newsfirstkannada.com

ಶಕುಂತಲಾ ದೇವಿಗೆ ಬಿಗ್​ ಶಾಕ್​​; ಕೊನೆಗೂ ಅಸಲಿ ಬಣ್ಣ ತೋರಿಸಿದ ಶ್ವೇತಾ..!

Share :

21-07-2023

    ಶ್ವೇತಾ ಕೊಡುವ ಶಾಕ್ ತಡ್ಕೋತಾಳಾ ಯಜಮಾನಿ ಶಕುಂತಲಾ ದೇವಿ?

    ಶಕುಂತಲಾ ದೇವಿಗೆ ಇನ್ನೂ ಶ್ವೇತಾಳ ಮೋಸದ ಜಾಲ ನಂಬಲಾಗ್ತಿಲ್ಲ

    ಶಕುಂತಲಾ ದೇವಿಯ ಅಷ್ಟೂ ಆಸ್ತಿ ಶ್ವೇತಾಳ ಕಪಿಮುಷ್ಟಿಯಲ್ಲಿ!

ಕಿರುತೆರೆಯ ಲೋಕದಲ್ಲಿ ಟ್ವಿಸ್ಟ್​​​ಗೆ ಅಂತಲೇ ಹೆಸರಾಗಿರೋ ಧಾರಾವಾಹಿ ಅಂದ್ರೆ ಅದು ಲಕ್ಷಣ. ಈ ಲಕ್ಷಣ ಸೀರಿಯಲ್​ನಲ್ಲಿ ಮಾತ್ರ ಯಾರು ಸಹ ಉಹಿಸದ ಟ್ವಿಸ್ಟ್​​ಗಳನ್ನ ನೀಡುವಲ್ಲಿ ಮುಂದು. ಸದ್ಯ ಲಕ್ಷಣ ಸೀರಿಯಲ್​​ ಮಾತ್ರ ಟಾಪ್ ರೇಟೆಡ್ ಆಗಿ ನಿಂತಿದೆ. ಇದೀಗ ಮತ್ತೊಂದು ಕ್ಲಾಸಿಕ್ ಟ್ವಿಸ್ಟ್ ನೀಡಲು ಸಜ್ಜಾಗಿದೆ ಲಕ್ಷಣ ಧಾರಾವಾಹಿ.

ಸದ್ಯ ಧಾರಾವಾಹಿಯಲ್ಲಿ ಶ್ವೇತಾಳ ಮೋಸದ ಆಟ ಶಕುಂತಲಾಗೆ ಬಿಟ್ಟು ಮತ್ತೆಲ್ಲರಿಗೂ ಕೂಡ ಬಯಲಾಗಿದೆ. ಆದರೆ ಶಕುಂತಲ ಮಾತ್ರ ಅವಳ ಮೋಸದ ಪರಿವಿಲ್ಲದೆ ಶ್ವೇತಾಳನ್ನ ತಲೆ ಮೇಲೆ ಇಟ್ಟು ತಿರುಗುತ್ತಾ ಇದ್ದಾರೆ. ಯಾರು ಎಷ್ಟೇ ಹೇಳಿದರು ಕೂಡ ಶ್ವೇತಳಾ ನಾಟಕಕ್ಕೆ ಮಣಿದು ಬಿಟ್ಟಿದ್ದಾಳೆ ಮನೆಯ ಯಜಮಾನಿ ಶಕುಂತಲ. ಅವಳ ನಂಬಿಕೆಗೆ ಸೋತು ಶಕುಂತಲ ತನ್ನೆಲ್ಲಾ ಮನೆಯ ಆಸ್ತಿಯ ಜವಬ್ದಾರಿಯನ್ನ ಶ್ವೇತಾಗೆ ನೀಡಿದ್ದು ವಿಪರ್ಯಾಸ. ಆದ್ರೆ ಶ್ವೇತಾ ಮಾತ್ರ ಈ ನಂಬಿಕೆ ವಿಶ್ವಾಸವನ್ನೆಲ್ಲಾ ತನಗೆ ಹೇಗೆ ಬೇಕೊ ಹಾಗೆ ತಿರುಗಿಸಿ ಎಲ್ಲಾ ಆಸ್ತಿಯನ್ನ ಕಬಳಿಸಿ ಬಿಟ್ಟಿದ್ದಾಳೆ. ಮನೆಯ ಕೆಲಸದವರನ್ನೆಲ್ಲಾ ಆಚೆ ಹಾಕಿ ಸದ್ಯ ಮನೆಯ ರಾಣಿಯಾಗಿ ಮೆರಿತಿದ್ದಾಳೆ.

ಈಗ ಶಕುಂತಲ ನಂಬಿಕೆ ವಿಶ್ವಾಸಕ್ಕೆ ಕೊಳ್ಳಿ ಪೆಟ್ಟು ಬಿದ್ದಿದೆ. ಇದನ್ನೆಲ್ಲಾ ಕಣ್ಣಾರೆ ಕಂಡ ಶಕುಂತಲಾಗೆ ಭೂಮಿಯೇ ಕುಸಿದಂತಾಗಿದೆ ಶ್ವೇತಾಳ ಬಣ್ಣ ಬಯಲಾಗ್ತಿದ್ದಂತೆ ಉಸಿರು ಕಟ್ಟಿ ನಿಂತಿದ್ದಾಳೆ ಶಕುಂತಲ. ಇಡೀ ಮನೆಯ ಸದ್ಯಸರು ಈಗ ಬೀದಿಗೆ ಬಿದ್ದಿದ್ದಾರೆ. ಇದರಿಂದ ನಕ್ಷತ್ರಾ ತನ್ನ ಮನೆಯವರನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಅನ್ನೋದು ಮುಂಬರೋ ಸಂಚಿಕೆಗಳಲ್ಲಿ ಪ್ರಸಾರವಾಗಲಿದೆ. ಒಟ್ಟಿನಲ್ಲಿ ಈ ಟ್ವಿಸ್ಟ್ ನಿಜಕ್ಕೂ ಧಾರಾವಾಹಿಗೆ ರೋಚಕ ತಿರುವು ನೀಡಲಿದೆ. ಅಭಿಮಾನಿಗಳು ಕೂಡ ಈ ಟ್ರ್ಯಾಕ್​ಗೋಸ್ಕರ ಇಷ್ಟು ದಿನ ವೈಟ್ ಮಾಡಿದ್ರು. ಇನ್ಮುಂದೆ ಲಕ್ಷಣ ಫ್ಯಾನ್ಸ್​ಗೆ ಹಬ್ಬ ಅಂದ್ರೆ ಹಬ್ಬ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಶಕುಂತಲಾ ದೇವಿಗೆ ಬಿಗ್​ ಶಾಕ್​​; ಕೊನೆಗೂ ಅಸಲಿ ಬಣ್ಣ ತೋರಿಸಿದ ಶ್ವೇತಾ..!

https://newsfirstlive.com/wp-content/uploads/2023/07/lakshana-2-1.jpg

Load More