newsfirstkannada.com

ನಟ ದರ್ಶನ್ ಖೈದಿ 6106 ನಂಬರ್​ ಹಿಂದೆ ಬಿದ್ದ ನಿರ್ಮಾಪಕ.. ಈ ಟೈಟಲ್​​ ಸಿನಿಮಾ ಆಗುತ್ತಾ?

Share :

Published June 30, 2024 at 8:53pm

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅಂಡ್​ ಗ್ಯಾಂಗ್​ ಜೈಲಿಗೆ

    ನಟ ದರ್ಶನ್ ಪ್ರಕರಣ​ ಹತ್ತಿರವಾದ ಟೈಟಲ್​ಗಳಿಗೆ ಹೆಚ್ಚಿದ ಬೇಡಿಕೆ

    ಟೈಟಲ್ ಬಗ್ಗೆ ನಿರ್ಮಾಪಕ ಭದ್ರಾವತಿ ಕುಮಾರ್ ಅವರು ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್ ಗ್ಯಾಂಗ್ ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ಯುವಕನನ್ನು ಕ್ರೂರವಾಗಿ ಕೊಲೆ ಮಾಡಿದ್ದು ಪೊಲೀಸ್​ ತನಿಖೆ ವೇಳೆ ತಿಳಿದು ಬಂದಿದೆ. ಹೀಗಾಗಿ ನಟ ದರ್ಶನ್​ ಸೇರಿ ಒಟ್ಟು 17 ಆರೋಪಿಗಳು ಸೆರೆವಾಸ ಅನುಭವಿಸುತ್ತಿದ್ದಾರೆ. 17 ಆರೋಪಿಗಳಲ್ಲಿ ನಾಲ್ವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್‌ಗೆ ₹40 ಲಕ್ಷ ಕೊಟ್ಟ ರಹಸ್ಯ.. ಪೊಲೀಸರಿಗೆ ಮಹತ್ವದ ಸುಳಿವು; ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್!

ಇನ್ನು, ನೆಚ್ಚಿನ ನಟ ದರ್ಶನ್​ ಅರೆಸ್ಟ್​ ಆಗುತ್ತಿದ್ದಂತೆ ಅಭಿಮಾನಿಗಳು ಫುಲ್ ಶಾಕ್​ ಆಗಿದ್ದರು. ಜೊತೆಗೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್​​ ಭಾಗಿಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕೆಲ ಅಭಿಮಾನಿಗಳು ಕಣ್ಣೀರಿಟ್ಟಿದ್ದರು. ಇನ್ನೂ ಕೆಲವರು ದರ್ಶನ್​ ಮಾಡಿದ್ದು ತುಂಬಾ ದೊಡ್ಡ ತಪ್ಪು ಅಂತಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದರು. ಸದ್ಯ ವಿಚಾರಣಾಧೀನ ಕೈದಿಯಾಗಿ ಸೆರೆಮನೆ ವಾಸ ಅನುಭವಿಸುತ್ತಿರೋ ನಟ ದರ್ಶನ್​ಗೆ ಖೈದಿ 6106 ನಂಬರ್ ನೀಡಲಾಗಿದ್ದು, ಇದೇ ನಂಬರನ್ನು ಅಭಿಮಾನಿಯೊಬ್ಬ ವಾಹನ ನಂಬರ್​ ಪ್ಲೇಟ್​ಗಳಾಗಿ ಬಳಸುತ್ತಿದ್ದಾರೆ. ಇದರ ಮಧ್ಯೆ ನಟ ದರ್ಶನ್​ ಜೈಲಿಗೆ ಸೇರುತ್ತಿದ್ದಂತೆ  ‘ಡಿ’ಗ್ಯಾಂಗ್, ಪಟ್ಟಣಗೆರೆ ಶೆಡ್ ಮತ್ತು ಕೈದಿ ನಂ. 6106 ಟೈಟಲ್​​ಗೆ ಬೇಡಿಕೆ ಹೆಚ್ಚಾಗುತ್ತಿದೆ.

ಹೌದು, ನಟ ದರ್ಶನ್ ಪ್ರಕರಣ​ ಹತ್ತಿರವಾದ ಟೈಟಲ್​ಗಳಿಗೆ ಹೆಚ್ಚಿನ ರೀತಿಯಲ್ಲಿ ಬೇಡಿಕೆ ಬರುತ್ತಿದೆಯಂತೆ. ಈ ಬಗ್ಗೆ ಬೆಂಗಳೂರಿನಲ್ಲಿ ನಿರ್ಮಾಪಕ ಭದ್ರಾವತಿ ಕುಮಾರ್ ಮಾಹಿತಿ ನೀಡಿದ್ದಾರೆ. ದರ್ಶನ್ ಜೈಲು ಪಾಲಾದ ಬಳಿಕ ಪ್ರಕರಣ ಹತ್ತಿರವಾದ ಟೈಟಲ್ಸ್ ಬಗ್ಗೆ ಹೆಚ್ಚಿದ ಕ್ರೇಜ್ ಹುಟ್ಟುಕೊಂಡಿದೆ. ಕೇಸ್​​ ಕೋರ್ಟ್​​​​​ನಲ್ಲಿ ಇರುವುದರಿಂದ ಯಾರಿಗೂ ಟೈಟಲ್ ಸಿಕ್ಕಿಲ್ಲ. ‘ಡಿ’ ಬಾಸ್ ಟೈಟಲ್ ಈಗಾಗಲೇ ರಿಜಿಸ್ಟರ್ ಆಗಿರೋ ಬಗ್ಗೆ ಮಾಹಿತಿ ಇದೆ. 4-5 ವರ್ಷಗಳಿಂದ ‘ಬಾಸ್’ ಎಂಬ ಟೈಟಲ್​ ಅನ್ನು ರಿಜಿಸ್ಟರ್ ರಿನಿವಲ್ ಮಾಡಲಾಗಿದೆ. ಬಹುಶಃ ದರ್ಶನ್​ ಅವರಿಗಾಗಿ ಸಿನಿಮಾ ರಿಜಿಸ್ಟರ್ ಮಾಡಿರುವ ಸಾಧ್ಯತೆ ಇದೆ ಎಂದು ನ್ಯೂಸ್​ಫಸ್ಟ್​​​​ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್ ಖೈದಿ 6106 ನಂಬರ್​ ಹಿಂದೆ ಬಿದ್ದ ನಿರ್ಮಾಪಕ.. ಈ ಟೈಟಲ್​​ ಸಿನಿಮಾ ಆಗುತ್ತಾ?

https://newsfirstlive.com/wp-content/uploads/2024/06/darshan59.jpg

Load More