newsfirstkannada.com

ಇವ್ರು ವೀಸಾ ವೆರಿಫಿಕೇಷನ್ ಎಂದು ಮನೆಗೆ ಬಂದ್ರೆ ಎಚ್ಚರ! ನಿಮ್ಮ ಮನೆ ಖಾಲಿಯಾಗೋದು ಗ್ಯಾರೆಂಟಿ

Share :

23-05-2023

    ವೀಸಾ ನೆಪದಲ್ಲಿ ಮನೆಗೆ ಎಂಟ್ರಿ

    ಪಿಜಿ ಮಾಲೀಕ ಸೇರಿ ಅದೇ ಪಿಜಿಯಲ್ಲಿ ಉಳಿದುಕೊಂಡಿದ್ದ 2 ಜನರಿಂದ ಈ ಕೃತ್ಯ

    ಮಾಲೀಕನ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ದೋಚಿದ ಖದೀಮರು

ವೀಸಾ ಹೆಸರಿನಲ್ಲಿ ಮನೆ ದೋಚುವ ಗ್ಯಾಂಗ್ ಅನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪಿಜಿ ಮಾಲೀಕ ಸೇರಿ ಮೂವರನ್ನು ಕೊನೆಗೂ ಬಂಧಿಸಿದ್ದಾರೆ.

ಕಳೆದ ಎರಡು ತಿಂಗಳು ಹಿಂದೆ 60 ವರ್ಷದ ವೃದ್ದ ಮುರಳೀಧರ್ ಎಂಬುವವರ ಮನೆಗೆ ಸ್ವರೂಪ್, ಆತ್ಮಾನಂದ ಜಂಬಗಿ, ಶಾಲಿಂ ಕುಮಾರ್ ವೀಸಾ ನೆಪದಲ್ಲಿ ಬಂದಿದ್ದರು. ಈ ವೇಳೆ ಮುರಳೀಧರ್ ಕೆಲಸಕ್ಕೆ ಹೋಗಲು ಸಿದ್ಧರಾಗುತ್ತಿದ್ದರು. ಅವರ ಪತ್ನಿ ಕೆಲಸಕ್ಕೆ ಹೋಗಿದ್ದರು. ಇದನ್ನೇ ಸರಿಯಾದ ಸಮಯವೆಂದುಕೊಂಡು ಮೂವರು ಕಳ್ಳರು ಮುರಳೀಧರ್​ ಅವರ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ್ದರು.

ಪಕ್ಕಾ ಪ್ಲಾನ್​ ಮಾಡಿದ್ದ ಖದೀಮರು

ಮುರಳೀಧರ್ ಮನೆಯಲ್ಲಿ ಒಬ್ಬರೇ ಇದ್ದು, ಕೆಲಸಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಬಂದ ಸ್ವರೂಪ್, ಆತ್ಮಾನಂದ ಜಂಬಗಿ, ಶಾಲಿಂ ಕುಮಾರ್ ಮನೆಯ ಕಾಲಿಂಗ್ ಬೆಲ್ ಒತ್ತಿದ್ದರು. ನಾವು ವೀಸಾ ವೆರಿಫಿಕೇಷನ್ ಗೆ ಬಂದಿದ್ದೇವೆ ನಿಮ್ಮ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿದ್ದರು. ಈ ವೇಳೆ ಆಧಾರ್ ಕಾರ್ಡ್ ತರಲು ಮುರಳೀಧರ್​ ಒಳ ಹೋಗುತ್ತಿದ್ದಂತೆ ಹಿಂದೆಯಿಂದ ತಳ್ಳಿದ್ದಾರೆ. ಬಳಿಕ ಕೆಳಗೆ ಬಿದ್ದ ಮುರಳೀಧರ್​ ಅವರ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಬೀರುವಿನ ಕೀ ಕೇಳಿದ್ದಾರೆ.

ಚಿನ್ನಾಭರಣ ದೋಚಿದ್ದ ಖದೀಮರು

ಮುರಳೀಧರ್​ ಮನೆಗೆ ನುಗ್ಗಿದ ನಂತರ ಆರೋಪಿಗಳು ಮನೆಯಲ್ಲಿದ್ಸ 4 ಲಕ್ಷ ಮೌಲ್ಯದ ಚಿನ್ನಾಭರಣ, 20 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ನಗದು ದೋಚಿದ್ದಾರೆ. ಬಳಿಕ ಮುರಳೀಧರ್ ಅವರ ಮೊಬೈಲ್ ಕಿತ್ತು ಪರಾರಿಯಾಗಿದ್ದಾರೆ.

ಪಿಜಿ ಮಾಲೀಕನಿಂದ ಈ ಕೃತ್ಯ

ಎಪ್ರಿಲ್ 10 ನೇ ತಾರೀಕು ಈ ಘಟನೆ ನಡೆದಿದೆ. ಎರಡು ತಿಂಗಳ ಬಳಿಕ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸ್ವರೂಪ್​ ಪಿಜಿ ಮಾಲೀಕನಾಗಿದ್ದು, ತನ್ನ ಪಿಜಿಯಲ್ಲಿ ನೆಲೆಸಿದ್ದ ಅತ್ಮಾನಂದ ಜಂಬಗಿ ಹಾಗು ಶಾಲಿಂ ಕುಮಾರ್ ಜೊತೆ ಸೇರಿ ಈ ಕೃತ್ಯವೆಸಗಿದ್ದಾರೆ.

ವಿಪರೀತ ಸಾಲ ಮಾಡಿಕೊಂಡಿದ್ದ ಹಿನ್ನಲೆ ಹಣಕ್ಕಾಗಿ ಕೃತ್ಯ ಮಾಡಿದ್ದಾರೆ. ಮೂವರು ಆರೋಪಿಗಳು ಅನಿಲ್ ಶೆಟ್ಟಿ ಎಂಬಾತನನ್ನೂ ಸುಲಿಗೆ ಮಾಡಲು ಮುಂದಾಗಿದ್ದರು. ಆದರೆ ಅದಕ್ಕೂ ಮೊದಲೇ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವ್ರು ವೀಸಾ ವೆರಿಫಿಕೇಷನ್ ಎಂದು ಮನೆಗೆ ಬಂದ್ರೆ ಎಚ್ಚರ! ನಿಮ್ಮ ಮನೆ ಖಾಲಿಯಾಗೋದು ಗ್ಯಾರೆಂಟಿ

https://newsfirstlive.com/wp-content/uploads/2023/05/New-Project-35.jpg

Load More