newsfirstkannada.com

×

IT Notice: ತಿಂಗಳಿಗೆ 10 ಸಾವಿರ ಗಳಿಸುವ ದಿನಗೂಲಿ ಕಾರ್ಮಿಕನಿಗೆ ₹2 ಕೋಟಿ IT ನೋಟಿಸ್​!

Share :

Published September 27, 2024 at 4:01pm

Update September 27, 2024 at 4:21pm

    ತಿಂಗಳಿಗೆ 10 ಸಾವಿರ ರೂಪಾಯಿ ಗಳಿಸುವ ಕಾರ್ಮಿಕನಿಗೆ ಐಟಿ ಶಾಕ್​

    2 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟಲು ನೋಟಿಸ್ ಕಳಿಸಿದ ಐಟಿ

    ಜೀವಮಾನದಲ್ಲೇ ಅಷ್ಟು ದುಡ್ಡು ಕಾಣದವನಿಗೆ ನೋಟಿಸ್ ಕಳಿಸಿದ ಐಟಿ

ನಿಮ್ಮ ಗಳಿಕೆಯೇ ತಿಂಗಳಿಗೆ ಹತ್ತೋ, ಇಪ್ಪತ್ತೋ ಸಾವಿರ ಇರುತ್ತೆ. ಇಂತಹ ಸಮಯದಲ್ಲಿ ನಿಮಗೆ ಆದಾಯ ತೆರಿಗೆ ಇಲಾಖೆಯವರು 2 ಕೋಟಿ ರೂಪಾಯಿ ಇನ್ಕಮ್ ಟ್ಯಾಕ್ಸ್ ಕಟ್ಟಿ ಅಂತ ನೋಟಿಸ್​ ನೀಡಿದರೆ ನಿಮಗೆ ಆಗುವ ಶಾಕ್ ಎಂತಹದು. ಅಂತಹದೇ ಶಾಕ್​ ಈ ಬಿಹಾರ ರಾಜ್ಯದ ಗಯಾ ಜಿಲ್ಲೆಯ ಒಬ್ಬ ಕೂಲಿ ಕಾರ್ಮಿಕನಿಗೆ ಆಗಿದೆ.

ಗಯಾ ಜಿಲ್ಲೆಯ ಕೋಟವಾಲಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನೆಲೆಸುವ ಕೂಲಿ ಕಾರ್ಮಿಕ ರಾಜೀವ್ ಕುಮಾರ್ ವರ್ಮಾ ಮನೆಗೆ ಇತ್ತೀಚೆಗೆ ಒಂದು ನೋಟಿಸ್ ಬಂದಿದೆ. ಆ ನೋಟಿಸ್ ಓದಿ ರಾಜೀವ್​ ಅವರ ಜಂಘಾಬಲವೇ ಉಡುಗಿ ಹೋಗಿದೆ. ಆದಾಯ ತೆರಿಗೆ ಇಲಾಖೆ ಕಳಿಸಿದ ನೋಟಿಸ್​ನಲ್ಲಿ ಸಾವಿರ ಅಲ್ಲ, ಲಕ್ಷ ಅಲ್ಲ ಬರೋಬ್ಬರಿ 2 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟಬೇಕು. ಕೂಡಲೇ 67 ಲಕ್ಷ ರೂಪಾಯಿ ದಂಡ ತುಂಬಿ ನಂತರ ಉಳಿದ ಹಣ ಕಟ್ಟುವಂತೆ ಬರೆದಿತ್ತು. ಇದರಿಂದ ಬೆಚ್ಚಿ ಬಿದ್ದ ರಾಜೀವ್, ನನ್ನ ಗಳಿಕೆ ಇರುವುದೇ ತಿಂಗಳಿಗೆ 10 ಸಾವಿರ ಇನ್ನು 2 ಕೋಟಿ ರೂಪಾಯಿ ಆದಾಯ ತೆರಿಗೆ ಎಲ್ಲಿಂದ ಕಟ್ಟಲಿ ಎಂದುಕೊಂಡು ಕೂಡಲೇ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಧಾವಿಸಿದ್ದಾರೆ. ಆದ ಯಡವಟ್ಟಿನ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: SBIನಲ್ಲಿ 1,500ಕ್ಕೂ ಹೆಚ್ಚು ಜಾಬ್​ಗಳಿಗೆ ಆಹ್ವಾನ.. ಯಾರು ಯಾರು ಅಪ್ಲೇ ಮಾಡಬಹುದು?

ಈ ಘಟನೆ ನಡೆದು ಈಗಾಗಲೇ 4 ದಿನವೇ ಕಳೆದಿದೆ. ನಾಲ್ಕು ದಿನದಿಂದ ಐಟಿ ಅಧಿಕಾರಿಗಳನ್ನು ಭೇಟಿ ಮಾಡಿರುವ ರಾಜೀವ್, ಇದು ನನಗೆ ಹೇಗೆ ಬಂತು. ನನ್ನ ಗಳಿಕೆ ಇರುವುದೇ ತಿಂಗಳಿಗೆ 10 ಸಾವಿರ ರೂಪಾಯಿ ಎಂದು ಗೋಗರೆದಿದ್ದಾರೆ. ಆದ್ರೆ ಯಡವಟ್ಟನ್ನು ಸರಿ ಮಾಡಲು ಇನ್ನೂ ಯಾವ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ರಾಜೀವ ಅಳುವನ್ನು ತೋಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಾರ್ಪೋರೇಷನ್ ಬ್ಯಾಂಕ್​ನಲ್ಲಿ 2 ಲಕ್ಷ ರೂಪಾಯಿ ಫಿಕ್ಸ್ ಡಿಪಾಸಿಟ್ ಇಟ್ಟಿದ್ದಷ್ಟೇ ನನ್ನ ಬದುಕಲ್ಲಿ ನಾನು ಕಂಡ ಅತಿಹೆಚ್ಚು ದುಡ್ಡು. ಎರಡು ದಿನದಲ್ಲಿ 67 ಲಕ್ಷ ರೂಪಾಯಿ ದಂಡ ಕಟ್ಟಿ ಎಂದು ಆದೇಶ ನೀಡಿದ್ದಾರೆ. ನನ್ನ ಜೀವಮಾನದಲ್ಲಿಯೇ ಅಷ್ಟು ದುಡ್ಡು ನಾನು ನೋಡಿಲ್ಲ. ಎಲ್ಲಿಂದ ತರಲಿ ಎಂದು ಐಟಿ ಅಧಿಕಾರಗಳನ್ನು ಭೇಟಿ ಮಾಡಿ ಕೇಳಿದ್ದಾರೆ.

ಇದನ್ನೂ ಓದಿ: ಸಾಕ್ಷರತೆ ಹೆಚ್ಚಿದ್ದರೂ ಕೇರಳದಲ್ಲಿ ನಿರುದ್ಯೋಗ ಪ್ರಮಾಣ ಅಧಿಕ.. ಕರ್ನಾಟಕದಲ್ಲಿ ಎಷ್ಟಿದೆ..?

ಸದ್ಯ ಒಂದು ತಕರಾರು ಅರ್ಜಿ ಬರೆದುಕೊಡುವಂತೆ ಐಟಿ ಇಲಾಖೆ ರಾಜೀವ್​ಗೆ ಹೇಳಿದೆ. ತಾಂತ್ರಿಕ ಸಮಸ್ಯೆಗಳಿಂದ ಈ ರೀತಿಯ ಯಡವಟ್ಟು ಆಗಿರಬೇಕು. ನಾವು ಕೂಡಲೇ ಅದರ ಬಗ್ಗೆ ಕ್ರಮ ಕೈಗೊಳ್ಳುವುದಾಗ ಭರವಸೆ ನೀಡಿ ನಾಲ್ಕು ದಿನಗಳೇ ಕಳೆದಿವೆ. ಆದ್ರೆ ಆದ ಪ್ರಮಾದ ಇನ್ನೂ ಹಾಗೆ ಕುಳಿತಿದೆ. ಅದು ಪರಿಹಾರವಾದ ಬಗ್ಗೆ ಇನ್ನೂ ಯಾವುದೇ ಸೂಚನೆಯನ್ನು ಅಧಿಕಾರಿಗಳು ರಾಜೀವ್​ಗೆ ನೀಡಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IT Notice: ತಿಂಗಳಿಗೆ 10 ಸಾವಿರ ಗಳಿಸುವ ದಿನಗೂಲಿ ಕಾರ್ಮಿಕನಿಗೆ ₹2 ಕೋಟಿ IT ನೋಟಿಸ್​!

https://newsfirstlive.com/wp-content/uploads/2024/09/IT-NOTICE-1.jpg

Load More