76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಲಾಲ್ಬಾಗ್ನಲ್ಲಿ ಫ್ಲವರ್ ಶೋ
ಒಟ್ಟು 3.5 ಲಕ್ಷ ವಿವಿಧ ಹೂವುಗಳಿಂದ ಅಲಂಕೃತವಾದ ವಿಧಾನಸೌಧ
ಮೆಟ್ರೋ ಹಾಗೂ BMTC ಬಸ್ ಬರಲು ತೋಟಗಾರಿಕೆ ಇಲಾಖೆ ಮನವಿ
ಬೆಂಗಳೂರು: 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ತೋಟಗಾರಿಕೆ ಇಲಾಖೆ ಫ್ಲವರ್ ಶೋ ಏರ್ಪಡಿಸಿದ್ದಾರೆ. ಇಂದು ಸಂಜೆ 6 ಗಂಟೆಗೆ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫ್ಲವರ್ ಶೋ ಉದ್ಘಾಟನೆ ಮಾಡಿದ್ದಾರೆ. ಆಗಸ್ಟ್ 15ರವರೆಗೂ ಈ ಫ್ಲವರ್ ಶೋ ನಡೆಯಲಿದೆ.
ಪ್ರತಿವರ್ಷ ಸ್ವಾತಂತ್ರ್ಯ ದಿನದ ಅಂಗವಾಗಿ ಆಗಸ್ಟ್ ತಿಂಗಳಲ್ಲಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಸದ್ಯ ಲಾಲ್ಬಾಗ್ ಈಗ ಬಣ್ಣ ಬಣ್ಣದ ಹೂಗಳಿಂದ ತುಂಬಿದೆ. ಯಾವಾಗಲೂ ಕೇಂದ್ರ ಬಿಂದುವಾದ ಗಾಜಿನ ಮನೆಯಲ್ಲಿ ಈ ಬಾರಿ ಕೆಂಗಲ್ ಹನುಮಂತಯ್ಯ ಅವರದ್ದೇ ಹವಾ ಇದೆ. ಅದರ ಜೊತೆಗೆ ಅವರ ನಿರ್ಮಾಣ ವಿಧಾನಸೌಧವು ಹೂಗಳಿಂದ ಅಲಂಕಾರಗೊಂಡಿದ್ದು. ಅಷ್ಟು ಅಚ್ಚುಕಟ್ಟಾಗಿ ಕೆಂಗಲ್ ಹನುಮಂತಯ್ಯ ಅವರನ್ನು ಕೆತ್ತನೆ ಮಾಡಿದ್ದಾರೆ.
ಇನ್ನು, ಒಟ್ಟು 3.5 ಲಕ್ಷ ವಿವಿಧ ಹೂವುಗಳಿಂದ ವಿಧಾನಸೌಧ ನಿರ್ಮಿಸಲಾಗಿದೆ. ಇದರ ಜೊತೆಗೆ ಕೆಂಗಲ್ ಹನುಮಂತಯ್ಯನವರ ಹೂವಿನ ಪ್ರತಿಮೆಯನ್ನು ಕೂಡ ಇರಿಸಿದ್ದಾರೆ. ತೋಟಗಾರಿಕೆ ಇಲಾಖೆ 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲವರ್ ಶೋ ಆಯೋಜನೆ ಮಾಡಿದ್ದಾರೆ. ಇದೀಗ ಫಲಪುಷ್ಪ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಇಂಡೋನೇಷ್ಯಾದ ಹೂವುಗಳ ಬದಲಾಗಿ ಕೋಲ್ಕತ್ತಾ, ಪುಣೆ, ಆಂಧ್ರ, ಊಟಿ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಹೂವುಗಳನ್ನು ತರಿಸಲಾಗಿದೆ. ಸುಂದರ ಹೂಗಳ ಗುಚ್ಚಗಳಿಂದ ಲಾಲ್ ಬಾಗ್ ಶೃಂಗಾರಗೊಂಡಿದೆ. ಇಂದಿನಿಂದ 15ರ ವರೆಗೆ ಒಟ್ಟು 12 ದಿನಗಳ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಫಲಪುಷ್ಪ ಪ್ರದರ್ಶನಕ್ಕೆ ಮಕ್ಕಳಿಗೆ, ಮಹಿಳೆಯರಿಗೂ ಸಹ ಕೆಲ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ.
ಜೊತೆಗೆ ಟಿಕೆಟ್ ನಿಗದಿ ಮಾಡಲಾಗಿದ್ದು, ವಯಸ್ಕರಿಗೆ ವಾರದ ದಿನಗಳಲ್ಲಿ 70 ರೂಪಾಯಿ ಹಾಗೂ ವಾರದ ಕೊನೆಯಲ್ಲಿ 80 ರೂಪಾಯಿ, ಮಕ್ಕಳಿಗೆ 30 ರೂಪಾಯಿ ಇದೆ. ಜೊತೆಗೆ ಶಾಲಾ ಮಕ್ಕಳು ಶಾಲೆಯ ಯೂನಿಫಾರ್ಮ್ ಹಾಗೂ ಐಡಿ ಕಾರ್ಡ್ ಜೊತೆಗೆ ಬಂದರೆ ಉಚಿತವಾಗಿ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಭದ್ರತೆ ದೃಷ್ಟಿಯಿಂದ 200 ಸಿಸಿಟಿವಿ ಅಳವಡಿಕೆ ಮಾಡುವುದರ ಜೊತೆಗೆ 400ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಇನ್ನು ಲಾಲ್ ಬಾಗ್ನಲ್ಲಿ ಜನರಿಗೆ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ನಾಯಿಗಳಿಗೆ ವ್ಯಾಕ್ಸಿನೇಷನ್ ಇರಲಿದೆ. ಟ್ರಾಫಿಕ್ ದೃಷ್ಟಿಯಿಂದ ಮೆಟ್ರೋ ಹಾಗೂ BMTC ಬಸ್ ಬರಲು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ. ಈ ಫ್ಲವರ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು. ವಿಶೇಷ ಎಂದರೆ ಕಾರ್ಯಕ್ರಮದಲ್ಲಿ ಕೆಂಗಲ್ ಹನುಮಂತಯ್ಯ ಕುಟುಂಬಸ್ಥರು ಉಪಸ್ಥಿತರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ