/newsfirstlive-kannada/media/post_attachments/wp-content/uploads/2023/07/laxmi.jpg)
ಲಕ್ಷ್ಮೀ ಬಾರಮ್ಮ ಸೀರಿಯಲ್​ ಅದ್ಭುತವಾಗಿ ಮೂಡಿ ಬರುತ್ತಿದ್ದು, ವೀಕ್ಷಕರ ಮನೆ ಮಗಳಾಗಿದ್ದಾಳೆ ಲಕ್ಷ್ಮೀ. ಹಳೆ ಲಕ್ಷ್ಮೀಯನ್ನ ಎಷ್ಟು ಪ್ರೀತಿಸುತ್ತಿದ್ರೋ ಅಷ್ಟೇ ಪ್ರೀತಿ ಈ ಹೊಸ ಲಕ್ಷ್ಮೀಗೂ ಸಿಗುತ್ತಿದೆ. ಸೀರಿಯಲ್​ ತಂಡ ಕತೆಯನ್ನ ಸೊಗಸಾಗಿ ಕಟ್ಟಿಕೊಡ್ತಿದೆ.
/newsfirstlive-kannada/media/post_attachments/wp-content/uploads/2023/07/laxmi-1.jpg)
ಇನ್ನು ಲಕ್ಷ್ಮೀ ಊಹಿಸದ ತಿರುವೊಂದು ಎದುರಾಗಿದೆ. ಕೀರ್ತಿ ಹಾಗೂ ವೈಷ್ಣವ್ ಪ್ರೀತಿ ಬಗ್ಗೆ ಅನುಮಾನ ಶುರುವಾಗಿದೆ. ಹೌದು, ಲಕ್ಷ್ಮೀ ತಂದೆ ಬಂದು ಈ ಬಗ್ಗೆ ತಕರಾರು ಎತ್ತಿದಾಗ ಬೀಗರ ಬಾಯಿ ಮುಚ್ಚಿಸಿದ್ದರು ಕಾವೇರಿ. ಅದು ಅಲ್ಲದೇ ಲಕ್ಷ್ಮೀ ಕೂಡ ಅತ್ತೆ ಪರವಾಗಿ ಮಾತನಾಡಿ ವೈಷ್ಣವ್​ ಬಗೆಗೆ ತನಗಿರುವ ವಿಶ್ವಾಸ, ನಂಬಿಕೆಯನ್ನ ಅಪ್ಪನಿಗೆ ಅರ್ಥ ಮಾಡಿಸಿದಳು.
/newsfirstlive-kannada/media/post_attachments/wp-content/uploads/2023/07/laxmi-2.jpg)
ಸದ್ಯ ಕೀರ್ತಿ ವೈಷ್ಣವ್​ ಬಗ್ಗೆ ಸ್ಪಷ್ಟನೆ ಸಿಗದೆ ಒದ್ದಾಡುತ್ತಿದ್ದಾರೆ ಲಕ್ಷ್ಮೀ ತಂದೆ. ಇದೇ ಯೋಚನೆಯಲ್ಲಿದ್ದ ವಿಠ್ಠಲ್​ ಮೂರ್ತಿಗೆ ಕೀರ್ತಿ ಶಾಕಿಂಗ್​ ನ್ಯೂಸ್​ ಹೇಳಿದ್ದಾಳೆ. ಇತ್ತ ಅಪ್ಪ ಹೇಳಿದ ಮಾತುಗಳಲ್ಲೆ ಮುಳಗಿರುವ ಲಕ್ಷ್ಮೀಯಲ್ಲಿ ಅನುಮಾನದ ಬೀಜ ಬಿತ್ತಿದ್ದಾಳೆ ಸುಪ್ರೀತಾ. ಲಕ್ಷ್ಮೀಗೆ ವೈಷ್ಣವ್​ ಕೀರ್ತಿ ಬಗ್ಗೆ ಅನುಮಾನ ಶುರುವಾಗಿದ್ದು, ಈ ಪರಿಸ್ಥಿತಿಯನ್ನ ಹೇಗೆ ನಿಭಾಯಿಸ್ತಾಳೆ ಲಕ್ಷ್ಮೀ ಅನ್ನೋದೇ ಸದ್ಯದ ಕಥಾಹಂದರ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us