newsfirstkannada.com

ಜಾತಿ ನಿಂದನೆ​; ತನಿಶಾ ವಿರುದ್ಧ ಕೇಸ್​​.. ಬಿಗ್​ಬಾಸ್​ ಆಡಳಿತ ಮಂಡಳಿಗೆ ಪೊಲೀಸ್​ ನೋಟಿಸ್​​​

Share :

15-11-2023

    ಬಿಗ್​ಬಾಸ್​​ ಸ್ಪರ್ಧಿ ತನಿಶಾ ಮೇಲೆ ಬಂದಿರೋ ಆರೋಪವೇನು?

    ರಿಯಾಲಿಟಿ ಶೋ ಬಿಗ್​ಬಾಸ್​ನಲ್ಲಿ ಅವಹೇಳನಕಾರಿ ಪದ ಬಳಕೆ

    ಅಖಿಲ ಕರ್ನಾಟಕ ಭೋವಿ ಸಮಾಜದಿಂದ ತನಿಶಾ ವಿರುದ್ಧ ಕೇಸ್

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​​​ 10 ಶುರುವಾಗಿ ಐದು ವಾರ ಮುಕ್ತಾಯಗೊಂಡಿದೆ. ಈಗ ಒಂದಲ್ಲ ಒಂದು ವಿಚಾರಕ್ಕೆ ಬಿಗ್​ಬಾಸ್​ ಸ್ಪರ್ಧಿಗಳು ಸುದ್ದಿಯಾಗುತ್ತಿದ್ದಾರೆ. ಬಿಗ್​​ಬಾಸ್​ ಸೀಸನ್​​ 10ರ ಸ್ಪರ್ಧಿ ತನಿಶಾ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಸದ್ಯ ಈ ಬಗ್ಗೆ ಕುಂಬಳಗೋಡು ಪೊಲೀಸ್​ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.

ಬಿಗ್​ಬಾಸ್ ಸೀಸನ್​​ 10ರ ಸ್ಪರ್ಧಿಯಾಗಿರೋ ತನಿಶಾ ಕುಪ್ಪುಂಡ ಅವರು, ಭೋವಿ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಖಾಸಗಿ ವಾಹಿನಿಯೊಂದು ನಡೆಸಿಕೊಡುತ್ತಿರುವ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ದೂರು ನೀಡಲಾಗಿದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ತನಿಶಾ ಕುಪ್ಪುಂಡ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ಅನ್ನು ದಾಖಲು ಮಾಡಲಾಗಿದೆ. ಅಖಿಲ ಕರ್ನಾಟಕ ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವರು ಈ ದೂರನ್ನು ನೀಡಿದ್ದು ತಕ್ಷಣ ಅವರು ಬಿಗ್​ಬಾಸ್​ ಮನೆಯಿಂದ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಭೋವಿ ಜನಾಂಗದ ಬಗ್ಗೆ ನಿಂದನೆ.. ಬಿಗ್​​ಬಾಸ್​ ಸ್ಪರ್ಧಿ ತನಿಶಾ ವಿರುದ್ಧ ಅಟ್ರಾಸಿಟಿ ಕೇಸ್!

ಹೀಗಾಗಿ ಬಿಗ್​​ಬಾಸ್​ ಆಡಳಿತ ಮಂಡಳಿಗೆ ಕುಂಬಳಗೋಡು ಪೊಲೀಸ್​ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ. ಇಂದು ಒರಿಜಿನಲ್ ಫೋಟೋಸ್ ಕೊಡಲು ಸೂಚನೆ ನೀಡಿದ್ದಾರೆ. ಪ್ರೋಮೋ ವಿಡಿಯೋ ಜೊತೆಗೆ ಒರಿಜಿನಲ್ ವಿಡಿಯೋವನ್ನು ಇಂದು ಸಂಜೆ ಎಫ್ಎಸ್ಎಲ್​ಗೆ ಪೊಲೀಸರು ಕಳಿಸಲಿದ್ದಾರೆ. ಎಫ್ಎಸ್ಎಲ್​ನಿಂದ ವರದಿ ಬಂದ ಬಳಿಕ ತನಿಶಾ ಅವರನ್ನು ಮಾಗಡಿ ಡಿವೈಎಸ್ಪಿ ಬಾಲಕೃಷ್ಣ ನೇತೃತ್ವದಲ್ಲಿ ವಿಚಾರಣೆ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾತಿ ನಿಂದನೆ​; ತನಿಶಾ ವಿರುದ್ಧ ಕೇಸ್​​.. ಬಿಗ್​ಬಾಸ್​ ಆಡಳಿತ ಮಂಡಳಿಗೆ ಪೊಲೀಸ್​ ನೋಟಿಸ್​​​

https://newsfirstlive.com/wp-content/uploads/2023/11/bigg-boss-2023-11-15T151732.041.jpg

Load More