newsfirstkannada.com

Manipur Violence: ಮತ್ತೊಂದು ಸ್ವರೂಪ ಪಡೆದುಕೊಂಡ ಕುಕಿ-ಮೈತೇಯಿ ಜನಾಂಗದ ಸಂಘರ್ಷ.. ಸರ್ಕಾರದ ಮುಂದೆ ಕುಕಿ ಹೊಸ ವರಸೆ..!

Share :

22-07-2023

    ಮಣಿಪುರದಲ್ಲಿ ಯಾಕೆ ಕುಕಿ-ಮೈತೇಯಿ ಮಧ್ಯೆ ಕಿತ್ತಾಟ..?

    ಸುಮಾರು 10 ವರ್ಷಗಳಿಂದ ನಡೀತಿರುವ ಸಂಘರ್ಷ

    ಕುಕಿಗೆ ಆತಂಕ ಯಾಕೆ..? ಮೈತೇಯಿಗೆ ST ಸ್ಥಾನ ನೀಡಿದ್ರೆ ಏನಾಗುತ್ತೆ?

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಗಳು ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿವೆ. ಇಂಟರ್​ನೆಟ್​ ಸೇವೆಯನ್ನು ಪುನರ್​ಸ್ಥಾಪಿಸಿದ ಬೆನ್ನಲ್ಲೇ ಮಣಿಪುರದಲ್ಲಿ ನಡೆದಿರುವ ಕೆಲವು ಹಿಂಸಾಚಾರದ ವಿಡಿಯೋಗಳು ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿವೆ.

ಪ್ರತ್ಯೇಕ ರಾಜ್ಯದ ಅಸ್ತ್ರ

ವೈರಲ್ ಆಗುತ್ತಿರುವ ವಿಡಿಯೋಗಳು, ಇಡೀ ದೇಶವನ್ನೇ ಬೆಚ್ಚಿ ಬೀಳಿಸುತ್ತಿವೆ. ಇದರ ಮಧ್ಯೆ ಮಣಿಪುರದಲ್ಲಿರುವ ಕುಕಿ ಕಮ್ಯುನಿಟಿ, ಪ್ರತ್ಯೇಕ ರಾಜ್ಯಕ್ಕೆ ಭೇಟಿ ನೀಡಿದೆ. ಅದರಂತೆ ದೆಹಲಿಯ ಜಂತರ್​-ಮಂತರ್​​ನಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ.
ಮಣಿಪುರದಲ್ಲಿ ಇಷ್ಟೆಲ್ಲಾ ಹಿಂಸಾಚಾರಕ್ಕೆ ಕಾರಣ ಆಗಿರೋದು ಮೀಸಲಾತಿ ವಿಚಾರ. ಮೈತೇಯಿ ಮತ್ತು ಕುಕಿ ಸಮುದಾಯದ ನಡುವಿನ ಗಲಾಟೆ. ಮೈತೇಯಿ ಹಿಂದೂ ಸಮುದಾಯಕ್ಕೆ ಸೇರಿದ್ದರೆ, ಕುಕಿ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ. ಮಣಿಪುರದಲ್ಲಿ ಶೇಕಡಾ 53 ರಷ್ಟಿರುವ ಮೈತೇಯಿ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ಬಗ್ಗೆ ನಿರ್ಧಾರ ಮಾಡಬೇಕು ಎಂದು ಏಪ್ರಿಲ್ 19 ರಂದು ಅಲ್ಲಿನ ಹೈಕೋರ್ಟ್ ಆದೇಶ ನೀಡಿತ್ತು.

ಕುಕಿ ಮತ್ತು ಮೈತೇಯಿ ಸಂಘರ್ಷ ಯಾಕೆ..?

ಆದರೆ ಕುಕಿ ಸಮುದಾಯ, ಮೈತೇಹಿಗೆ ST ಸ್ಥಾನಮಾನ ನೀಡೋದಕ್ಕೆ ವಿರೋಧ ವ್ಯಕ್ತಪಡಿಸಿದೆ. ಇವರಿಗೆ ST ಸ್ಥಾನಮಾನ ನೀಡಿದರೆ ಮೈತೇಯಿ ಜನ ಮತ್ತಷ್ಟು ಪ್ರಬಲರಾಗುತ್ತಾರೆ. ಶೇಕಡಾ 10 ರಷ್ಟು ಬಯಲು ಪ್ರದೇಶವನ್ನು ಹೊಂದಿರುವ ಮಣಿಪುರದಲ್ಲಿ, ಅವರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಿದರೆ ಮೈತೇಹಿಗೆ ಹಕ್ಕುಗಳು ವಿಸ್ತರಣೆ ಆಗಲಿವೆ. ಅವರು ಅರಣ್ಯ ಮತ್ತು ಕಣಿವೆ ಪ್ರದೇಶಗಳಿಗೆ ಬರೋದ್ರಿಂದ ನಮ್ಮ ಭೂಮಿ ಮತ್ತು ಅರಣ್ಯಕ್ಕೆ ಆಪತ್ತು ಬರಲಿದೆ ಅನ್ನೋದು ಕುಕಿ ಸಮುದಾಯದ ವಾದ. ಇದೇ ಕಾರಣಕ್ಕೆ ಮೈತೇಯಿಗೆ ಎಸ್​ಟಿ ಸ್ಥಾನಮಾನ ನೀಡಬಾರದು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ.

ಅಂದ್ಹಾಗೆ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿಗಳ ನಡುವಿನ ಸಂಘರ್ಷ ಇದೇ ಮೊದಲೇನೂ ಅಲ್ಲ. ಹಲವು ದಶಕಗಳಿಂದ ನಿರಂತವಾಗಿ ನಡೆದುಕೊಂಡು ಬರುತ್ತಲೇ ಇದೆ. ಕಳೆದ 10 ವರ್ಷಗಳಿಂದ ಮೈತೇಯಿ ತಮ್ಮ ಸಮುದಾಯಕ್ಕೆ ಎಸ್​​ಟಿ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿಕೊಂಡು ಹೋರಾಡುತ್ತಿದೆ. ಇದಕ್ಕೆ ಕುಕಿ ಪ್ರತಿರೋಧ ಒಡ್ಡಿದೆ. ಅದರಲ್ಲೂ ಮಣಿಪುರದಲ್ಲಿರುವ 60 ಶಾಸಕರ ಪೈಕಿ ಸುಮಾರು 50 ಶಾಸಕರು ಮೈತೇಯಿ ಸುಮುದಾಯಕ್ಕೆ ಸೇರದವರಾಗಿದ್ದಾರೆ. ಇದು ಕೂಡ ಕುಕಿ ಸಮುದಾಯದ ಜನರಲ್ಲಿ ಆತಂಕ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Manipur Violence: ಮತ್ತೊಂದು ಸ್ವರೂಪ ಪಡೆದುಕೊಂಡ ಕುಕಿ-ಮೈತೇಯಿ ಜನಾಂಗದ ಸಂಘರ್ಷ.. ಸರ್ಕಾರದ ಮುಂದೆ ಕುಕಿ ಹೊಸ ವರಸೆ..!

https://newsfirstlive.com/wp-content/uploads/2023/07/MANIPUR-2-1.jpg

Load More