newsfirstkannada.com

ಕಿರುತೆರೆಗೆ ಮತ್ತೆ ಕಮ್​​ಬ್ಯಾಕ್ ಮಾಡಿದ ಅಕ್ಕ-ತಂಗಿ; ಟ್ರೈಯಾಂಗಲ್​ ಲವ್​ ಸ್ಟೋರಿಗೆ ಮತ್ತಷ್ಟು ಪುಷ್ಟಿ!

Share :

01-09-2023

    ಪುಣ್ಯವತಿ ಸೀರಿಯಲ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್

    ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಪುಣ್ಯವತಿ!

    ಪುಣ್ಯವತಿ ಜೊತೆ ಲಕ್ಷ್ಮೀ ಬಾರಮ್ಮ ಅಕ್ಕ-ತಂಗಿ ಎಂಟ್ರಿ

ಲಕ್ಷ್ಮೀ ಬಾರಮ್ಮ ಸೀರಿಯಲ್​ ಜನಪ್ರಿಯತೆ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಸೀರಿಯಲ್​ ಮುಕ್ತಾಯಗೊಂಡು ವರ್ಷಗಳೇ ಉರಳಿದರು ಜನ ಮಾತ್ರ ಆ ಕಲಾವಿದರನ್ನ ಮರೆತ್ತಿಲ್ಲ. ಇವತ್ತಿಗೂ ಪ್ರೇಕ್ಷಕರು ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಆಯಾ ಕಲಾವಿದರನ್ನ ಗುರುತಿಸೋದು. ಲಕ್ಮೀ ಬಾರಮ್ಮ ಟೈಟಲ್​ ಇವತ್ತಿಗೂ ಇಂಡಸ್ಟ್ರಿಗೆ ಲಕ್ಕಿ ಚಾರ್ಮ್​.

ಲಕ್ಷ್ಮೀ ಬಾರಮ್ಮ ಮೂಲಕ ಕಿರುತೆರೆಯಲ್ಲಿ ದೊಡ್ಡ ಯಶಸ್ಸು ಪಡೆದವರು ನಟಿ ಕವಿತಾ ಗೌಡ ಹಾಗೂ ನೇಹಾ ಗೌಡ. ಚಿನ್ನು-ಗೊಂಬೆಯಾಗಿ ವೀಕ್ಷಕರ ಮನಸ್ಸಲ್ಲಿ ಪರ್ಮನೆಂಟ್​ ಜಾಗ ಪಡೆದಿದ್ದಾರೆ. ಈ ಜೋಡಿನ ಮತ್ತೆ ತೆರೆಮೇಲೆ ಯಾವಾಗ ನೋಡೋದು ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದೆ ಪುಣ್ಯವತಿ ತಂಡ.

ಪುಣ್ಯವತಿ ಕಥೆ ಕೂಡ ಅಕ್ಕ-ತಂಗಿಯಾಗಿದ್ದಾಗಿದ್ದು, ಅಕ್ಕ ಪದ್ಮಿನಿ ಮದುವೆ ಆಗಬೇಕಾದ ಹುಡಗನನ್ನ ಪರಿಸ್ಥಿತಿಗೆ ಕಟ್ಟು ಬಿದ್ದು ತಂಗಿ ಪೂರ್ವಿ ಮದುವೆ ಆಗಿದ್ದಾಳೆ. ಮೂವರ ಜೀವನ ಅತಂತ್ರ ಸ್ಥಿತಿಗೆ ತಲುಪುತ್ತೆ. ಎಲ್ಲ ಸರಿ ಮಾಡುವ ಪ್ರಯತ್ನದಲ್ಲಿದ್ದ ನಾಯಕ ನಂದನ್​ನ ಮೇಲೆ ಅಕ್ಕ-ತಂಗಿ ಇಬ್ಬರಿಗೂ ಲವ್​ ಆಗಿದೆ. ಈ ಕಥೆ ಟ್ರೈಯಾಂಗಲ್​ ಲವ್​ ಸ್ಟೋರಿ ತರ ಸಾಗುತ್ತಿದ್ದು, ಪ್ರತಿ ಸಂಚಿಕೆ ಕುತೂಹಲ ಮೂಡಿಸುತ್ತಿದೆ.

ಇನ್ನೂ, ಪುಣ್ಯವತಿಗೆ ಹೊಸ ತಿರುವು ನೀಡಲು ಚಿನ್ನು-ಗೊಂಬೆ ಬರ್ತಿದ್ದಾರೆ. ಸದ್ಯ ಪದ್ಮಿನಿ-ಪೂರ್ವಿ ಇರುವ ಪರಿಸ್ಥಿತಿಯಲ್ಲಿ ಲಕ್ಷ್ಮೀ ಬಾರಮ್ಮ ಚಿನ್ನು-ಗೊಂಬೆ ಇದ್ದರು. ಹೀಗಾಗಿ ಪರಿಸ್ಥಿತಿಯ ಸೂಕ್ಷ್ಮತೆಯನ್ನ ಅರಿತು ಇಬ್ಬರಿಗೂ ದಾರಿ ತೋರಿಸಲಿದ್ದಾರಂತೆ. ಈ ಹೊಸ ಟ್ವಿಸ್ಟ್​ ಸದ್ಯದಲ್ಲೇ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಿನ್ನು ಕವಿತಾ ಗೌಡ ಹಾಗೂ ಗೊಂಬೆ ನೇಹಾ ಗೌಡ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದು, ತೆರೆಮೇಲೆ ಪುಣ್ಯವತಿ ಜೊತೆ ಲಕ್ಷ್ಮೀ ಬಾರಮ್ಮ ರಾರಾಜಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿರುತೆರೆಗೆ ಮತ್ತೆ ಕಮ್​​ಬ್ಯಾಕ್ ಮಾಡಿದ ಅಕ್ಕ-ತಂಗಿ; ಟ್ರೈಯಾಂಗಲ್​ ಲವ್​ ಸ್ಟೋರಿಗೆ ಮತ್ತಷ್ಟು ಪುಷ್ಟಿ!

https://newsfirstlive.com/wp-content/uploads/2023/08/punyavathi-2.jpg

Load More