newsfirstkannada.com

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ ಅಜ್ಜಿ ಇನ್ನಿಲ್ಲ

Share :

21-11-2023

  ನಿನ್ನ ಅಜ್ಜಿ ಇಂದಿರಾ ಗಾಂಧಿಯಿಂದ ಸಿಕ್ಕ ಜಮೀನಿನಲ್ಲಿ ಬೆಳೆದ ಸೌತೆಕಾಯಿ

  ಸೌತೆಕಾಯಿ ನೀಡಿ ಸಂತೈಸಿದ ಚಿಕ್ಕನಾಯಕನಹಳ್ಳಿ ಅಜ್ಜಿಗೆ ಸನ್ಮಾನ, ಗೌರವ

  2022ರ ಅಕ್ಟೋಬರ್‌ 9ರಂದು ಚಿಕ್ಕನಾಯಕನಹಳ್ಳಿಗೆ ಬಂದಿದ್ದ ರಾಹುಲ್

ತುಮಕೂರು: ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನರಾಗಿದ್ದಾರೆ. ಚಿಕ್ಕನಾಯಕನಹಳ್ಳಿಯ ಶಾರದಮ್ಮ ಅವರಿಗೆ 78 ವರ್ಷ ವಯಸ್ಸಾಗಿತ್ತು.

2022ರ ಅಕ್ಟೋಬರ್‌ 9ರಂದು ಚಿಕ್ಕನಾಯಕನಹಳ್ಳಿಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಂದಿತ್ತು. ಈ ವೇಳೆ ಫುಟ್‌ಪಾತ್‌ನಲ್ಲಿ ಶಾರದಮ್ಮ ಸೌತೆಕಾಯಿ ಹಿಡಿದು ನಿಂತಿದ್ದರು. ಇದನ್ನು ನೋಡಿದ ರಾಹುಲ್ ಗಾಂಧಿ ಅವರು ಶಾರದಮ್ಮ ಅವರ ಬಳಿ ಹೋಗಿ ಸೌತೆಕಾಯಿ ಸ್ವೀಕರಿಸಿದ್ದರು.

ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ನೀಡಿ ಸಂತೈಸಿದ ಶಾರದಮ್ಮ, ಇದು ನಿನ್ನ ಅಜ್ಜಿ ಇಂದಿರಾ ಗಾಂಧಿಯಿಂದ ಸಿಕ್ಕ ಜಮೀನಿನಲ್ಲಿ ಬೆಳೆದಿದ್ದು. ನಿನಗಾಗಿ ತಂದಿದ್ದೇನೆ ಎಂದು ಹೇಳಿದ್ದರು. ಇಂದಿರಾಗಾಂಧಿಯನ್ನು ಶಾರದಮ್ಮ ಹೊಗಳಿದ್ದು, ರಾಹುಲ್ ಗಾಂಧಿ ಅವರಿಗೆ ಬಹಳ ಇಷ್ಟವಾಗಿತ್ತು. ಭಾರತ ಜೋಡೋ ವೇಳೆ ಸೌತೆಕಾಯಿ ನೀಡಿ ದಣಿದ ರಾಹುಲ್ ಗಾಂಧಿಗೆ ಶಾರದಮ್ಮ ಸಂತೈಸಿದ್ದರು.

ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ ಅಜ್ಜಿಗೆ ಕಾಂಗ್ರೆಸ್ ನಾಯಕರು ಸನ್ಮಾನ ಕೂಡ ಮಾಡಿದ್ದರು. 78 ವರ್ಷದ ಚಿಕ್ಕನಾಯಕನಹಳ್ಳಿಯ ಶಾರದಮ್ಮ ಅವರು ವಯೋ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ ಅಜ್ಜಿ ಇನ್ನಿಲ್ಲ

https://newsfirstlive.com/wp-content/uploads/2023/11/Tumkur-Rahul-Gandhi.jpg

Load More