newsfirstkannada.com

×

ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟ ADGP; ಯಾರು ಈ ಐಪಿಎಸ್​ ಅಧಿಕಾರಿ ಚಂದ್ರಶೇಖರ್..?

Share :

Published September 29, 2024 at 1:34pm

Update September 29, 2024 at 1:35pm

    ಗಂಗೇನಹಳ್ಳಿ ಡಿ-ನೋಟಿಪಿಕೇಷನ್ ಪ್ರಕರಣದಲ್ಲಿ HDK

    ನಿನ್ನೆ ತನಿಖೆಗೆ ಹಾಜರಾಗಿದ್ದ ಹೆಚ್​ಡಿ ಕುಮಾರಸ್ವಾಮಿ

    ವಿಚಾರಣೆ ಎದುರಿಸಿದ ಬೆನ್ನಲ್ಲೇ ವಾಗ್ದಾಳಿ ಮಾಡಿದ್ದ ಸಚಿವ

ಮುಡಾ ಹಗರಣದ ಬಳಿಕ ರಾಜ್ಯ ರಾಜಕಾರಣದಲ್ಲಿ ಸೇಡಿನ ರಾಜಕಾರಣ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇಂದ್ರ ಸಚಿವ ಕುಮಾರಸ್ವಾಮಿಗೂ ಲೋಕಾ ಕಂಟಕ ಎದುರಾಗಿದೆ. ಗಂಗೇನಹಳ್ಳಿ ಡಿ-ನೋಟಿಪಿಕೇಷನ್ ಪ್ರಕರಣ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ರು. ಇದರ ಬೆನ್ನಲ್ಲೇ ಕೆರಳಿದ ಕೇಂದ್ರ ಸಚಿವ ಕುಮಾರಸ್ವಾಮಿ, ನಿನ್ನೆ ಸುದ್ದಿಗೋಷ್ಠಿ ನಡೆಸಿ, ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್​ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದರು. ಬೆನ್ನಲ್ಲೇ ತಮ್ಮ ಇಲಾಖೆಯ ಸಿಬ್ಬಂದಿಗೆ ಪತ್ರ ಬರೆಯುವ ಮೂಲಕ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿಗೆ ಭರ್ಜರಿ ಟಾಂಗ್​ ನೀಡಿದ್ದಾರೆ.

ಇದನ್ನೂ ಓದಿ:ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟ ADGP; ಯಾರು ಈ ಐಪಿಎಸ್​ ಅಧಿಕಾರಿ ಚಂದ್ರಶೇಖರ್..?

ಯಾರು ಈ ಚಂದ್ರಶೇಖರ್..?
1998 ಬ್ಯಾಚ್​ನ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್​. ಇವರು ಮೂಲತಃ ಆಂಧ್ರಪ್ರದೇಶದ ನಲ್ಲೂರಿನವರು. ಹಿಮಾಚಲ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಚಂದ್ರಶೇಖರ್, ಹಿಮಾಚಲ ಶಿಮ್ಲಾ ದಲ್ಲಿ ಎಎಸ್ಪಿ ಯಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ. ಬಿಲಸ್ಪುರ್ ಮತ್ತು ಮಂಡಿಯಲ್ಲಿ ಎಸ್ಪಿ ಯಾಗಿದ್ದರು. 2013ರಲ್ಲಿ ಅನಾರೋಗ್ಯದ ಸಮಸ್ಯೆ ಕಾರಣಕ್ಕೆ ಕರ್ನಾಟಕಕ್ಕೆ ವರ್ಗಾವಣೆಗೊಂಡರು. ಎಸ್ಪಿ, ಎಸ್​ಐಡಿ (State Intelligence Department) ಅಧಿಕಾರಿಯಾಗಿದ್ದ ಅವರು, ಅಲ್ಲಿಂದ ಪೂರ್ವ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಡಿಐಜಿಯಾದ ಬಳಿಕ ಅಗ್ನಿಶಾಮಕ ದಳಕ್ಕೆ ನೇಮಕ ಮಾಡಲಾಗಿದೆ. 2015ರಲ್ಲಿ ಸಿಸಿಬಿ ಜಂಟಿ ಆಯುಕ್ತರಾಗಿದ್ದರು. ನಂತರ ಎಸಿಬಿ ಐಜಿಪಿಯಾಗಿದ್ದರು, ಇದಾದ ಬಳಿಕ ಸೆಂಟ್ರಲ್ ಜೋನ್ ಐಜಿಪಿ ಯಾಗಿದ್ದರು. ಇಂಟರ್​​ನಲ್​ ಸೇಕ್ಯೂರಿಟಿ ಐಜಿಪಿಯಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಲೋಕಯುಕ್ತ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ.

ಇದನ್ನೂ ಓದಿ:‘ವ್ಯವಸ್ಥಿತ ಸಂಚು’! ನಾಗಮಂಗಲ ಪ್ರಕರಣಕ್ಕೆ ಚನ್ನಪಟ್ಟಣ ಬೈಎಲೆಕ್ಷನ್ ಲಿಂಕ್ ಕೊಟ್ಟ ಕುಮಾರಸ್ವಾಮಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟ ADGP; ಯಾರು ಈ ಐಪಿಎಸ್​ ಅಧಿಕಾರಿ ಚಂದ್ರಶೇಖರ್..?

https://newsfirstlive.com/wp-content/uploads/2024/09/HD-KUMARASWAMY-4.jpg

Load More