newsfirstkannada.com

ಮಾಧ್ಯಮ ಲೋಕದ ದಿಗ್ಗಜರಾದ ರಾಮೋಜಿ ರಾವ್, ಮದನ ಮೋಹನರಿಗೆ KUWJ ಶ್ರದ್ಧಾಂಜಲಿ

Share :

Published June 19, 2024 at 10:51pm

Update June 19, 2024 at 10:55pm

  ರಾಮೋಜಿ ರಾವ್ ಯಾವಾಗಲೂ ನಾಳೆ ಕಾಲಕ್ಕೆ ಬದುಕುತ್ತಾ ಇದ್ದರು

  ದಕ್ಷಿಣ ಭಾರತದಲ್ಲೇ ಪ್ರೊಫೆಷನಲ್ ನ್ಯೂಸ್ ಮಾಡ್ತಾ ಇದ್ದ ಧೀಮಂತ

  ಪತ್ರಿಕಾ ವೃತ್ತಿಯಲ್ಲಿ ಅವರೆಂದೂ ರಾಜಿಯಾಗದ ವ್ಯಕ್ತಿತ್ವ ಮೈಗೂಡಿಸಿದ್ದರು

ಬೆಂಗಳೂರು: ದಕ್ಷಿಣ ಭಾರತ ಕಂಡ ಮಾಧ್ಯಮ ಲೋಕದ ದಿಗ್ಗಜ, ಈನಾಡು ಸಮೂಹ ಸಂಸ್ಥೆಯ ಮುಖ್ಯಸ್ಥ, ಪದ್ಮವಿಭೂಷಣ ಪುರಸ್ಕೃತ ರಾಮೋಜಿ ರಾವ್ ಹಾಗೂ ಉತ್ತರ ಕರ್ನಾಟಕದಲ್ಲಿ ಮಾಹಿತಿ ಕಣಜವೇ ಆಗಿದ್ದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (KUWJ) ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

KUWJ ಸಭಾಂಗಣದಲ್ಲಿ ಅಗಲಿದ ಮಾಧ್ಯಮ ಲೋಕದ ದಿಗ್ಗಜರಿಗೆ ನುಡಿ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯೂಸ್ ಫಸ್ಟ್ ಎಂಡಿ & ಸಿಇಒ ಎಸ್ ರವಿ ಕುಮಾರ್, ಅವಧಿ ಸಂಪಾದಕರಾದ ಜಿ. ಎನ್. ಮೋಹನ್, ದ ಫೆಡರಲ್ ಕನ್ನಡ ಮುಖ್ಯಸ್ಥರಾದ ಮುರಳೀಧರ ಖಜಾನೆ ಅವರು ಮುಖ್ಯ ಅತಿಥಿಗಳಾಗಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿ ಇತರರು ಭಾಗಿಯಾಗಿದ್ದರು.

ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು ಅವರು, ರಾಮೋಜಿ ರಾವ್ ಕಟ್ಟಿದ ಫಿಲ್ಮ್‌ ಸಿಟಿ ಇಡೀ ಜಗತ್ತಿನ ಗಮನ ಸೆಳೆದಿತ್ತು. ಇತ್ತೀಚಿನ ತಲೆಮಾರಿಗೆ ಕೂಡ ಸಿನಿಮಾ ರಂಗಕ್ಕೆ ಕೊಡುಗೆ ಕೊಟ್ಟವರು ಅವರು. ಕನ್ನಡ ಸುದ್ದಿ ಲೋಕಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ನ್ಯೂಸ್ ಫಸ್ಟ್ ಎಂಡಿ ರವಿಕುಮಾರ್ ಅವರು ಅಲ್ಲಿಂದ ಬಂದ ಪ್ರತಿಭೆ. ರವಿ ಕುಮಾರ್ ಅವರು ಟಿವಿ9 ಅಂತಹ ದೊಡ್ಡ ಸಂಸ್ಥೆ ಕಟ್ಟಿದವರು. ನ್ಯೂಸ್ ಫಸ್ಟ್ ಚಾನೆಲ್‌ ಅನ್ನು ಕಡಿಮೆ ಅವಧಿಯಲ್ಲಿ ಕಟ್ಟಿ ಬೆಳೆಸಿದವರು. ಎಲ್ಲರೂ ನಿಬ್ಬೆರಗಾಗಿ ನ್ಯೂಸ್ ಫಸ್ಟ್ ನೋಡ್ತಾರೆ ಅನ್ನೋದು ಗಮನಿಸಬೇಕಾದ ಸಂಗತಿ ಎಂದರು.

ಅವಧಿ ಸಂಪಾದಕ ಜಿ.ಎನ್ ಮೋಹನ್ ಅವರು, ಮಾಧ್ಯಮದಲ್ಲಿ ಸಂಪಾದಕೀಯ ಸ್ವಾತಂತ್ರ್ಯ ಇಲ್ಲ ಅನ್ನೋದನ್ನ ಕೇಳ್ತೀವಿ. ಆದ್ರೆ ನನ್ನ ಅದೃಷ್ಟ ಅಂದ್ರೆ ನನಗೆ ಅದ್ಭುತ ಸಂಪಾದಕೀಯ ಸ್ವಾತಂತ್ರ್ಯ ರಾಮೋಜಿರಾವ್ ಕೊಟ್ಟಿದ್ರು. ರಾಮೋಜಿ ರಾವ್ ತುಂಬಾ ದೊಡ್ಡ ಉದ್ಯಮಿ. ಎಲ್ಲರಿಗೂ ಅವರ ಅಮ್ಮ ಮಾಡುವ ಉಪ್ಪಿನಕಾಯಿ ಇಷ್ಟ. ಯಾಕೆ ಅದೇ ಒಂದು ಮಾರ್ಕೆಟಿಂಗ್ ಆಗಬಾರದು ಅನ್ನೋ ಆಲೋಚನೆ ಶುರು ಮಾಡಿದ್ದರು. ರಾಮೋಜಿ ರಾವ್ ಯಾವಾಗಲೂ ನಾಳೆ ಕಾಲಕ್ಕೆ ಬದುಕುತ್ತಾ ಇದ್ದರು. ನಾಳೆ ಏನಾಗುತ್ತೆ ಅನ್ನೋ ಊಹಿಸುವ ಶಕ್ತಿ ಅವರಿಗಿತ್ತು.

ಇದನ್ನೂ ಓದಿ: RamojiRao: ‘ಅನ್ನದಾತ’ ಅಮರ್ ರಹೇ.. ರಾಮೋಜಿ ರಾವ್‌ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ಬೆಳಗ್ಗೆ ಓದೋಣ ಅಂದ್ರೆ ಪೇಪರ್ ಸಿಗ್ತಾ ಇರಲಿಲ್ಲ. ಅದಕ್ಕೆ ಈನಾಡು ಪತ್ರಿಕೆ ವಿಶಾಖಪಟ್ಟಣದಿಂದ ಶುರು ಮಾಡಿದ್ದರು. ಅದು ಅತ್ಯಂತ ಹೆಚ್ಚು ಪ್ರಸಾರದ ಪ್ರಾದೇಶಿಕ ಪತ್ರಿಕೆ ಅನ್ನೋ ಹೆಗ್ಗಳಿಕೆ ಇತ್ತು. ತುಂಬಾ ಚಟುವಟಿಕೆಯಿದ್ದ ಪಾದರಸದ ವ್ಯಕ್ತಿತ್ವ. ಅವರು ಇವತ್ತು ಇಲ್ಲ ಅಂತ ಗೊತ್ತಾದಾಗ ಅವರ ಜೊತೆ ಕೆಲಸ ಮಾಡಿದವರು ದೇಶಾದ್ಯಂತ ಮರುಗಿದ್ದಾರೆ ಎಂದರು.

ನ್ಯೂಸ್ ಫಸ್ಟ್ ಎಂಡಿ &CEO ಎಸ್. ರವಿಕುಮಾರ್ ಅವರು ಮಾತನಾಡಿ, ಹಠ ಛಲ ಸಾಧನೆ ಮಾಡಲೇಬೇಕು ಅನ್ನೋ ಮನಸ್ಸಿದ್ದರೆ ಅದು ರಾಮೋಜಿ ರಾವ್. ನಾನು ಅಷ್ಟು ಟೈಮ್ ಸೆನ್ಸ್ ಇಟ್ಟುಕೊಂಡು ಕೆಲಸ ಮಾಡುವವರನ್ನು ನೋಡಿಲ್ಲ. ಅವರ ಕೆಲವು ವಿಚಾರ ನಾವು ಫಾಲೋ ಮಾಡ್ತಾ ಇರೋದು ನಮಗೆ ಅನೂಕೂಲವಾಗಿದೆ ಎಂದರು.

1999ರಲ್ಲಿ ಈಟಿವಿ ತೆಲುಗು ಅಲ್ಲಿ ನಾನು ತರಬೇತಿ ತಗೆದುಕೊಂಡೆ. ದಕ್ಷಿಣ ಭಾರತದಲ್ಲೇ ಪ್ರೊಫೆಷನಲ್ ನ್ಯೂಸ್ ಮಾಡ್ತಾ ಇದ್ದರು. ಈಟೀವಿ ಅಲ್ಲಿ ರಿರ್ಪೊರ್ಟಿಂಗ್ ಪ್ರೊಡಕ್ಷನ್ ಕೆಲಸ ಕಲಿಯೋ ಆಸೆ ಇತ್ತು. ನಾನು ಕೆಲಸ ಮಾಡೋ ರೀತಿ ನೋಡಿ 2000 ಅಲ್ಲಿ ರಾಮೋಜಿ ರಾವ್ ಅವರು ಹುಡುಕಿ ಕೆಲಸ ಕೊಟ್ರು. ಪ್ರೊಡಕ್ಷನ್ ತುಂಬಾ ಇಂಟ್ರೆಸ್ಟ್ ಇತ್ತು. 5 ವರ್ಷಗಳ ಕಾಲ ಈಟಿವಿಯಲ್ಲಿ ಕೆಲಸ ಮಾಡಿದೆ.

ಪತ್ರಕರ್ತರು ಹೆಚ್ಚಾಗಿ ಪ್ರಿಂಟ್ ಮೀಡಿಯಾದಿಂದ ಬರುತ್ತಾ ಇದ್ದರು. ಅವರಿಗೆ ಟಿವಿ ಸೆಟ್ ಆಗೋಕೆ ಗುಜರಾತ್ ಗೆಲ್ಲಾ ಟ್ರೈನಿಂಗ್ ಕೊಡೋಕೆ ಸ್ಟ್ರೀಮ್‌ ಲೈನ್ ಮಾಡೋಕೆ ಅವಕಾಶ ಕೊಟ್ರು. ವಯಸ್ಸು ಮತ್ತು ಅನುಭವ ನೋಡ್ತಾ ಇರಲಿಲ್ಲ. ಕೆಲಸ ಮಾಡುವ ಸಾಮರ್ಥ್ಯ ಇದ್ಯಾ ಅಂತ ನೋಡ್ತಾ ಇದ್ದರು.

2000ದಲ್ಲಿ ಚಾನೆಲ್ ಉದ್ಘಾಟನೆ ಮಾಡೋ ಮುನ್ನ CNN ಅವ್ರು ಟ್ರೈನಿಂಗ್ ಕೊಟ್ರು. ನ್ಯೂಸ್ ಪ್ರೆಸೆಂಟ್ ಮಾಡೋದು ಹೇಳಿ ಕೊಡೋಕೆ ಸಿಎನ್ಎನ್ ಅವರನ್ನ ಕರೆಸಿದರು. ಕೆಲಸ ಕೊಟ್ರು ಕೆಲಸ ಕಲಿಸಿದ್ದರು ಜೀವನ ರೂಪಿಸಿದ್ದು ಅವರೇ. ಕೆಲಸ ಮಾಡುವವರನ್ನ ಉತ್ತೇಜನ ಕೊಡೋದಕ್ಕೆ ಬೆಸ್ಟ್ ಸ್ಟೋರಿ ಮಾಡುವವರಿಗೆ ಡೈಲಿ ಅವಾರ್ಡ್ ಕೊಡ್ತಾ ಇದ್ದರು. ಕೆಲಸ ಮಾಡೋರಿಗೆ ಸ್ಫೂರ್ತಿ ತುಂಬಲು ನೂರಾರು ಆಲೋಚನೆ ಇರ್ತಾ ಇತ್ತು.
ನಾನು ವೈಯಕ್ತಿಕವಾಗಿ ಮಾತನಾಡುವಾಗ ಅವರು ಒಂದು ಮಾತು ಅನ್ನೋರು ಜನ ನಮ್ಮ ನ್ಯೂಸ್ ನೋಡಿ ಪದೇ ಪದೇ ವಾಪಸ್ ಬರಬೇಕು. ಈ ಲಾಯಲ್ ಅಡಿಯನ್ಸ್ ಪರಿಕಲ್ಪನೆ ಆ ಕಾಲಕ್ಕೆ ರಾಮೋಜಿರಾವ್ ಆಲೋಚಿಸಿದ್ರು. ನ್ಯೂಸ್ ಹೇಗೆ ವಿಶ್ವಾರ್ಹತೆ ಇರಬೇಕು ಅನ್ನೋದನ್ನು ಹೇಳ್ತಾ ಇದ್ರು. ರಾಮೋಜಿ ರಾವ್ ಇಡೀ ಇಂಡಿಯಾಗೆ ಮಿಡಿಯಾದಲ್ಲಿ ಭಾರತ ರತ್ನ ಅಂದ್ರೆ ಅವರು. ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಅಂತ ಮನವಿ ಮಾಡಿ ಕೋಳ್ತೀನಿ ಎಂದು ರವಿಕುಮಾರ್ ಅವರು ಹೇಳಿದರು.

ಇದನ್ನೂ ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ 

ಫೆಡರಲ್ ಕನ್ನಡ ವೆಬ್ ಸೈಟ್ ಮುಖ್ಯಸ್ಥ ಮುರಳೀಧರ ಖಜಾನೆ ಮಾತನಾಡಿ ಮತ್ತಿಹಳ್ಳಿ ಮದನ ಮೋಹನ ಅವರು ವೃತ್ತಿಯಲ್ಲಿ ಸದಾ ಬದ್ಧತೆಯನ್ನು ಇಟ್ಟುಕೊಂಡು ಸುದ್ದಿಮನೆಯಲ್ಲಿ ತಮ್ಮದೇ ಆದ ಪ್ರಭುತ್ವ ಸಾಧಿಸಿ, ಒಂದು ತಲೆಮಾರಿಗೆ ಅವರು ಮೇಲ್ಪಂಕ್ತಿ ಹಾಕಿಕೊಟ್ಟವರು ಎಂದು ಶ್ಲಾಘಿಸಿದರು. ಸರಳ ಇಂಗ್ಲೀಷ್ ಭಾಷೆಯ ಮೂಲಕ ಹಿಂದೂ ಪತ್ರಿಕೆಯಲ್ಲಿ ವರದಿಗಾರರಾಗಿ ನೈಪುಣ್ಯತೆಯನ್ನು ಸಾಧಿಸಿದವರು ಪತ್ರಿಕಾ ವೃತ್ತಿಯಲ್ಲಿ ಅವರೆಂದೂ ರಾಜಿಯಾಗದ ವ್ಯಕ್ತಿತ್ವ ಮೈಗೂಡಿಸಿದ್ದರು ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಧ್ಯಮ ಲೋಕದ ದಿಗ್ಗಜರಾದ ರಾಮೋಜಿ ರಾವ್, ಮದನ ಮೋಹನರಿಗೆ KUWJ ಶ್ರದ್ಧಾಂಜಲಿ

https://newsfirstlive.com/wp-content/uploads/2024/06/Ramoji-Rao-Madan-mohan-1.jpg

Load More