newsfirstkannada.com

×

ಬಿಗ್ ಬಾಸ್ ಮನೆಯಲ್ಲೂ ಗುಡುಗಿದ ಲಾಯರ್ ಜಗದೀಶ್.. ಭ್ರಷ್ಟ ನಾಯಕರ ಬಗ್ಗೆ ಸ್ಫೋಟಕ ಹೇಳಿಕೆ!

Share :

Published September 29, 2024 at 5:36pm

Update September 29, 2024 at 5:38pm

    ಹೊಸ ಅಧ್ಯಾಯದ ಮುನ್ನುಡಿಗೆ ಕೆಲವೇ ನಿಮಿಷಗಳು ಬಾಕಿ

    ರಾಯಲ್​ ಲುಕ್​​ನಲ್ಲಿ ಬಿಗ್​ ಮನೆಗೆ ಎಂಟ್ರಿ ಕೊಟ್ಟ ಅಡ್ವೊಕೇಟ್

    ಸಖತ್​ ಗ್ರ್ಯಾಂಡ್​ ಆಗಿ ಬಿಗ್​ಬಾಸ್​ ವೇದಿಕೆಗೆ ಬಂದ ಕಿಚ್ಚ ಸುದೀಪ್​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ ಸೀಸನ್​ 11ಕ್ಕೆ ಅರ್ಧ ಗಂಟೆ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ವೀಕ್ಷಕರು ಟಿವಿ ಆನ್​ ಮಾಡಿ ಕುಳಿತುಕೊಂಡು ಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಈ ಬಾರಿಯ ಬಿಗ್​ಬಾಸ್​ ಸೀಸನ್​ 11 ಹವಾ ಕ್ರಿಯೇಟ್​ ಮಾಡಿದೆ.

ಸದ್ಯ ನಿನ್ನೆ ರಾಜಾರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ಬಿಗ್​ಬಾಸ್​ಗೆ ಹೋಗುವ 4 ಸ್ಪರ್ಧಿಗಳ ಹೆಸರನ್ನು ಪ್ರೋಮೋ ಮೂಲಕ ವೀಕ್ಷಕರಿಗೆ ತಿಳಿಸಿದ್ದರು. ಇದೀಗ ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಪ್ರೋಮೋವೊಂದನ್ನು ರಿಲೀಸ್​ ಮಾಡಲಾಗಿದೆ. ಈ ಪ್ರೋಮೋದಲ್ಲಿ ಲಾಯರ್​ ಜಗದೀಶ್ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ!

ಕಳೆದ ಐದಾರು ವರ್ಷಗಳಿಂದಲೂ ಲಾಯರ್​ ಜಗದೀಶ್​​ ಅವರು ಸುದ್ದಿಯಲ್ಲೇ ಇದ್ದಾರೆ. ಇತ್ತೀಚೆಗೆ ನಟ ದರ್ಶನ್​ ವಿಚಾರವಾಗಿಯೂ ಸುದ್ದಿ ಮಾಡಿದ್ದರು. ಸ್ಯಾಂಡಲ್​ವುಡ್​ ನಟ ದರ್ಶನ್​ ಕೇಸ್​ನಲ್ಲಿಯೂ ಯಾರದ್ದೋ ಕೈವಾಡ ಇದೆ. ನಾವು ದರ್ಶನ್​​ ಕೇಸ್​ ಮರು ತನಿಖೆಗೆ ಆಗ್ರಹಿಸುತ್ತೇನೆ ಎಂದು ಫ್ರೀಡಮ್​ ಪಾರ್ಕ್​ನಲ್ಲಿ ಪ್ರೊಟೆಸ್ಟ್​ ಮಾಡಿದ್ದರು. ಲಾಯರ್​ ಜಗದೀಶ್​​ ಈತ ಸದಾ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ಸದ್ಯ ಕಲರ್ಸ್​ ಕನ್ನಡ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಮುಂದೆ ಲಾಯರ್​ ಜಗದೀಶ್ ಸಮಾಜದಲ್ಲಿ ನಡೆಯುತ್ತಿರೋ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ.

ಜನಗಳ ಮುಖದಲ್ಲಿ ನಗು ಇಲ್ಲ. ಅದಕ್ಕೆ ನಾನಾ ಕಾರಣಗಳು ಇವೆ. ಕೆಲವರು EMI ಕಟ್ಟಿಲ್ಲ ಅಂತಾ, ಮಕ್ಕಳ ಫೀಸ್​ ಕಟ್ಟಿಲ್ಲ ಅಂತಾ, ಇನ್ನೂ ಕೆಲವರಿಗೆ ಜೀವನ ಅಂದ್ರೆನೇ ದೊಡ್ಡ ಚಾಲೆಂಜ್​ ಆಗುತ್ತೆ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಈ ಬಗ್ಗೆ ಧ್ವನಿ ಎತ್ತುವವರೆ ಇಲ್ಲ ಅಂತ ಕಿಚ್ಚ ಸುದೀಪ್​ ಮುಂದೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್ ಬಾಸ್ ಮನೆಯಲ್ಲೂ ಗುಡುಗಿದ ಲಾಯರ್ ಜಗದೀಶ್.. ಭ್ರಷ್ಟ ನಾಯಕರ ಬಗ್ಗೆ ಸ್ಫೋಟಕ ಹೇಳಿಕೆ!

https://newsfirstlive.com/wp-content/uploads/2024/09/lawyer-jagadish2.jpg

Load More