newsfirstkannada.com

ಗೃಹಲಕ್ಷ್ಮೀ ಸ್ಕೀಮ್​​ 2 ಸಾವಿರ ಹಣ ಅತ್ತೆಗಾ..? ಸೊಸೆಗಾ..? ಎಂದು ಬಿಚ್ಚಿಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

Share :

30-05-2023

    ಗೃಹಲಕ್ಷ್ಮೀ ಸ್ಕೀಮ್​​ 2 ಸಾವಿರ ಹಣ ಅತ್ತೆಗಾ..? ಸೊಸೆಗಾ..?

    ಈ ಸ್ಕೀಮ್​​​ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು..?

    2 ಸಾವಿರ ಯಾರಿಗೆ ಸಿಗುತ್ತೆ ಎಂದು ತಿಳಿದುಕೊಳ್ಳಲು ಸ್ಟೋರಿ ಓದಿ!

ಬೆಳಗಾವಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಹೋಗುವ ಮುನ್ನ ಕಾಂಗ್ರೆಸ್​​​ ತನ್ನನ್ನು ಗೆಲ್ಲಿಸಿದರೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಹೇಳಿತ್ತು. ಈ ಗ್ಯಾರಂಟಿಗಳಿಗಾಗಿ ಜನ ವೋಟ್​​ ಹಾಕಿ ಕಾಂಗ್ರೆಸ್ಸಿಗೆ ಬಹುಮತ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ಸಂಪುಟ ರಚನೆಯಾಗಿದೆ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಇದರಲ್ಲಿ ಯಾರಿಗೆ ಯಾವ ಮಾನದಂಡದ ಆಧಾರದ ಮೇರೆಗೆ ಸ್ಕೀಮ್​​ ಸಿಗಲಿದೆ ಎಂಬ ಚರ್ಚೆಗಳು ಜೋರಾಗಿವೆ. ಹೀಗಿರುವಾಗ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ 2 ಸಾವಿರ ಹಣ ಅತ್ತೆಗೆ ಸಿಗುತ್ತಾ? ಸೊಸೆಗೆ ಸಿಗುತ್ತಾ? ಎಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಈ ಸಂಬಂಧ ಮಾತಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​, ಗೃಹಲಕ್ಷ್ಮೀ ಸ್ಕೀಮ್​​​​ ಅತ್ತೆಗೆ ಮಾತ್ರ ಎಂದಿದ್ದಾರೆ. ನಮ್ಮ ಸಂಪ್ರದಾಯದಲ್ಲಿ ಮನೆ ಒಡತಿ ಯಾವಾಗಲೂ ಅತ್ತೆ ಅವರೇ. ಹೀಗಾಗಿ ಅತ್ತೆಗೆ ಗೃಹಲಕ್ಷ್ಮೀ ಯೋಜನೆ ಹಣ ನೀಡುತ್ತೇವೆ. ಅತ್ತೆ ಸೊಸೆಗೆ ಪ್ರೀತಿಯಿಂದ ನೀಡಲಿ ಎಂದರು.

ಹೀಗೆ ಹೇಳಿಕೆ ನೀಡುವ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್​​ ಸೊಸೆಗೆ ಗೃಹಲಕ್ಷ್ಮೀ ಸ್ಕೀಮ್​ ಹಣ ಸಿಗುವುದಿಲ್ಲ ಎಂದಿದ್ದಾರೆ. ಜತೆಗೆ ನಾಳೆ ಅಧಿಕಾರಿಗಳ ಜತೆ ಸಭೆ ನಡೆಸಿ ಯಾವ ರೀತಿ ಸ್ಕೀಮ್​ ಅನುಷ್ಠಾನ ಮಾಡಬೇಕು ಎಂದು ಯೋಚನೆ ಮಾಡುತ್ತೇವೆ ಎಂದಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್​.

ಗೃಹಲಕ್ಷ್ಮೀ ಸ್ಕೀಮ್​​ 2 ಸಾವಿರ ಹಣ ಅತ್ತೆಗಾ..? ಸೊಸೆಗಾ..? ಎಂದು ಬಿಚ್ಚಿಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

https://newsfirstlive.com/wp-content/uploads/2023/05/Laxmi-Hebbalkar-1.jpg

Load More