗಿತ್ತು.. ಶಾಲೆ ದತ್ತು ತೆಗೆದುಕೊಂಡು ಶಾಸಕರು ಮೊದಲ ಗೌರವಧನ ವಿತರಣೆ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಕ್ಷೇತ್ರದ ಐದು ಶಾಲೆಗಳನ್ನ ನಾನು ದತ್ತು ಪಡೆದು ಅಭಿವೃದ್ಧಿಗೊಳಿಸಲಿದ್ದೇನೆ. ನನ್ನ ಕ್ಷೇತ್ರದಲ್ಲಿ ದೇವಸ್ಥಾನಕ್ಕಿಂತ ಶಾಲೆಗಳ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದ್ದಾರೆ.
ಸರ್ಕಾರಿ ಶಾಲೆಗಳು ಅಳಿವಿನ ಅಂಚಿನಲ್ಲಿದ್ದು, ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳ ಉಳಿವಿಗೆ ಸರ್ಕಾರ ಶ್ರಮಿಸುತ್ತಿದೆ. ಅದರಂತೆಯೇ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣ ಮಹತ್ವದ ನಿರ್ಣಯ ಕೈಗೊಂಡಿದ್ದು, ತಮ್ಮ ಮೊದಲ ಸಂಬಳವನ್ನ ಸರ್ಕಾರಿ ಶಾಲೆಗೆ ಮೀಸಲಿಟ್ಟದ್ದಾರೆ. ಈ ವಿಚಾರಕ್ಕೆ ಊರಿನರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ