newsfirstkannada.com

ಚಿಕ್ಕ ವಯಸ್ಸಿನಲ್ಲೇ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ನಿವಾಸ ಸೀರಿಯಲ್​ ಬಾಲ ನಟಿ ಖುಷಿ; ಬೆಲೆ ಎಷ್ಟು?

Share :

Published August 27, 2024 at 8:52am

Update August 27, 2024 at 8:56am

    ಲಕ್ಷ್ಮೀ ನಿವಾಸ ಸೀರಿಯಲ್​ ಮೂಲಕ ಖ್ಯಾತಿ ಪಡೆದ ಪುಟ್ಟ ಹುಡುಗಿ

    ಖುಷಿ ಎಂಬ ಪಾತ್ರದ ಮೂಲಕ ವೀಕ್ಷಕರ ಮನಸ್ಸು ಗೆದ್ದ ಬಾಲ ನಟಿ

    ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ನಿಶಿತಾ ಎಂದ ಫ್ಯಾನ್ಸ್

ಲಕ್ಷ್ಮೀ ನಿವಾಸ ವೀಕ್ಷಕರ ಮನೆ ಮನಸ್ಸನ್ನ ಗೆದ್ದಿದೆ. ಕರ್ನಾಟಕದ ನಂಬರ್​ ಒನ್​ ಧಾರಾವಾಹಿಯಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಲಕ್ಷ್ಮೀ ನಿವಾಸ ಧಾರಾವಾಹಿಯೂ ಮಿಡಲ್ ಕ್ಲಾಸ್ ಜೀವನದಲ್ಲಿ ಬದುಕುತ್ತಿರೋ ಒಂದು ದಂಪತಿಯ ಕತೆಯಾಗಿದೆ. ಇದೇ ಸೀರಿಯಲ್​ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದ ಪುಟ್ಟ ಕಲಾವಿದೆ ನಿಶಿತಾ ಈಗ ದುಬಾರಿ ಕಾರನ್ನು ಖರೀದಿಸಿದ್ದಾರೆ.

ಬಾಲ ನಟಿ ನಿಶಿತಾ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್​ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದರು. ಈ ಮೂಲಕವೇ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚಾನ್ಸ್ ಗಿಟ್ಟಿಸಿಕೊಂಡರು. ಕೇವಲ 6 ವರ್ಷ ವಯಸ್ಸಿನ ಬಾಲನಟಿ ನಿಶಿತಾ ಅಂದ್ರೆ ಫ್ಯಾನ್ಸ್​ಗೆ ಬಲು ಇಷ್ಟು. ಹೊಸ ಹೊಸ ರೀಲ್ಸ್​ಗೆ ಪ್ರೋತ್ಸಾಹ ಮಾಡುತ್ತಲೇ ಇರುತ್ತಾರೆ.

ಇದನ್ನೂ ಓದಿ: ಗರ್ಭಿಣಿ ಪತ್ನಿಗಾಗಿ ಏನೆಲ್ಲಾ ಮಾಡ್ತಾರೆ ಚಂದನ್​ ಗೌಡ; ಕವಿತಾ ಗೌಡ ಆಸೆ ಈಡೇರಿಸಿದ್ರು ನೋಡಿ​

ಇದಾದ ಬಳಿಕ ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿಯೂ ಕೂಡ ತಮ್ಮ ಮುದ್ದಾದ ಅಭಿನಯದ ಮೂಲಕ ಸಾಕಷ್ಟು ವೀಕ್ಷಕರ ಗಮನ ಸೆಳೆದಿದ್ದಾರೆ. ಅದರಲ್ಲೂ ಕ್ಯೂಟ್ ಹುಡುಗಿ ನಿಶಿತಾ ಖುಷಿ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಇದೀಗ ಬಾಲ ನಟಿ ನಿಶಿತಾ ಹೊಸ ಹ್ಯುಂಡೈ ಕ್ರೆಟಾ ಕಾರು ಖರೀದಿಸಿದ್ದಾರೆ. ಇದೇ ಕಾರು ನಿಶಿತಾ ಅವರ ತಾಯಿಯ ಹೆಸರಿನಲ್ಲಿದೆ.

View this post on Instagram

A post shared by Priya v (@priyaseervi321)

ಕಾರಿನ ಬೆಲೆ 20.15 ಲಕ್ಷ ರೂಪಾಯಿ ಆಗಿದೆ. ಹೊಸ ಕಾರನ್ನು ಖರೀದಿ ಮಾಡಿದ ಖುಷಿಯಲ್ಲಿ ನಿಶಿತಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ಅಭಿಮಾಗಳು ಶುಭ ಹಾರೈಸುತ್ತಿದ್ದಾರೆ.  ಮಗಳು ನಿಶಿತಾ ಅವರ ಇನ್​ಸ್ಟಾಗ್ರಾಮ್​ ಅಕೌಂಟ್​ ತಾಯಿ ಹ್ಯಾಂಡಲ್ ಮಾಡುತ್ತಿದ್ದಾರೆ. ಇನ್​ಸ್ಟಾಗ್ರಾಮ್ ಖಾತೆಯಲ್ಲಿ 9 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

  ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕ ವಯಸ್ಸಿನಲ್ಲೇ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ನಿವಾಸ ಸೀರಿಯಲ್​ ಬಾಲ ನಟಿ ಖುಷಿ; ಬೆಲೆ ಎಷ್ಟು?

https://newsfirstlive.com/wp-content/uploads/2024/08/kushi.jpg

Load More