newsfirstkannada.com

ಇದು ಸಾವಿರ ಕೋಟಿ ಒಡೆಯನ ಲಕ್ಷ ರೂ. ಸಂಬಳದ ಕಥೆ.. ಲಲಿತ್ ಮೋದಿ ಪತ್ರದಿಂದ ಧೋನಿ ಡಬಲ್​​​ಗೇಮ್​ ಬಯಲು..!

Share :

26-07-2023

  CSK ಮಾಲೀಕರ ಕೈಯಲ್ಲಿ ಕೆಲಸ ಮಾಡಿದ ಧೋನಿ

  ಕೋಟ್ಯಾಧಿಪತಿಗೆ 1.7 ಲಕ್ಷ ರೂ.ಗಿಂತ ಕಮ್ಮಿ ಸಂಬಳ..!

  ಬಿಸಿಸಿಐ ನಿಯಮವನ್ನೇ ಗಾಳಿದ ತೂರಿದ ಮಾಹಿ..!

ಧೋನಿ ಈಸ್​​ ಆಲ್​​ವೇಸ್​​​​ ಪರ್ಫೆಕ್ಟ್​​​. ಏನೇ ಮಾಡಿದ್ರೂ ತುಂಬಾ ಸ್ಮಾರ್ಟ್​ ಬುದ್ಧಿವಂತಿಕೆಯಿಂದ ಮಾಡ್ತಾರೆ. ಹಾಗಂತ ಲೆಜೆಂಡ್ ಮಾಹಿ ತಪ್ಪೇ ಮಾಡಲ್ಲ ಎಂದಲ್ಲ. ವಿಶ್ವನಾಯಕ ಕೂಡ ತಪ್ಪು ಮಾಡಿದ್ದಾರೆ. ದಶಕದ ಹಿಂದೆ ಬಿಸಿಸಿಐ ನಿಯಮವನ್ನೇ ಗಾಳಿಗೆ ತೂರಿದ್ದಾರೆ. ಐಪಿಎಲ್ ಸಂಸ್ಥಾಪಕ ಲಲಿತ್​ ಮೋದಿ ಧೋನಿಯ ಕಳ್ಳಾಟವನ್ನು ಬಯಲು ಮಾಡಿದ್ದಾರೆ.

ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿದ್ರೆ ಯಾರಿಗೆ ಗೊತ್ತಾಗಲ್ಲ ನಿಜ. ಆದ್ರೆ ಅದರ ಅದೃಷ್ಟವು ಚೆನ್ನಾಗಿರಬೇಕು. ಯಾಕಂದ್ರೆ ಬೆಕ್ಕು ಎಷ್ಟೇ ಬುದ್ಧವಂತಿಕೆಯಿಂದ ಕದ್ದು ಮುಚ್ಚಿ ಹಾಲು ಕುಡಿದ್ರೂ ಒಮ್ಮೊಮ್ಮೆ ಲಾಕ್ ಆಗಿಬಿಡುತ್ತೆ. ಟೀಮ್ ಇಂಡಿಯಾ ಮಾಜಿ ಸಕ್ಸಸ್​ಫುಲ್​ ಕ್ಯಾಪ್ಟನ್ ಎಂಎಸ್ ಧೋನಿ ಕಥೆನೂ ಹಾಗೇ ಆಗಿದೆ.

ಧೋನಿ ಓರ್ವ ಶ್ರೇಷ್ಠ ನಾಯಕ ಮಾತ್ರವಲ್ಲ. ಭಾರತದ ಶ್ರೀಮಂತ ಕ್ರಿಕೆಟರ್​​​​​ ಕೂಡ ಹೌದು. ಜಗಮೆಚ್ಚಿದ ಮಾಹಿ ಬರೋಬ್ಬರಿ 1,050 ಕೋಟಿ ಒಡೆಯ. ಪ್ರತಿ ಐಪಿಎಲ್ ಸೀಸನ್​​​​​​​​​ನಿಂದ 15 ಕೋಟಿ ರೂಪಾಯಿ ಜೇಬಿಗಿಳಿಸ್ತಾರೆ. ಇನ್ನು ಬ್ಯುಸಿನೆಸ್​​​​​​​​​, ಎಂಡೋರ್ಸ್​ಮೆಂಟ್​ ಸೇರಿ ನೂರಾರು ಕೋಟಿ ರೂಪಾಯಿ ಧೋನಿ ಖಜಾನೆ ಸೇರುತ್ತೆ. ಕುಂತು ತಿಂದ್ರೂ ಕರಗಿಸಲಾಗದಷ್ಟು ಆಸ್ತಿ ಹೊಂದಿರುವ ಧೋನಿ ಸಿಎಸ್​​ಕೆ ಫ್ರಾಂಚೈಸಿ ಮಾಲೀಕರ ಕಂಪೆನಿಯಲ್ಲಿ ಬರೀ 1.27 ಲಕ್ಷ ರೂಪಾಯಿಗೆ ಕೆಲಸ ಮಾಡ್ತಿದ್ರು ಅಂದ್ರೆ ನೀವು ನಂಬ್ತೀರಾ? ಸರ್​​ಪ್ರೈಸ್​​​​​ ಅನ್ನಿಸಿದ್ರೂ ಇದು ಸತ್ಯ.

ಉಪಾಧ್ಯಕ್ಷ ಹುದ್ದೆ, ತಿಂಗಳಿಗೆ 1.7 ಲಕ್ಷ ರೂ.ಗಿಂತ ಕಮ್ಮಿ ಸಂಬಳ..!

ಧೋನಿ ಇಂದು ಸಾವಿರ ಕೋಟಿ ಒಡೆಯ. ಆದ್ರೆ ಇದೇ ಧೋನಿ 2012 ರಲ್ಲಿ ಸಿಎಸ್​​ಕೆ ಫ್ರಾಂಚೈಸಿ ಮಾಲೀಕತ್ವದ ಇಂಡಿಯಾ ಸಿಮೆಂಟ್ಸ್​ ಕಚೇರಿಯಲ್ಲಿ ಮಾರ್ಕೆಂಟಿಂಗ್​​​​​​​ ಉಪಾಧ್ಯಕ್ಷರಾಗಿ ಕೆಲಸಕ್ಕೆ ಸೇರಿಕೊಳ್ತಾರೆ. ಸಿಎಸ್​ಕೆ ಮಾಲೀಕ ಎನ್​.ಶ್ರೀನಿವಾಸನ್​ ಅವರು 1.7 ಲಕ್ಷ ರೂಪಾಯಿಗಿಂತ ಕಡಿಮೆ ಸಂಬಳಕ್ಕೆ ಮಾಹಿಯನ್ನು ಸೇರಿಸಿಕೊಂಡಿದ್ದರು ಅನ್ನೋ ನೇಮಕಾತಿ ಪತ್ರವನ್ನ ಐಪಿಎಲ್​​​​ನ ಮಾಜಿ ಅಧ್ಯಕ್ಷ ಹಾಗೂ ಸಂಸ್ಥಾಪಕ ಲಲಿತ್ ಮೋದಿ ಹಂಚಿಕೊಂಡಿದ್ದಾರೆ.

ಲಲಿತ್ ಮೋದಿ ಪತ್ರದಿಂದ ಧೋನಿ ಡಬಲ್​​​ಗೇಮ್​ ಬಯಲು

2010 ಹಾಗೂ 2011 ರಲ್ಲಿ ಸಿಎಸ್​​ಕೆ ಚಾಂಪಿಯನ್​​​. ಜೊತೆಗೆ ಅದೇ ವರ್ಷ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಧೋನಿ ಹೆಸರು ಪೀಕ್​​ನಲ್ಲಿತ್ತು. ಇಂತಹ ಗೋಲ್ಡನ್​ ಟೈಮ್​​ನಲ್ಲೇ ಚಾಂಪಿಯನ್ ಕ್ಯಾಪ್ಟನ್,​​ ಸಿಎಸ್​ಕೆಯ ಇಂಡಿಯಾ ಸಿಮೆಂಟ್​​​​ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಳ್ತಾರೆ ಅನ್ನೋ ನೇಮಕಾತಿ ಪತ್ರವನ್ನ ಲಲಿತ್ ಮೋದಿ ವೈರಲ್ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಧೋನಿ ನೇಮಕಾತಿ ಪತ್ರದಲ್ಲಿ ಏನಿದೆ..?

ಎಂಎಸ್ ಧೋನಿಗೆ ಜುಲೈ 2012 ರಲ್ಲಿ ಚೆನ್ನೈನಲ್ಲಿರುವ ಇಂಡಿಯಾ ಸಿಮೆಂಟ್ಸ್ ಮುಖ್ಯ ಕಚೇರಿಯಲ್ಲಿ ಮಾರ್ಕೆಟಿಂಗ್​​ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ. ಒಪ್ಪಂದದ ಪ್ರಕಾರ ಮಾಹಿಯ ಮಾಸಿಕ ವೇತನ 43,000 ರೂಪಾಯಿ. 21,970 ರೂ.ಗಳ ತುಟ್ಟಿಭತ್ಯೆ ಮತ್ತು 20,000 ರೂಪಾಯಿ ವಿಶೇಷ ವೇತನ ನೀಡಲಾಗುತ್ತೆ. ಚೆನ್ನೈನಲ್ಲಿ ನೆಲೆಸಿದರೆ 20,400, ವಿಶೇಷ HRA ಚೆನ್ನೈನಲ್ಲಿದ್ದರೆ ತಿಂಗಳಿಗೆ 8,400 ರೂಪಾಯಿ ಮತ್ತು ಹೊರಗಿದ್ದರೆ ತಿಂಗಳಿಗೆ 8000 ರೂಪಾಯಿ ನೀಡಲಾಗುವುದು. ವಿಶೇಷ ವಿಶೇಷ ಭತ್ಯೆ 60,000 ರೂಪಾಯಿ ಮತ್ತು ಅಂತಿಮವಾಗಿ ಶಿಕ್ಷಣ/ಪತ್ರಿಕೆ ವೆಚ್ಚ ತಿಂಗಳಿಗೆ 175 ರೂಪಾಯಿ ನೀಡಲಾಗುವುದು.

ಧೋನಿ ನೇಮಕಾತಿ ಪತ್ರವನ್ನ ಲಲಿತ್ ಮೋದಿ ಲೀಕ್​ ಮಾಡಿದ್ದೇಕೆ?

ಅಂದಹಗೇ ಲಲಿತ್ ಮೋದಿ 11 ವರ್ಷಗಳ ಹಿಂದಿನ ಧೋನಿ ನೇಮಕಾತಿ ಪತ್ರವನ್ನ ಈಗ ಲೀಕ್ ಮಾಡಲು ಬಲವಾದ ಕಾರಣವಿದೆ. ಅದೇನಂದ್ರೆ ಹಿತಾಸಕ್ತಿ ಸಂಘರ್ಷ. ಐಪಿಎಲ್​​ನಲ್ಲಿ ಸ್ಪಾಟ್ ಫಿಕ್ಸಿಂಗ್​​ ವಿವಾದ ಕೇಳಿ ಬಂದ ಬಳಿಕ ಬಿಸಿಸಿಐ ಅನೇಕ ಬದಲಾವಣೆಗಳನ್ನ ತಂದಿತು. ಆ ಪೈಕಿ ಸುಪ್ರೀಂ ಕೋರ್ಟ್​ ಆದೇಶಿಸಿದ ಲೋಧಾ ಸಮಿತಿ ಆಯೋಗವು ಹಿತಾಸಕ್ತಿ ಸಂಘರ್ಷ ನಿಯಮವನ್ನ ಜಾರಿಗೆ ತಂದಿತು. ಇದರ ಅನ್ವಯ ಬಿಸಿಸಿಐ ಪದಾಧಿಕಾರಿ ಆಗಲಿ ಅಥವಾ ಯಾವುದೇ ಆಟಗಾರರು ಆಗಿರಲಿ. ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನ ನಿರ್ವಹಿಸುವಂತಿಲ್ಲ.

ಬಿಸಿಸಿಐ ನಿಯಮವನ್ನೇ ಗಾಳಿದ ತೂರಿದ ಮಾಹಿ

ಬಿಸಿಸಿಐ ನಿಯಮದ ಅನ್ವಯ ಧೋನಿ ಏಕಕಾಲಕ್ಕೆ ಟೀಮ್ ಇಂಡಿಯಾ ನಾಯಕನಾಗಿ ಮತ್ತು ಇಂಡಿಯ ಸಿಮೆಂಟ್​​​ನ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಹಿತಾಸಕ್ತಿ ಸಂಘರ್ಷಕ್ಕೆ ತದ್ವಿರುದ್ಧ. ಇಷ್ಟಾದರೂ ಚಾಂಪಿಯನ್ ಕ್ಯಾಪ್ಟನ್ ಧೋನಿಯನ್ನ ಯಾರು ಪ್ರಶ್ನೆ ಮಾಡಿಲ್ಲ. ಇದು ನಿಜಕ್ಕೂ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಪ್ರಯತ್ನ. ಇಲ್ಲಿ ಧೋನಿ ಮೇಲೆ ಎನ್​ ಶ್ರೀನಿವಾಸನ್ ಅವರ ಕೃಪಾಕಟಾಕ್ಷ ಇತ್ತು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಆಗ ಅವರೇ ಬಿಸಿಸಿಐ ಅಧ್ಯಕ್ಷರಾಗಿದ್ದರು.

ಧೋನಿ ಎಷ್ಟೇ ಸಕ್ಸಸ್​​​ಫುಲ್ ಕ್ಯಾಪ್ಟನ್ ಅನ್ನಿಸಿಕೊಂಡಿರಬಹುದು. ಭಾರತಕ್ಕೆ ಮೂರು ಐಸಿಸಿ ಮಾದರಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟಿರಬಹುದು. ರೂಲ್ಸ್​ ಎಲ್ಲರಿಗೂ ಒಂದೇ ಅಲ್ವವೇ. ಧೋನಿ ಬಿಸಿಸಿಐ ನಿಯಮವನ್ನ ಗಾಳಿಗೆ ತೂರಿದ್ದು ನಿಜಕ್ಕೂ ಯಾರು ಒಪ್ಪುವಂತಹದ್ದಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇದು ಸಾವಿರ ಕೋಟಿ ಒಡೆಯನ ಲಕ್ಷ ರೂ. ಸಂಬಳದ ಕಥೆ.. ಲಲಿತ್ ಮೋದಿ ಪತ್ರದಿಂದ ಧೋನಿ ಡಬಲ್​​​ಗೇಮ್​ ಬಯಲು..!

https://newsfirstlive.com/wp-content/uploads/2023/07/DHONI-2.jpg

Load More