newsfirstkannada.com

ಮುಂಗಾರುಮಳೆ ಎಫೆಕ್ಟ್..! ಅಲ್ಲಿ ನೋಡು ಹಾವು, ಇಲ್ಲಿ ನೋಡು ಹಾವು, ಎಲ್ಲೆಲ್ಲಿ ನೋಡು ಹಾವು..!

Share :

24-06-2023

  ಸಂತಸದ ನಡುವೆ ಆತಂಕ.. ಮನೆಗಳಿಗೆ ಬರುತ್ತಿವೆ ಬುಶ್​.. ಬುಶ್​ ನಾಗಪ್ಪ ..!​

  ಮಕ್ಕಳಿಗೆ ಶೂ ತೊಡಿಸುವ ಮುನ್ನ ಹುಷಾರ್​, ಒಮ್ಮೆ ಚೆಕ್​ ಮಾಡಿ ಹಾಕಿ

  ರಾಜ್ಯದಲ್ಲಿ ಮುಂಗಾರು ಬಿರುಸು ಹೇಗಿದೆ? ಎಲ್ಲಿಲ್ಲಿ ಏನೆಲ್ಲಾ ಆಯ್ತು?

ಮುಗಾರು ಮಳೆ ಶುರುವಾಗಿದ್ದು, ರಾಜ್ಯದ ಹಲವೆಡೆ ಹನಿಗಳ ಲೀಲೆಯನ್ನ ತೋರಿಸೋದಕ್ಕೆ ಶುರು ಮಾಡಿದೆ. ಇದು ರೈತರ ಮೊಗದಲ್ಲಿ ಸಂತಸಕ್ಕು ಕಾರಣವಾಗಿದೆ. ಈ ನಡುವೆ ಜಲಚರಗಳು ನದಿಯ ವ್ಯಾಪ್ತಿ ಮೀರಿ ಹೊರಬರುತ್ತಿವೆ. ಹಾವುಗಳಂತೂ ಮನೆಗಳಿಗೆ ನುಗ್ಗುತ್ತಿವೆ. ಜನರು ಬೆಚ್ಚಿ ಬೀಳುವಂತಾಗಿದೆ.

ರಾಜ್ಯದಲ್ಲಿ ಮಳೆ ತನ್ನ ಆರ್ಭಟ ಶುರು ಮಾಡ್ಕೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರು, ಸೇರಿ ಹಲವೆಡೆ ಮಳೆಯಾಗ್ತಿದೆ. ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗ್ತಿದ್ದು, ವರುಣನ ಆಟ ಜನರಿಗೆ ಸಂಕಷ್ಟವನ್ನೂ ತಂದೊಡ್ಡೋದಕ್ಕೆ ಕಾರಣವಾಗಿದೆ. ಅತ್ತ ರೈತರ ಮುಖದಲ್ಲಿ ಮುಂಗಾರು ಸಂತೋಷದ ಪೈರು ಬೆಳೆಯುವಂತೆ ಮಾಡಿದೆ. ಈ ನಡುವೆ ಹೊಸ ಆತಂಕವೊಂದು ಶುರುವಾಗಿದೆ ಅದುವೇ ಮನೆಗಳಲ್ಲಿ ಬುಶ್​.. ಬುಶ್​ ನಾಗಪ್ಪನ ಹಾವಳಿ ಜಾಸ್ತಿಯಾಗಿದೆ.

ಸಾಂಸ್ಕೃತಿಕ ನಗರಿಯಲ್ಲಿ ಭರ್ಜರಿ ಮಳೆ

ಮನೆಯ ಮೂಲೆ ಮೂಲೆಯಲ್ಲೂ ಹಾವುಗಳು ಕಾಣಿಸಿಕೊಳ್ತಿರೋದು ಎಥಂವರನ್ನೂ ಒಮ್ಮೆ ನಡುಗುವಂತೆ ಮಾಡುತ್ತಿವೆ. ಈ ಸರ್ಪಗಳ ಸರಮಾಲೆ ಕಾಣಿಸಿಕೊಂಡಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಮೈಸೂರಿನ ಬಹುತೇಕ ಬಡಾವಣೆಗಳಲ್ಲಿ ಹಾವುಗಳು ಕಾಣಿಸಿಕೊಳ್ತಿವೆ. ಹೊರಗೆ ಚಳಿ, ಶೀತಗಾಳಿ, ಮಳೆ ಹೆಚ್ಚಾಗ್ತಿದ್ದಂತೆ ಬೆಚ್ಚಗಿನ ಜಾಗ ಹಿಡಿದು ಹಾವುಗಳು ಮನೆಯನ್ನ ಹೊಕ್ಕುತ್ತಿವೆ. ಮಾದೇಗೌಡ ಬಡಾವಣೆ, ಬಿಎಂಶ್ರೀ‌ ನಗರ, ವಿಜಯನಗರ, ಮಹದೇಶ್ವರ ಬಡಾವಣೆ, ವಿವೇಕಾನಂದ ನಗರ, ಪೊಲೀಸ್ ಲೇಔಟ್, ಚೆಸ್ಕಾಂ‌ ಕಚೇರಿಯಲ್ಲಿ ಹಾವುಗಳು ಕಾಣಿಸಿಕೊಳ್ತಿವೆ.

ಅಲ್ಲಿ ನೋಡು ಹಾವು, ಇಲ್ಲಿ ನೋಡು ಹಾವು, ಎಲ್ಲೆಲ್ಲಿ ನೋಡು ಹಾವು

ಸೇಫ್ ಆಗಿ ಮಲಗೋಣ ಅಂತಾ ಹಾಕಿದ್ದ ಸೊಳ್ಳೆ ಪರದೆ ಮೇಲೆ ಹಾವು ಕಾಣಿಸಿಕೊಂಡು ಭಯ ಹುಟ್ಟಿಸಿದೆ. ಕೊನೆಗೆ ಅದನ್ನ ಹಿಡಿದು ಉರಗತಜ್ಞರು ರಕ್ಷಣೆ ಮಾಡಿದ್ದಾರೆ. ಹೆಲ್ಮೆಟ್ ಒಳಗೆ ನಾಗರಹಾವೊಂದು ಸೇರಿಕೊಂಡು ಆತಂಕಕ್ಕೆ ಕಾರಣ ಮಾಡಿತ್ತು. ಬಳಿಕ ಅದನ್ನ ಹಿಡಿದು ಕಾಡಿಗೆ ಬಿಡಲಾಗಿದೆ. ದೇವರ ಕೋಣೆಯಲ್ಲೂ ಹಾವು ಕಾಣಿಸಿಕೊಂಡು ಭಯ ಹುಟ್ಟಿಸಿತ್ತು, ಅದನ್ನ ಕಷ್ಟ ಪಟ್ಟು ಹಿಡಿದು ಉರಗತಜ್ಞರು ರಕ್ಷಣೆ ಮಾಡಿದ್ದಾರೆ. ದೇವರ ಕೋಣೆಯಿಂದ ಹಿಡಿದು ಬಾಕ್ಸ್​ನಲ್ಲಿ ಹಾಕಿದ ಬಳಿಕ ಮನೆಯವರು ಹಾವಿಗೆ ಪೂಜೆ ಮಾಡಿ, ನಾಗಪ್ಪನಿಗೆ ಕೈ ಮುಗಿದಿದ್ದಾರೆ.

ಬಟ್ಟೆಯ ಬುಟ್ಟಿಯೊಳಗೆ ಹಾವೊಂದು ಸೇರಿಕೊಂಡು ಭಯ ಹುಟ್ಟಿಸಿತ್ತು. ಸ್ಥಳಕ್ಕೆ ಬಂದ ಉರಗತಜ್ಞರು ರಕ್ಷಣೆ ಮಾಡಿದ್ದಾರೆ. ಮನೆಯಲ್ಲಿದ್ದೋರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಪುಟಾಣಿ ಮಕ್ಕಳ ಶೂ ಒಳಗೆ ಹಾವುಗಳು ಕಾಣಿಸಿಕೊಳ್ತಿದ್ದು, ಹಾವಿನ ಭಯವನ್ನ ಮತ್ತಷ್ಟು ಹೆಚ್ಚಿಸಿದೆ. ಮಿನಿ ನಾಗರಗಳೇ ಕಾಣಸಿಗ್ತಿರೋದು ಆತಂಕವನ್ನ ದುಪ್ಪಟ್ಟಾಗಿಸಿದೆ.

ಯಾದಗಿರಿಯಲ್ಲಿ ವರುಣಾರ್ಭಟ ಗುಡುಗು, ಮಿಂಚು ಸಮೇತ ಮಳೆ

ಇದಿಷ್ಟು ಮೈಸೂರಿನ ಸರ್ಪ ಸಮಸ್ಯೆಯಾದ್ರೆ, ಯಾದಗಿರಿ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದೆ. ರಾತ್ರಿ, ಗುಡುಗು, ಮಿಂಚು, ಗಾಳಿ ಸಹಿತ ಭಾರೀ ಮಳೆಗೆ ನಗರ ಸಾಕ್ಷಿಯಾಗಿದೆ. ಮುಂಗಾರು ಆರಂಭದ ನಂತರ ಇದೇ ಮೊದಲ ಬಾರಿಗೆ ಉತ್ತಮ ಮಳೆಯಾಗಿರೋದು ಅನ್ನದಾತರನ್ನ ಹರ್ಷದ ಹೊಳೆಗೆ ದೂಡಿದಂತಾಗಿದೆ.

ಬಿಸಿಲಿನ ಬೇಗೆಗೆ ಬಳಲಿ ಬೆಂಡಾಗಿದ್ದ ಬಾಗಲಕೋಟೆ ಜನರ ಮೇಲೆ ಮಳೆರಾಯ ಕೊನೆಗೂ ಮನಸ್ಸು ಮಾಡಿದ್ದಾನೆ. ಜಿಲ್ಲೆಗೆ ಮಳೆ ಎಂಟ್ರಿಯಾಗಿದೆ. ಬಿತ್ತನೆಗೆ ಭೂಮಿ ಹದ ಮಾಡಿಟ್ಟುಕೊಂಡು ಮಳೆಗಾಗಿ ಕಾಯುತ್ತಿದ್ದ ರೈತರ ಮುಖದಲ್ಲಿ ಮಳೆ ಮಂದಹಾಸ ಮೂಡಿಸಿದೆ.

ಉಡುಪಿಯಲ್ಲಿ ಮುಂಗಾರು ಪ್ರಬಲವಾಗುವ ಮುನ್ಸೂಚನೆ

ಉಡುಪಿಯಲ್ಲೂ ತಕ್ಕಮಟ್ಟಿನ ವರ್ಷಧಾರೆಯಾಗಿದೆ. ಮಳೆ ಮುಂದುವರೆದರೆ ಬೇಸಾಯ ಚಟುವಟಿಕೆ ಆರಂಭವಾಗೋ ಸಾಧ್ಯತೆ ಇದೆ. ಜೂನ್ 21ರ ನಂತರ ಮುಂಗಾರು ಪ್ರಬಲದ ಮುನ್ಸೂಚನೆ ಸಿಕ್ಕಿದ್ದು, ಮುಂದೆ ಮಳೆ ಮತ್ತಷ್ಟು ಹೆಚ್ಚೋ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್‌ 27ರವರೆಗೂ ಭಾರೀ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ಎಚ್ಚರಿಸಿದೆ.

ರಾಜ್ಯದಲ್ಲಿ ಮಳೆಯಾಗ್ತಿರೋ ಸಂತಸ ಒಂದ್ಕಡೆ ಆದ್ರೆ, ಹಾವುಗಳು ಬಂದು ಮನೆಯೊಳಗೆ ಸೇರ್ಕೊಳ್ತಿರೋ ಆತಂಕ ಇನ್ನೊಂದ್ಕಡೆ, ಮಳೆಗಾಲವಾದ ಕಾರಣ ಹೊರಗೆ ಹೆಚ್ಚು ತಂಪಿರುತ್ತೆ. ಹೀಗಾಗಿ ಬೆಚ್ಚನೆಯ ಜಾಗ ಹುಡ್ಕೊಂಡು ಹಾವುಗಳು ಮನೆಯೊಳಗೆ ನುಗ್ಗುತ್ತಾವೆ. ಹೀಗಾಗಿ ಜನರು ಮನೆಯೊಳಗಿದ್ದಾಗಲೂ ಎಚ್ಚರಿಕೆಯಿಂದ ಇರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಗಾರುಮಳೆ ಎಫೆಕ್ಟ್..! ಅಲ್ಲಿ ನೋಡು ಹಾವು, ಇಲ್ಲಿ ನೋಡು ಹಾವು, ಎಲ್ಲೆಲ್ಲಿ ನೋಡು ಹಾವು..!

https://newsfirstlive.com/wp-content/uploads/2023/06/MYS_SNAKE.jpg

Load More