newsfirstkannada.com

Breaking: ಕಂದಕಕ್ಕೆ ಉರುಳಿ ಬಿದ್ದ ಭಾರತೀಯ ಸೇನಾ ವಾಹನ; 7 ಯೋಧರು ಹುತಾತ್ಮ

Share :

19-08-2023

    ಭಾರತೀಯ ಸೇನೆಯ ಏಳು ಯೋಧರು ಅಪಘಾತದಲ್ಲಿ ಸಾವು

    ಲಡಾಖ್​​ನ ಕಯಾರಿ ಟೌನ್ ಬಳಿ ಕಂದಕಕ್ಕೆ ಬಿದ್ದ ಸೇನಾ ವಾಹನ

    ಅಪಘಾತದ ಬಗ್ಗೆ ಮಾಹಿತಿ ನೀಡಿದ ಭಾರತದ ರಕ್ಷಣಾ ಇಲಾಖೆ

ಲೇಹ್: ಭಾರತೀಯ ಸೇನೆಯ ವಾಹನ ಕಂದಕಕ್ಕೆ ಉರುಳಿ ಬಿದ್ದಿರೋ ಘಟನೆ ಲಡಾಖ್​ನ ಕಯಾರಿ ಟೌನ್ ಬಳಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಏಳು ಸೈನಿಕರು ಮೃತಪಟ್ಟಿದ್ದಾರೆ ಎಂದು ಭಾರತದ ರಕ್ಷಣಾ ಇಲಾಖೆಯಿಂದ ಮಾಹಿತಿ ಬಂದಿದೆ.

ಲಡಾಖ್​ನ ಕಯಾರಿ ಟೌನ್ ಬಳಿ ಹೋಗುತ್ತಿದ್ದಾಗ ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದಿದೆ. ಇನ್ನು ಅದೇ ವಾಹನದಲ್ಲಿದ್ದ ಕೆಲ ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಈ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಕಂದಕಕ್ಕೆ ಉರುಳಿ ಬಿದ್ದ ಭಾರತೀಯ ಸೇನಾ ವಾಹನ; 7 ಯೋಧರು ಹುತಾತ್ಮ

https://newsfirstlive.com/wp-content/uploads/2023/08/ladakh.jpg

Load More