newsfirstkannada.com

ಯಾವುದೇ ಕಾರಣಕ್ಕೂ ಬಸ್​​ನಲ್ಲಿ ಹೋಗುವಾಗ ಲ್ಯಾಪ್​​ಟಾಪ್​​ ಕ್ಯಾರಿ ಮಾಡಬೇಡಿ; ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಿ!

Share :

21-08-2023

    ಬಸ್​​ನಲ್ಲಿ ಟ್ರಾವೆಲ್​ ಮಾಡುವ ಜನ ಓದಲೇಬೇಕಾದ ಸ್ಟೋರಿ..!

    ಪ್ರಯಾಣಿಸುವಾಗ ಲ್ಯಾಪ್​ಟಾಪ್​​ ಕ್ಯಾರಿ ಮಾಡೋದಾದ್ರೆ ಹುಷಾರ್​​

    ನೀವು ಸೀಟಿನಲ್ಲಿ ನಿದ್ದೆಗೆ ಜಾರಿದಂತೆ ಕದ್ದು ಎಸ್ಕೇಪ್​ ಆಗ್ತಾರೆ ಇವ್ರು!

ಬೆಂಗಳೂರು: ಸಾಲು ಸಾಲಾಗಿ ಲ್ಯಾಪ್​ಟಾಪ್​ ಜೋಡಿಸಿರುವುದು ನೋಡಿದ್ರೆ ಥಟ್​​ ಅಂತಾ ನೆನಪಾಗೋದು ಯಾವುದೋ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟಿರಬೇಕು ಎಂದು. ಆದ್ರೆ, ಇಲ್ಲಿ ಪ್ರದರ್ಶನಕ್ಕೆ ಇಟ್ಟಿರೋವಲ್ಲ. ಕದ್ದು ಎಸ್ಕೇಪ್​ ಆಗಿದ್ದ ಖದೀಮರನ್ನ ಸದೆಬಡಿದು ಅವರಿಂದ ವಶಕ್ಕೆ ಪಡೆದವು.

ಈತ ಖತರ್ನಾಕ್​ ಕಳ್ಳ ನಂಬರ್​​ 1, ಹೆಸರು ಶಬರೀಶ್. ಇನ್ನೋರ್ವ ಕಳ್ಳ ನಂಬರ್ 2, ಫಜೀಲ್ ಪಾಷಾ. ಇವರಿಬ್ಬರ ಕಣ್ಣು ಬಿದ್ದಿದ್ದು ಲ್ಯಾಪ್​ ಟಾಪ್​ ಮೇಲೆ. ಹೌದು, ಹೈದರಾಬಾದ್​ ಟು ಬೆಂಗಳೂರು ಬಸ್​ಗೆ ಖಾಲಿ ಬ್ಯಾಗ್​ ಸಮೇತ ಹತ್ತುತ್ತಿದ್ದ ಈ ಜೋಡಿ, ಬಸ್​ಗಳಲ್ಲಿನ ಪ್ರಯಾಣಿಕರ ಲ್ಯಾಪ್ ಟಾಪ್ ಬ್ಯಾಗ್​ಗಳನ್ನೇ ಟಾರ್ಗೆಟ್​​ ಮಾಡಿ ಕದ್ದು ಎಸ್ಕೆಪ್​ ಆಗ್ತಾಯಿದ್ರು.

ಬಸ್​​ ಹತ್ತಿ ಪ್ರಯಾಣಿಕರ ವಸ್ತುಗಳ ಮೇಲೆ ನಿಗಾ ಇಡ್ತಾಯಿದ್ದವರು. ನಿದ್ದೆ ಮಾಡ್ತಿದ್ದಂತೆ ಕದ್ದು ಪರಾರಿಯಾಗ್ತಿದ್ರು. ಸದ್ಯ ಈ ಖತರ್ನಾಕ್ ಕಳ್ಳರಿಬ್ಬರನ್ನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅದೇನೇ ಇರಲಿ ಇಂತವರು ನಮ್ಮ ನಡುವೆ ಅಲ್ಲೊಬ್ರು ಇಲ್ಲೊಬ್ರು ಇರ್ತಾರೆ. ಹೀಗಾಗಿ. ಬಸ್​​ನಲ್ಲಿ ಟ್ರಾವೆಲ್ ಮಾಡ್ಬೇಕಾದ್ರೆ ನಿಮ್ಮ ಬಳಿ ಇರೋ ವಸ್ತುಗಳ ಬಗ್ಗೆ ಇರಲಿ ಅತಿಹೆಚ್ಚಿನ ಗಮನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾವುದೇ ಕಾರಣಕ್ಕೂ ಬಸ್​​ನಲ್ಲಿ ಹೋಗುವಾಗ ಲ್ಯಾಪ್​​ಟಾಪ್​​ ಕ್ಯಾರಿ ಮಾಡಬೇಡಿ; ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಿ!

https://newsfirstlive.com/wp-content/uploads/2023/08/Laptop-Theft.jpg

Load More