newsfirstkannada.com

ಲಕ್ಷ್ಮಿ ಬಾರಮ್ಮ​ ಸೀರಿಯಲ್​​ನ ಗಂಗಕ್ಕಾ ಲುಕ್​ಗೆ ಹೌಹಾರಿದ ನೆಟ್ಟಿಗರು; ಅದು ಸ್ವಲ್ಪ ಓವರ್ ಆಯ್ತು ಅನ್ನೋದಾ..!

Share :

Published September 4, 2024 at 10:40am

    ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ಗಂಗಾ ಪಾತ್ರ ಮೂಲಕ ಮೆಚ್ಚುಗೆ ಗಳಿಸಿದ ನಟಿ

    ಕಿರುತೆರೆಯಲ್ಲಿ ಅಷ್ಟೇ ಅಲ್ಲದೇ ಬೆಳ್ಳಿತೆರೆ ಮೇಲು ಮಿಂಚುತ್ತಿರೋ ನಟಿ ಹರ್ಷಿತಾ

    ಶ್ರಾವಣಿ ಸುಬ್ರಮಣ್ಯ, ಸುಂದರಿ ಸೇರಿದಂತೆ ಹಲವಾರು ಸೀರಿಯಲ್​ನಲ್ಲಿ ಅಭಿನಯ

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ತನ್ನದೆ ಆದ ಅಭಿಮಾನಿಗಳನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಪ್ರತಿಯೊಂದು ಪಾತ್ರವೂ ಜನರಿಗೆ ಇಷ್ಟವಾಗಿದೆ. ಹೀಗಾಗಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಟಾಪ್​ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ವಿಚಿತ್ರ ಟ್ವಿಸ್ಟ್​; ಈಕೆ ಕೀರ್ತಿನಾ.. ಲಕ್ಷ್ಮೀನಾ.. ತಲೆ ಕೆಡಿಸಿಕೊಂಡ ಕುಟಂಬಸ್ಥರು

ಇದೇ ಸೀರಿಯಲ್​ನಲ್ಲಿ ಮನೆ ಕೆಲಸದಾಕೆ ಗಂಗಾ ಪಾತ್ರದಲ್ಲಿ ನಟಿಸುತ್ತಿರೋ ನಟಿ ಹರ್ಷಿತಾ ಯಾರಿಗೆ ಗೊತ್ತಿಲ್ಲ ಹೇಳಿ. ಕಾಮಿಡಿ ಜೊತೆಗೆ ಸಖತ್ ಎಂಟರ್ಟೈನ್​ಮೆಂಟ್  ನೀಡುತ್ತಾ ಇರುತ್ತಾರೆ ನಟಿ ಹರ್ಷಿತಾ. ಇದೇ  ಧಾರಾವಾಹಿಯಲ್ಲಿ ಸೀರೆಯುಟ್ಟು, ಕಿವಿಗೆ ಇಯರ್ ಫೋನ್ ಇಟ್ಕೊಂಡು, ಕೈಯಲ್ಲಿ ಸೌಟ್ ಇಡ್ಕೊಂಡು, ಎಲ್ಲರನ್ನೂ ನಗಿಸುತ್ತಿರುವ ಹಾಗೂ ಲಕ್ಷ್ಮೀಗೆ ಧೈರ್ಯ ತುಂಬುವ ಪಾತ್ರ ಗಂಗದ್ದಾಗಿದೆ. ಅದೇ ಪಾತ್ರಕ್ಕೆ ತಕ್ಕಂತೆ ನಟಿಸುತ್ತಿದ್ದಾರೆ ನಟಿ ಹರ್ಷಿತಾ.

ನಟಿ ಹರ್ಷಿತಾ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಹೌದು ಸೀರಿಯಲ್​ನಲ್ಲಿ ಚೆಂದವಾಗಿ ಸೀರೆಯುಟ್ಟು ಪಟ ಪಟ ಅಂತ ಮಾತಾಡೋ ಗಂಗಾ ರಿಯಲ್ ಲೈಫ್​ನಲ್ಲಿ ಸಖತ್ ಮಾಡರ್ನ್ ಆಗಿದ್ದಾರೆ. ಟ್ರೆಡಿಷನಲ್ ಗೂ ಸೈ, ಮಾಡರ್ನ್​ ಲುಕ್​ಗೂ ಸೈ ಅಂತಾರೆ. ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಹರ್ಷಿತಾ ಸಖತ್​ ಮಾಡರ್ನ್ ಲುಕ್​ನಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ವೀಕ್ಷಕರು ಇದೇನಾ ಲಕ್ಷ್ಮೀ ಬಾರಮ್ಮ ಗಂಗಕ್ಕಾ, ಚೆನ್ನಾಗಿದೆ ಆದರೆ ಮೇಕಪ್​ ಸ್ವಲ್ಪ ಓವರ್ ಆಯ್ತು, ಏನೇ ಹೇಳಿ ನಿಮಗೆ ಗಂಗಾ, ಧನಲಕ್ಷ್ಮಿ ಲುಕ್​ ಚೆಂದ, ಅಯ್ಯೋ ನೀವೇ ಅಂತ ಗೊತ್ತಾಗುತ್ತಿಲ್ಲ ಮೇಡಂ, ಸೂಪರ್​ ಗಂಗಾ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ಇದನ್ನೂ ಓದಿ: ದರ್ಶನ್ ಕೇಸ್​ಗೆ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!

ನಟಿ ಹರ್ಷಿತಾ ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿಯವರು. ಮಜಾ ಭಾರತ ರಿಯಾಲಿಟಿ ಶೋ, ಲಕ್ಷ್ಮೀ ಬಾರಮ್ಮ, ಶ್ರಾವಣಿ ಸುಬ್ರಮಣ್ಯ ಧಾರಾವಾಹಿ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ, ಜೋಗ್​ 101 ಸಿನಿಮಾ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟಿ ಹರ್ಷಿತಾ ಅವರ ಪತಿ ಸಂದೀಪ್ ಕೂಡ ಗಿಚ್ಚಿ ಗಿಲಿಗಿಲಿ, ರಾಜಾರಾಣಿ ಸೇರಿದಂತೆ ಹಲವು ರಿಯಾಲಿಟಿ ಶೋಗಳ ಕಾಮಿಡಿ, ಸ್ಕಿಟ್​ಗಳಿಗೆ ಕಥೆ ಬರೆಯುವ ಬರಹಗಾರ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷ್ಮಿ ಬಾರಮ್ಮ​ ಸೀರಿಯಲ್​​ನ ಗಂಗಕ್ಕಾ ಲುಕ್​ಗೆ ಹೌಹಾರಿದ ನೆಟ್ಟಿಗರು; ಅದು ಸ್ವಲ್ಪ ಓವರ್ ಆಯ್ತು ಅನ್ನೋದಾ..!

https://newsfirstlive.com/wp-content/uploads/2024/09/Actress-Harshitha.jpg

Load More