newsfirstkannada.com

ಶ್ರೀರಾಮಮಂದಿರದ ಗರ್ಭ ಗುಡಿ ನಿರ್ಮಾಣ ಕಾರ್ಯ ಎಲ್ಲಿಗೆ ಬಂತು; ಫೋಟೋ ಸಹಿತ ಲೇಟೆಸ್ಟ್ ಮಾಹಿತಿ ಇಲ್ಲಿದೆ

Share :

13-09-2023

  2024ರ ಜನವರಿಯಲ್ಲಿ ರಾಮಮಂದಿರ ಗರ್ಭ ಗುಡಿಯ ಉದ್ಘಾಟನೆ

  ದಿನಕಳೆದಂತೆ ನಿಧಾನವಾಗಿ ರಾಮಮಂದಿರ ಭವ್ಯ ಸ್ವರೂಪ ಪಡೆಯುತ್ತಿದೆ

  ರಾಮ ಜನ್ಮಭೂಮಿಯಲ್ಲಿ ಪ್ರಾಚೀನ ಮಂದಿರಗಳ ಅವಶೇಷಗಳು ಪತ್ತೆ

ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 2024ರ ಜನವರಿ 21-24ರ ವೇಳೆಗೆ ರಾಮಮಂದಿರದ ಗರ್ಭ ಗುಡಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ಸಾಧ್ಯತೆ ಇದೆ. ಉದ್ಘಾಟನೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ರಾಮಮಂದಿರದ ನಿರ್ಮಾಣ ಕಾರ್ಯ ಮತ್ತಷ್ಟು ಚುರುಕಾಗಿದೆ. ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಲೇಟೆಸ್ಟ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 400 ಕೆಜಿ ತೂಕದ ಬೀಗ; ಏನಿದರ ವಿಶೇಷ? ಇದನ್ನು ತಯಾರಿಸಿದ ಕುಶಲಕರ್ಮಿ ಯಾರು?

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವಾದ Xನಲ್ಲಿ ಫೋಟೋ ಸಹಿತ ಒಂದು ಪೋಸ್ಟ್ ಮಾಡಿದ್ದಾರೆ. ನಿಧಾನವಾಗಿ ರಾಮಮಂದಿರ ಭವ್ಯ ಸ್ವರೂಪ ಪಡೆಯುತ್ತಿದೆ ಎಂದು ಚಂಪತ್ ರಾಯ್ ಅವರು ಹೇಳಿದ್ದಾರೆ. ಈ ಫೋಟೋ ಮೂಲಕ ರಾಮಮಂದಿರದ ನೆಲ ಮಹಡಿಗೆ ಛಾವಣಿ ಹಾಕುವ ಕಾರ್ಯ ಪೂರ್ಣಗೊಂಡಿದೆ ಅನ್ನೋ ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಮುಂದಿನ ವರ್ಷದ ಜನವರಿಗೆ ರಾಮಮಂದಿರದ ಗರ್ಭ ಗುಡಿಯ ಉದ್ಘಾಟನೆ ಮಾಡೋ ತಯಾರಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿರುವಾಗಲೇ ರಾಮ ಜನ್ಮಭೂಮಿಯಲ್ಲಿ ಪ್ರಾಚೀನ ಮಂದಿರಗಳ ಅವಶೇಷಗಳು ಸಿಕ್ಕಿವೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ ಅನೇಕ ಮೂರ್ತಿ, ಸ್ತಂಭಗಳು ಸಿಕ್ಕಿವೆ. ಅನೇಕ ಮೂರ್ತಿ, ಸ್ತಂಭಗಳ ಅವಶೇಷಗಳನ್ನು ಚಂಪತ್ ರಾಯ್ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಶ್ರೀರಾಮಮಂದಿರದ ಗರ್ಭ ಗುಡಿ ನಿರ್ಮಾಣ ಕಾರ್ಯ ಎಲ್ಲಿಗೆ ಬಂತು; ಫೋಟೋ ಸಹಿತ ಲೇಟೆಸ್ಟ್ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2023/09/Ayoydhya-Rama-Mandira-1.jpg

Load More