ಹೈನೆಕೆನ್ ಒಡೆತನದ ಯುನೈಟೆಡ್ ಬ್ರೆವರಿಸ್ ಸಂಸ್ಥೆಯಲ್ಲಿ ಘಟನೆ
ನಗರದ ಯುಬಿ ಸಿಟಿಯಲ್ಲಿರುವ ಯುನೈಟೆಡ್ ಬ್ರೆವರಿಸ್ ಕಂಪನಿ
ಮತ್ತೊಬ್ಬ ಮಹಿಳಾ ಚಾರ್ಟೆಡ್ ಅಕೌಂಟೆಂಟ್ಗೆ ಕಿರುಕುಳ ಆರೋಪ
ಬೆಂಗಳೂರು: ಸಿಲಿಕಾನ್ ಸಿಟಿ ಮಹಿಳೆಯರ ಸುರಕ್ಷತೆಗಾಗಿ ಎಷ್ಟೇ ಕ್ರಮ ತೆಗೆದುಕೊಂಡರು ಕಿರುಕುಳಕ್ಕೆ ಮಾತ್ರ ಬ್ರೇಕ್ ಬೀಳ್ತಿಲ್ಲ. ಅದರಲ್ಲೂ ಈ ಮಾಯನಗರಿಯಲ್ಲಿ ಯಾವ ಜಾಗವೂ ಹೆಣ್ಣು ಮಕ್ಕಳಿಗೆ ಸೇಫ್ ಅಲ್ಲ ಅನ್ನೋದು ಪ್ರೂವ್ ಆಗ್ತಾನೆ ಇದೆ. ಇದಕ್ಕೆ ಈ ಎರಡು ಪ್ರಕರಣಗಳೇ ಸಾಕ್ಷಿ.
ಚಾರ್ಟೆಡ್ ಅಕೌಂಟೆಂಟ್ನಿಂದ ಮತ್ತೊಬ್ಬ ಸಿಎಗೆ ಕಿರುಕುಳ
ಇದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ನಡೆದ ಹೈಪ್ರೊಫೈಲ್ ಲೈಂಗಿಕ ಕಿರುಕುಳ ಪ್ರಕರಣ. ಚಾರ್ಟೆಡ್ ಅಕೌಂಟೆಂಟ್ನಿಂದ ಮತ್ತೊಬ್ಬ ಸಿಎಗೆ ಕಿರುಕುಳ ನೀಡಿರೋ ಕೇಸ್. ವಿಚತ್ರ ಅಂದ್ರೆ, ಕಂಪನಿಗಳಲ್ಲಿ ಇಂಥಾ ಘಟನೆ ನಡೆದರೆ ನ್ಯಾಯ ಕೊಡಿಸಬೇಕಾಗಿದ್ದ ಐಸಿಸಿಯಿಂದಲೇ ಅನ್ಯಾಯವಾಗಿರೋ ಪ್ರಕರಣವಿದು. ಆದ್ರೂ, ಹೋರಾಟ ನಿಲ್ಲಿಸದೆ ಮಹಿಳೆ ನ್ಯಾಯ ಪಡೆದೇ ತೀರಿದ್ದಾಳೆ.
ಮಹಿಳೆ ಮೇಲೆ ಕಿರುಕುಳ ನೀಡಿರೋ ಘಟನೆ ನಡೆದಿರೋದು ಹೈನೆಕೆನ್ ಒಡೆತನದ ಯುನೈಟೆಡ್ ಬ್ರೆವರಿಸ್ ಸಂಸ್ಥೆಯಲ್ಲಿ. ನಗರದ ಯುಬಿ ಸಿಟಿಯಲ್ಲಿರುವ ಉದ್ಯಮಿ ವಿಜಯ್ ಮಲ್ಯ ಒಡೆತನದ ಮಾಜಿ ಕಂಪನಿ ಯುನೈಟೆಡ್ ಬ್ರೆವರಿಸ್ ಕಂಪನಿಯ ಟ್ಯಾಕ್ಸೇಷನ್ ಹೆಡ್ ಸುಜನ್ ದೇವರಾಜ್ ವಿರುದ್ಧ ಕಿರುಕುಳದ ದೂರು ದಾಖಲಾಗಿದೆ.
ಕಿರುಕುಳ ನೀಡಿರೋ ಬಗ್ಗೆ ಮತ್ತೊಬ್ಬ ಮಹಿಳಾ ಚಾರ್ಟೆಡ್ ಅಕೌಂಟೆಂಟ್ ಯುನೈಟೆಡ್ ಬ್ರೆವರಿಸ್ನ ಐಸಿಸಿಗೆ ದೂರು ನೀಡಿದ್ದರು. POSH ಆ್ಯಕ್ಟ್ ಅಡಿಯಲ್ಲಿ ತನಗಾದ ಕಿರುಕುಳದ ಬಗ್ಗೆ ಇಂಟರ್ನಲ್ ಕಂಪ್ಲೇಂಟ್ ಕಮಿಟಿಗೆ ದೂರು ನೀಡಿದ್ದರು. ಆದ್ರೆ, ನ್ಯಾಯ ಕೊಡ್ಬೇಕಾಗಿದ್ದ ಐಸಿಸಿ ಯಾವುದೇ ವಿಚಾರಣೆ ನಡೆಸದೇ ಸಂತ್ರಸ್ತಗೆ ಮತ್ತೆ ದೂರು ಕೊಡಬಾರದು ಅಂತ ವಾರ್ನಿಂಗ್ ಕೊಟ್ಟಿದ್ದಷ್ಟೇ ಅಲ್ಲ, ಸಂತ್ರಸ್ತೆಯನ್ನ ಕಡ್ಡಾಯ ರಜೆ ಮೇಲೆ ಕಳಿಸಿ, ಸುಜನ್ಗೆ ಕ್ಲೀನ್ ಚಿಟ್ ನೀಡಿತ್ತು. ಅಂದ್ಹಾಗೆ ಇಂಥಾ ಘಟನೆಗಳ ವಿಚಾರಣೆಗಾಗಿಯೇ ಕಂಪನಿಗಳಲ್ಲಿ ಐಸಿಸಿ ಕಮಿಟಿಯನ್ನ ರಚಿಸಲಾಗಿರುತ್ತೆ. ಆ ಕಮಿಟಿ ಕೂಲಂಕುಷವಾಗಿ ವಿಚಾರಣೆ ನಡೆಸಿ, ತಪ್ಪಿತಸ್ಥರನ್ನ ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಬೇಕು. ಆದ್ರೆ, ಇಲ್ಲಿ ಐಸಿಸಿ ತನ್ನ ಜವಾಬ್ದಾರಿ ಮರೆತಿತ್ತು. ಯುನೈಟೆಡ್ ಬ್ರೆವರಿಸ್ ನಡೆ ಪ್ರಶ್ನಿಸಿ ಸಂತ್ರಸ್ತ ಮಹಿಳಾ ಅಧಿಕಾರಿ ಲೇಬರ್ ಕೋರ್ಟ್ನ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಜನ್ ತಪ್ಪಿತಸ್ಥ ಅಂತ ಆದೇಶ ನೀಡಿದ್ದ ಕೋರ್ಟ್, ಕಂಪನಿಯ POSH ಕಮಿಟಿ ವಿರುದ್ಧವೂ ಅಸಮಾಧಾನ ಹೊರಹಾಕಿತ್ತು. ಮಹಿಳೆಯರ ರಕ್ಷಣೆ ಮಾಡೋ ಬದಲು ಆರೋಪಿ ರಕ್ಷಿಸಿದ್ದಕ್ಕೆ ಗರಂ ಆಗಿತ್ತು. ಅಲ್ಲದೆ, ಮಹಿಳೆಯರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಕಮಿಷನರ್ ಆದೇಶ ನೀಡಿದ್ದಾರ. ಜೊತೆಗೆ ICC ನೀಡಿದ್ದ ಕ್ಲೀನ್ ಚೀಟ್, ಕೊಟ್ಟಿದ್ದ ವಾರ್ನಿಂಗ್ ನೊಟೀಸ್ ರದ್ದು ಮಾಡಿ ಲೇಬರ್ ಕಮಿಷನರ್ ಡಾ.ಜಿ. ಮುಂಜುನಾಥ್ರಿಂದ ಮಹತ್ವದ ಆದೇಶ ಹೊರಡಿಸಿದ್ದಾರೆ. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಕೊನೆಗೂ ಮಹಿಳೆ ಗೆದ್ದಿದ್ದಾಳೆ.
ಎಒ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಪ್ರೈವೇಟ್ ಕಂಪನಿ ಬಿಡಿ. ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವೂ ಮಹಿಳೆಯರಿಗೆ ಸೇಫ್ ಇಲ್ವಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ. ಕಾರಣ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ಈ ಎಫ್ಐಆರ್. ಸರ್ಕಾರಿ ಅಭಿಯೋಜನಾ ಅಧಿಕಾರಿ ವಿರುದ್ಧ ಲೈಂಗಿಕ ಆರೋಪ ಕೇಳಿ ಬಂದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಕೂಡ ದಾಖಲಾಗಿದೆ. ಅಭಿಯೋಜನಾ ಇಲಾಖೆಯ ಎಒ ಆಗಿರೋ ನಾರಾಯಣಸ್ವಾಮಿ, ಕಚೇರಿಯಲ್ಲಿ ಕೆಲಸ ಮಾಡ್ತಿರೋ ಮಹಿಳೆಗೆ ಕಳೆದ 6 ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡ್ತಿರೋ ಬಗ್ಗೆ ಐಪಿಸಿ 354(A) ಹಾಗೂ 506 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ರೂ ಪ್ರಯೋಜನವಾಗಿಲ್ಲ. ಸದ್ಯ, ನಾರಾಯಣಸ್ವಾಮಿಗಾಗಿ ವಿಧಾನಸೌಧ ಠಾಣೆ ಪೊಲೀಸರು ಹುಡುಕಾಡ್ತಿದ್ದಾರೆ. ಒಟ್ಟಿನಲ್ಲಿ ಏನೇ ಕ್ರಮ ತಗೊಂಡರು ಎಷ್ಟೇ ಎಚ್ಚರ ವಹಿಸಿದ್ರೂ ಮಹಿಳೆಯರ ಮೇಲಿನ ಕಿರುಕುಳ ಮಾತ್ರ ತಪ್ತಿಲ್ಲ. ಅನ್ಯಾಯದ ವಿರುದ್ಧ ಈ ಹೆಣ್ಮಕ್ಕಳ ಹಾಗೇ ಎಲ್ಲರೂ ದನಿ ಎತ್ತಿದ್ರೆ ಮಾತ್ರ ಇಂಥಾ ಅನ್ಯಾಯಕ್ಕೆ ಬ್ರೇಕ್ ಹಾಕ್ಬಹುದು ಅನಿಸುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ