newsfirstkannada.com

ಪ್ರೀತಿಯ ಪತಿಗೆ ಮೇಕಪ್​ ಮಾಡಿದ ಜಾನ್ವಿ.. ಅಯ್ಯೋ ಆ ಸೈಕೋಯಿಂದ ಸ್ವಲ್ಪ ದೂರ ಇರಮ್ಮ ಎಂದ ನೆಟ್ಟಿಗರು

Share :

Published July 6, 2024 at 6:32pm

  ಜಯಂತ್​​ನ ಕೆಲವೊಂದು​ ಹುಚ್ಚುತನಕ್ಕೆ ಸೀರಿಯಲ್​ ಪ್ರೇಮಿಗಳು ಕೆಂಡ

  ಅದ್ಭುತ ನಟನೆ ಮೂಲಕವೇ ವೀಕ್ಷಕರ ಮನದಲ್ಲಿ ಉಳಿದುಕೊಂಡ ನಟ

  ಜಯಂತ್​ನಿಂದ ದೂರ ಹೋಗು ಜಾನು ಎಂದು ವೀಕ್ಷಕರಿಂದ ಒತ್ತಾಯ​

ಕನ್ನಡ ಕಿರುತೆರೆಯಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿ ವಿಭಿನ್ನವಾಗಿ ಮೂಡಿ ಬರ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇದ್ದು, ನಿರ್ದೇಶಕರು ಅದನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್​ ಮಾಡುತ್ತಿದ್ದಾರೆ. ಹೀಗಾಗಿನೇ ಅಪಾರ ವೀಕ್ಷಕರನ್ನ ಸಂಪಾದಿಸಿದೆ ಸೀರಿಯಲ್​. ಅದರಲ್ಲೂ ಲಕ್ಷ್ಮೀ ನಿವಾಸ ಸೀರಿಯಲ್​​ನ ಜಾನ್ವಿ ಹಾಗೂ ಜಯಂತ್​ ಪಾತ್ರಕ್ಕೆ ವೀಕ್ಷಕರು ಫಿದಾ ಆಗಿಬಿಟ್ಟಿದ್ದಾರೆ.

ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್‌ಗೆ ದೊಡ್ಡ ಟ್ವಿಸ್ಟ್‌.. ಏಕಾಏಕಿ ಹೊರ ಬಂದ್ರಾ ನಟಿ ಚಂದನಾ?

ಹೌದು, ಜಾನ್ವಿ ನಮ್ಮನೆ ಹುಡುಗಿ. ಆ ಜಯಂತ್​ ಆಕೆಗೆ ಎಷ್ಟು ಹಿಂಸೆ ಕೊಡುತ್ತಾರೆ. ಆಕೆಯನ್ನು ತವರು ಮನೆಗೆ ಹೋಗೋದಕ್ಕೂ ಬಿಡೋದಿಲ್ಲ ಏಕೆ ಅಂತ ವೀಕ್ಷಕರು ಕಾಮೆಂಟ್​ ಮಾಡುವ ಮೂಲಕ ಅವರ ಅಭಿನಯಕ್ಕೆ ಜೈ ಎನ್ನುತ್ತಿದ್ದಾರೆ. ಅದರಲ್ಲೂ​ ತನಗೆ ಸಂಬಂಧಪಟ್ಟ ವಸ್ತುವಾಗಲಿ, ವ್ಯಕ್ತಿ ಆಗಲಿ ನನಗೆ ಮಾತ್ರ ಸ್ವಂತ ಅನ್ನೋ ಜಯಂತ್​ ಹುಚ್ಚುತನ ವೀಕ್ಷಕರನ್ನ ಕೇರಳಿಸುತ್ತಿದೆ. ಅದರಲ್ಲೂ ಜಾನು ಹಾಗೂ ಜಯಂತ್​​ ಜೋಡಿಗೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.

ಇದೀಗ ಈ ಸೀರಿಯಲ್​ ಕ್ಯೂಟ್​ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತೆರೆ ಮುಂದೆ ಈ ಇಬ್ಬರು ಕ್ಯೂಟ್ ಕಪಲ್​​. ಆದರೆ ಅದೇ ತೆರೆ ಹಿಂದೆ ಈ ಇಬ್ಬರು ಬೆಸ್ಟ್ ಫ್ರೆಂಡ್ ಆಗಿದ್ದಾರೆ. ಹೀಗೆ ಬಿಡುವಿನ ಸಮಯದಲ್ಲಿ ಈ ಇಬ್ಬರು ರೀಲ್ಸ್​, ಹಾಡು ಹಾಡುತ್ತಾ ಕಾಲ ಕಳೆಯುತ್ತಾ ಇರುತ್ತಾರೆ. ಆದ್ರೆ ಈ ಬಾರಿ ಜಾನ್ವಿ ಪಾತ್ರಕ್ಕೆ ಬಣ್ಣ ಹಚ್ಚಿರೋ ನಟಿ ಚಂದನ, ದೀಪಕ್ ಸುಬ್ರಮಣ್ಯ ಅವರಿಗೆ ಮೇಕಪ್ ಮಾಡಿದ್ದಾರೆ. ಮೇಕಪ್ ಮಾಡುತ್ತಿರೋ ವಿಡಿಯೋ ನೋಡಿದ ಅಭಿಮಾನಿಗಳು ಅಬ್ಬಾ ಜಾನ್ವಿ ಹುಷಾರಮ್ಮ, ಆ ನನ್ನ ಮಗ ಸರಿ ಇಲ್ಲ, ಯಾವಾಗ ಅವನ ತಲೆ ಕೆಡುತ್ತೆ ಅಂತ ಹೇಳೋದಕ್ಕೆ ಆಗಲ್ಲ ಅಂತಾ ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಯ ಪತಿಗೆ ಮೇಕಪ್​ ಮಾಡಿದ ಜಾನ್ವಿ.. ಅಯ್ಯೋ ಆ ಸೈಕೋಯಿಂದ ಸ್ವಲ್ಪ ದೂರ ಇರಮ್ಮ ಎಂದ ನೆಟ್ಟಿಗರು

https://newsfirstlive.com/wp-content/uploads/2024/07/laxmi.jpg

Load More