newsfirstkannada.com

12 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್​​ ಜೀವನಕ್ಕೆ ಗುಡ್​​ ಬೈ ಹೇಳಿದ ಖ್ಯಾತ ಕ್ರಿಕೆಟರ್​!

Share :

23-07-2023

    ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ ಶ್ರೀಲಂಕಾ ಸ್ಟಾರ್ ಪ್ಲೇಯರ್​​​

    ಶ್ರೀಲಂಕಾ ತಂಡದ ಸ್ಟಾರ್​ ಬ್ಯಾಟರ್​​​​ ಲಾಹಿರು ತಿರಿಮನ್ನೆ ನಿವೃತ್ತಿ ಘೋಷಣೆ..!

    ನನ್ನ ಸಾಧನೆ ಮಾಡಲು ಸಹಾಯ ಮಾಡಿದ ಎಲ್ಲರಿಗೂ ಥ್ಯಾಂಕ್ಸ್​ ಎಂದ ಲಾಹಿರು

ಕೊಲಂಬೋ: ತನ್ನ 12 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್​​ ವೃತ್ತಿ ಜೀವನಕ್ಕೆ ಶ್ರೀಲಂಕಾ ತಂಡದ ಸ್ಟಾರ್​ ಬ್ಯಾಟ್ಸ್​​ಮನ್​​ ಲಾಹಿರು ತಿರಿಮನ್ನೆ ನಿವೃತ್ತಿ ಘೋಷಿಸಿದ್ದಾರೆ.

ಈ ಸಂಬಂಧ ತನ್ನ ಫೇಸ್​​ಬುಕ್​​ನಲ್ಲಿ ಪೋಸ್ಟ್​ ಮಾಡಿರುವ ಲಾಹಿರು ತಿರಿಮನ್ನೆ, ಒಬ್ಬ ಆಟಗಾರನಾಗಿ ದೇಶಕ್ಕೆ ನನ್ನ ಕೈಯಲ್ಲಾದ ಕೊಡುಗೆ ನೀಡಿದ್ದೇನೆ. ಎಲ್ಲಾ ಪಂದ್ಯಗಳಲ್ಲೂ ತನ್ನ ತಂಡವನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದರು.

ನಿವೃತ್ತಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿತ್ತು. ನನಗೆ ಇಷ್ಟವಿಲ್ಲದಿದ್ರೂ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಾಧನೆ ಹಾದಿಯಲ್ಲಿ ನನಗೆ ಸಹಾಯ ಮಾಡಿದ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಸದಸ್ಯರು, ತರಬೇತುದಾರರು, ತಂಡದ ಆಟಗಾರರು ಮತ್ತು ಸಿಬ್ಬಂದಿಗೆ ಥ್ಯಾಂಕ್ಸ್​​ ಎಂದಿದ್ದಾರೆ.

ಲಾಹಿರು ತಿರಿಮನ್ನೆ ವೃತ್ತಿ ಜೀವನ ಹೀಗಿದೆ..!

ಲಾಹಿರು ತಿರಿಮನ್ನೆ ಅವರಿಗೆ 33 ವರ್ಷ. ಇದುವರೆಗೂ 44 ಟೆಸ್ಟ್‌, 127 ಏಕದಿನ, 26 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಕಳೆದ ವರ್ಷ ಮಾರ್ಚ್​​ ತಿಂಗಳಲ್ಲಿ ಬೆಂಗಳೂರಲ್ಲಿ ನಡೆದ ಟೀಂ ಇಂಡಿಯಾ ವಿರುದ್ಧದ ಕೊನೇ ಟೆಸ್ಟ್​ ಪಂದ್ಯದಲ್ಲಿ ಲಾಹಿರು ತಿರಿಮನ್ನೆ ಕಾಣಿಸಿಕೊಂಡಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

12 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್​​ ಜೀವನಕ್ಕೆ ಗುಡ್​​ ಬೈ ಹೇಳಿದ ಖ್ಯಾತ ಕ್ರಿಕೆಟರ್​!

https://newsfirstlive.com/wp-content/uploads/2023/07/Lahiru.jpg

Load More