newsfirstkannada.com

VIDEO: ನೋಡ, ನೋಡುತ್ತಿದ್ದಂತೆ ಕಟ್ಟಡಗಳೆಲ್ಲ ನೆಲಸಮ; ಹಿಮಾಚಲ ಪ್ರದೇಶದಲ್ಲಿ ಮತ್ತೆ ಬೆಚ್ಚಿ ಬೀಳಿಸಿದ ಗುಡ್ಡ ಕುಸಿತ

Share :

24-08-2023

    ಮಹಾಮಳೆ, ಪ್ರವಾಹಕ್ಕೆ ತತ್ತರಿಸಿದ್ದ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ

    ಗುಡ್ಡ ಕುಸಿತದಿಂದಾಗಿ ಕುಲು ಜಿಲ್ಲೆಯಯಲ್ಲಿ 7 ಕಟ್ಟಡಗಳು ನೆಲಸಮ

    10 ಕಿಲೋ ಮೀಟರ್ ಟ್ರಾಫಿಕ್ ಜಾಮ್‌ನಲ್ಲಿ ವಾಹನ ಸವಾರರ ಪರದಾಟ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ವಿಕೋಪದ ದುರಂತಗಳು ನಿಲ್ಲುತ್ತಲೇ ಇಲ್ಲ. ಭೀಕರ ಮಳೆ, ಪ್ರವಾಹಕ್ಕೆ ತತ್ತರಿಸಿದ್ದ ಹಿಮಗಳ ನಾಡಿನಲ್ಲಿ ಪದೇ ಪದೇ ಭೂಕುಸಿತದ ಅನಾಹುತಗಳು ಸಂಭವಿಸುತ್ತಲೇ ಇದೆ. ಇಂದು ಕುಲು ಜಿಲ್ಲೆಯ ಅಣ್ಣಿ ನಗರದಲ್ಲಿ ಗುಡ್ಡಕುಸಿತಕ್ಕೆ 7 ಕಟ್ಟಡಗಳು ನೆಲಸಮವಾಗಿವೆ. ಈ ಕಟ್ಟಡಗಳಲ್ಲಿದ್ದವರನ್ನು 3 ದಿನಗಳ ಹಿಂದಷ್ಟೇ ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಆದರೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗೆ ಹಿಮಾಚಲ ಪ್ರದೇಶದ ಹಲವೆಡೆ ಸಂಭವಿಸಿದ ಭೂಕುಸಿತಕ್ಕೆ ಹಲವು ಮನೆಗಳು ಸಂಪೂರ್ಣ ಧರಶಾಹಿ ಆಗಿವೆ. ಈ ಬಾರಿಯ ಮಳೆರಾಯನ ಆರ್ಭಟ, ಭೂಕುಸಿತಕ್ಕೆ ಸುಮಾರು 238 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಮತ್ತೆ ಕುಲು ಜಿಲ್ಲೆಯ ಈ ಕಟ್ಟಡಗಳು ನೆಲಸಮವಾಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಣ್ಣ ಮುಂದೆಯೇ ಮನೆಗಳೆಲ್ಲಾ ಕುಸಿದು ಬೀಳುತ್ತಿರೋದನ್ನ ನೋಡಿದ ಇಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ.

ಕುಲು ಮತ್ತು ಮಂಡಿ ನಗರಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆ ಜಾಮ್

ಮನೆಗಳು ಕುಸಿದು ಬೀಳುತ್ತಿರೋ ದೃಶ್ಯಗಳು ಒಂದು ಕಡೆಯಾದ್ರೆ ಮತ್ತೊಂದೆ ಹೆದ್ದಾರಿಗಳ ಮೇಲೂ ಭೂಕುಸಿತ ಸಂಭವಿಸಿದೆ. ಗುಡ್ಡ ಕುಸಿತದಿಂದಾಗಿ 800ಕ್ಕೂ ಅಧಿಕ ರಸ್ತೆಗಳು ಬಂದ್ ಆಗಿವೆ. ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು ಹಿಮಾಚಲ ಪ್ರದೇಶದ ಕುಲು ಮತ್ತು ಮಂಡಿ ನಗರಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆ ಜಾಮ್ ಆಗಿದೆ. ಸುಮಾರು 10 ಕಿಲೋ ಮೀಟರ್‌ನಷ್ಟು ಟ್ರಾಫಿಕ್‌ ಜಾಮ್ ಆಗಿದೆ. ಕಿಲೋ ಮೀಟರ್‌ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರೋ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಜಾಮ್‌ನಲ್ಲಿ ತಿನ್ನಲು ಆಹಾರ, ಕುಡಿಯಲು ನೀರು ಇಲ್ಲದೆ ಡ್ರೈವರ್‌ಗಳು ಪರದಾಡುತ್ತಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ಹಾಗೂ ಕುಲುವಿನಲ್ಲಿ ಈಗಲೂ ಮಳೆ ಮುಂದುವರಿದಿದೆ. ಮನೆ, ಆಸ್ಪತ್ರೆ ಸೇರಿದಂತೆ ಹಲವು ಕಟ್ಟಡಗಳು ಜಲಾವೃತಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ನೋಡ, ನೋಡುತ್ತಿದ್ದಂತೆ ಕಟ್ಟಡಗಳೆಲ್ಲ ನೆಲಸಮ; ಹಿಮಾಚಲ ಪ್ರದೇಶದಲ್ಲಿ ಮತ್ತೆ ಬೆಚ್ಚಿ ಬೀಳಿಸಿದ ಗುಡ್ಡ ಕುಸಿತ

https://newsfirstlive.com/wp-content/uploads/2023/08/Himachal-Pradesh-2.jpg

Load More