ಉತ್ತರಪ್ರದೇಶದ ಲಖನೌನಲ್ಲಿ NIA ಅಧಿಕಾರಿ ಪುತ್ರಿಯ ಅನುಮಾನಸ್ಪದ ಸಾವು
ಹಲವು ಅನುಮಾನ ಮೂಡಿಸಿದ ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿನಿ ಸಾವು
ಬಟ್ಟೆ ಕೆಟ್ಟಿಲ್ಲ, ಗಾಯದ ಗುರುತು ಇಲ್ಲ, ಆದರೂ ಸಾವು, ಪೊಲೀಸರು ಹೇಳೋದೇನು?
ಲಖನೌ: ಉತ್ತರಪ್ರದೇಶದ ಲಖನೌನಲ್ಲಿರುವ ರಾಮ್ ಮನೋಹರ ಲೋಹಿಯಾ ನ್ಯಾಷನಲ್ ಲಾ ಕಾಲೇಜ್ಲ್ಲಿ 19 ವರ್ಷದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. 3ನೇ ವರ್ಷದ ಎಲ್ಎಲ್ಬಿ ಓದುತ್ತಿದ್ದ ಯುವತಿಯ ಹಾಸ್ಟೆಲ್ ರೂಮ್ನಲ್ಲಿ ಮೃತದೇಹ ಪತ್ತಯಾಗಿದ್ದು, ಯುವತಿಯನ್ನು ಎನ್ಐಎನಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಆಫೀಸರ್ ಪುತ್ರಿ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ವರದಿಗಳು ಬಂದ ಪ್ರಕಾರ, ಕಳೆದ ರಾತ್ರಿ ರೂಮ್ನೊಳಗೆ ಹೋದ ಯುವತಿ ಮತ್ತೆ ಆಚೆ ಬಂದಿಲ್ಲ ಎಂಬುದು ವರದಿಯಾಗಿದೆ. ಆತಂಕಗೊಂಡ ಆಕೆಯ ಸ್ನೇಹಿತೆಯರು ರೂಮ್ ಬಾಗಿಲು ತಟ್ಟಿದರೂ ಕೂಡ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಂತೆ. ಯುವತಿಯ ಮೌನದಿಂದ ಗಾಬರಿಯಾದ ಸ್ನೇಹಿತರು, ರೂಮ್ನ ಬಾಗಿಲನ್ನು ಮುರಿದು ಒಳ ಹೋಗಿ ನೋಡಿದಾಗ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳಂತೆ. ಪೊಲೀಸರು ಹೇಳುವ ಪ್ರಕಾರ ರೂಮ್ ಒಳಗಿನಿಂದಲೇ ಲಾಕ್ ಆಗಿತ್ತು ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಸೆ.28ಕ್ಕೆ ಬರಲಿದೆ ಮನೆಗೆ ಮುದ್ದು ಮಗು; ಇದೇ ಡೇಟ್ ನಿಶ್ಚಯ ಯಾಕೆ?
ಅದು ಮಾತ್ರವಲ್ಲ ಆರಂಭಿಕ ತನಿಖೆಯಲ್ಲಿ ಯುವತಿಯ ಬಟ್ಟೆಯಲ್ಲಿ ಯಾವುದೇ ಅಸ್ತವ್ಯಸ್ಥ ಕಂಡಿಲ್ಲ. ಅಲ್ಲದೇ ದೇಹದಲ್ಲಿ ಯಾವುದೇ ರೀತಿಯ ಗಾಯದ ಗುರುತುಗಳು ಕೂಡ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದ್ದು, ಅದರ ವರದಿ ಬಂದ ನಂತರವಷ್ಟೇ ಸಾವಿಗೆ ಅಸಲಿ ಕಾರಣವೇನು ಅನ್ನೋದು ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Jio, Airtel, Voda ಗ್ರಾಹಕರಿಗೆ ಗುಡ್‌ನ್ಯೂಸ್; TRAIನಿಂದ ದೊಡ್ಡ ನಿರ್ಧಾರ, ಆದರೆ ಕಾಯಬೇಕು!
ಇಷ್ಟೆಲ್ಲಾ ಆದರೂ ಕೂಡ ಇಲ್ಲಿಯವರೆಗೂ ಯುವತಿಯ ಕುಟುಂಬದಿಂದ ಇನ್ನೂ ಕೂಡ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಮುಂದಿನ ತನಿಖೆ ಪೋಸ್ಟ್ ಮಾರ್ಟಮ್ ವರದಿ ಬಂದ ಬಳಿಕವೇ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ