newsfirstkannada.com

ಉತ್ತರ ಭಾರತಕ್ಕೆ ಶಾಪವಾದ ಭೂಕುಸಿತ; ಐವರು ಕೇದಾರನಾಥ ಯಾತ್ರಿಕರ ಸಾವು; ಕಂದಕಕ್ಕೆ ಉರುಳಿಬಿದ್ದ ಬಸ್‌

Share :

12-08-2023

    ದೇವರಭೂಮಿಯಲ್ಲಿ ಸಾಲು, ಸಾಲು ಭೂಕುಸಿತ ದುರಂತ

    ಒಂದು ತಿಂಗಳ ಹಿಂದಷ್ಟೇ ಪ್ರವಾಹದಿಂದ ಪಾರಾಗಿದ್ದ ಜನ

    ಕೇದಾರನಾಥ ಯಾತ್ರೆಗೆ ಹೊರಟಿದ್ದವರ ಮೇಲೆ ಬಿದ್ದ ಬಂಡೆ

ಉತ್ತರ ಭಾರತದ ಹಲವೆಡೆ ಸಾಲು, ಸಾಲು ಭೂಕುಸಿತ ಸಂಭವಿಸುತ್ತಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಭಾರೀ ವರ್ಷಧಾರೆ ಸುರಿದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯದ ಜನರು ಧಾರಾಕಾರ ಮಳೆಗೆ ಕಂಗಾಲಾಗಿ ಹೋಗಿದ್ರು. ಸದ್ಯ ವರುಣದೇವ ಉತ್ತರ ಭಾರತದ ಜನರ ಮೇಲೆ ಕೃಪೆ ತೋರಿದ್ದಾರೆ. ಆದ್ರೆ ಸಾಲು, ಸಾಲು ಭೂಕುಸಿತದ ದುರಂತ ಸ್ಥಳೀಯರು ಹಾಗೂ ಪವಿತ್ರ ಕ್ಷೇತ್ರಗಳಿಗೆ ಭೇಟಿ ಕೊಟ್ಟ ಪ್ರವಾಸಿಗರ ಜೀವಕ್ಕೆ ಕುತ್ತು ತಂದಿದೆ. ಉತ್ತರ ಭಾರತದ ಎಲ್ಲೆಲ್ಲಿ ಭೂಕುಸಿತ ಸಂಭವಿಸಿದೆ. ಎಲ್ಲೆಲ್ಲಿ ಹಾನಿಯಾಗಿದೆ ಅನ್ನೋ ವಿವರ ಇಲ್ಲಿದೆ ನೋಡಿ.

ಉತ್ತರಾಖಂಡ್‌ನಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು, ಕೇದಾರನಾಥನ ದರ್ಶನಕ್ಕೆ ಹೊರಟಿದ್ದ ಐವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ರುದ್ರಪ್ರಯಾಗ್‌ ಜಿಲ್ಲೆಯ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯಲ್ಲಿ ಸಂಚರಿಸುವಾಗ ಕಾರಿನ ಮೇಲೆ ದೊಡ್ಡ ಬಂಡೆ ಕಲ್ಲುಗಳು ಬಿದ್ದಿದ್ದು ದುರಂತ ಸಂಭವಿಸಿದೆ. ಕಲ್ಲು ಬಿದ್ದ ಹೊಡೆತಕ್ಕೆ ಕಾರು ನುಜ್ಜುಗುಜ್ಜಾಗಿರೋ ವರದಿಯಾಗಿದೆ. ಐವರು ಯಾತ್ರಾರ್ಥಿಗಳಲ್ಲಿ 3 ಗುಜರಾತ್‌ ಮೂಲದವರು ಎಂದು ಹೇಳಲಾಗಿದೆ.

ಮತ್ತೊಂದೆಡೆ ಹಿಮಾಚಲ ಪ್ರದೇಶದ ಸುಂದರ್ ನಗರ್ ಬಳಿ ಬಸ್‌ ಒಂದು ಕಂದಕಕ್ಕೆ ಉರುಳಿಬಿದ್ದಿದೆ. ಈ ರಸ್ತೆಯಲ್ಲಿ ಮೊದಲೇ ರಸ್ತೆ ಹಾಳಾಗಿತ್ತು. ಹಾಳಾದ ರಸ್ತೆಯ ಕಂದಕಕ್ಕೆ ಬಸ್‌ ಬಿದ್ದಿದೆ. ಈ ಬಸ್‌ನಲ್ಲಿ 12 ಮಂದಿ ಪ್ರಯಾಣ ಬೆಳೆಸಿದ್ದರು. ಅದೃಷ್ಟವಶಾತ್ 12 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಶಿಮ್ಲಾದ ಚೌಪಲ್​ನಲ್ಲೂ ಕೂಡ ಭೂಕುಸಿತದ ಅನಾಹುತ ಸಂಭವಿಸಿದೆ. ಭೂಕುಸಿತದ ಪರಿಣಾಮ ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕೆಸರಿನ ಒಳಗೆ ಸಿಲುಕಿದ್ದಾಳೆ. ಕೆಸರುಗದ್ದೆಯಂತಾದ ರಸ್ತೆಯಲ್ಲಿ ಬಾಲಕಿ ತೆರಳುತ್ತಿದ್ದ ವೇಳೆ ದಿಢೀರ್ ಭೂಕುಸಿತ ಸಂಭವಿಸಿದೆ. ಸುಮಾರು 1 ಗಂಟೆಗಳ ಕಾಲ ಬಾಲಕಿ ಕೆಸರಲ್ಲೇ ಸಿಲುಕಿ ಮೇಲೆ ಏಳಲಾರದೆ ಒದ್ದಾಡಿದ್ದಾಳೆ. ಬಳಿಕ ಇದನ್ನ ಗಮನಿಸಿದ ಸ್ಥಳೀಯರು ಆಕೆಯನ್ನ ಕಾಪಾಡಲು ಧಾವಿಸಿ ಬಂದಿದ್ದು, ಆಕೆಯನ್ನ ಮಣ್ಣಿನಿಂದ ಮೇಲೆತ್ತಲು ಹರಸಾಹಸ ಪಟ್ಟಿದ್ದಾರೆ. ಒಂದು ಗಂಟೆಯ ಸತತ ಪ್ರಯತ್ನದ ಬಳಿಕ ಕೊನೆಗೂ ಬಾಲಕಿಯನ್ನು ಕೆಸರಿನಿಂದ ರಕ್ಷಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಉತ್ತರ ಭಾರತಕ್ಕೆ ಶಾಪವಾದ ಭೂಕುಸಿತ; ಐವರು ಕೇದಾರನಾಥ ಯಾತ್ರಿಕರ ಸಾವು; ಕಂದಕಕ್ಕೆ ಉರುಳಿಬಿದ್ದ ಬಸ್‌

https://newsfirstlive.com/wp-content/uploads/2023/08/North-India-Landslide.jpg

Load More