newsfirstkannada.com

ಮಗ ತೆರಿಗೆ ಕಟ್ಟಿದ್ರೆ ಯಜಮಾನಿಗೆ 2000 ರೂ ಸಿಗಲ್ವಾ?; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Share :

09-06-2023

    ಗೃಹಲಕ್ಷ್ಮಿ ಯೋಜನೆಯ ಗೊಂದಲಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

    ಮಗ ತೆರಿಗೆ ಕಟ್ಟಿದ್ರೆ ಮನೆಯ ಯಜಮಾನಿಗೆ 2000 ರೂ ಸಿಗಲ್ವಾ?

    ನಾಡಿನ ಜನತೆಗೆ ಗುಡ್​​ನ್ಯೂಸ್​​ ಕೊಟ್ರಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

ಬೆಂಗಳೂರು: ಗಂಡ ಅಥವಾ ಮಗ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ ಎಂದು ನೀಡಿದ್ದ ಹೇಳಿಕೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಾಮಾಜಿಕ ಜಾಲತಾಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ನಮೂನೆ ವೈರಲ್ ಆಗುತ್ತಿದೆ. ಅದು ಅಸಲಿ ಚಿತ್ರವಾಗಿದೆ. ಆದರೆ ಅದರಲ್ಲಿ ಕೆಲವು ಬದಲಾವಣೆ ಮಾಡಲಿದ್ದೇವೆ. ಬ್ಯಾಂಕ್ ಪಾಸ್‍ಬುಕ್ ಅಕೌಂಟ್​ ನಂಬರ್​ ಕೇಳಿದ್ದೇವೆ. ಜಾತಿ ಬದಲಿಗೆ ವರ್ಗ ಎಂದು ಬದಲಾಯಿಸಲಾಗುವುದು. ಮಗ ತೆರಿಗೆ ಕಟ್ಟೋದು ಗೃಹಲಕ್ಷ್ಮಿಗೆ ಅನ್ವಯ ಆಗಲ್ಲ. ಗಂಡ- ಮಗ ತೆರಿಗೆ ಪಾವತಿದಾರರಾಗಿದ್ರೆ ಸಿಗಲ್ಲ ಎಂದಿದ್ರು. ಮಗ ತೆರಿಗೆದಾರನಾಗಿದ್ರೂ 2 ಸಾವಿರ ಸಿಗುತ್ತೆ ಎಂದು ಗೃಹಲಕ್ಷ್ಮಿ ಯೋಜನೆ ಗೊಂದಲ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರವೇನೋ ಕೊಟ್ಟ ಮಾತಿಗೆ ತಪ್ಪದೇ ಗ್ಯಾರಂಟಿ ಜಾರಿ ಮಾಡಲು ಸಜ್ಜಾಗಿದೆ. ಆದರೆ ಇದರ ಮಧ್ಯೆ ಒಂದಲ್ಲ ಒಂದು ಗೊಂದಲ ಹುಟ್ಟಿಕೊಳ್ತಾನೆ ಇವೆ. ಗೃಹಜ್ಯೋತಿ ಬಗೆಗಿನ ಡೌಟ್‌ ಕ್ಲಿಯರ್ ಆಗ್ತಿದ್ದಂತೆ ಯಾವೆಲ್ಲಾ ಗೃಹಗಳಿಗೆ ಲಕ್ಷ್ಮೀ ಒಲಿಯುತ್ತಾಳೆ ಎಂಬ ಪ್ರಶ್ನೆ ಎದುರಾಗಿದೆ. ಪ್ರತಿ ಮನೆಯ ಯಜಮಾನಿಗೆ ಕಾಂಗ್ರೆಸ್‌ ಸರ್ಕಾರ ಘೋಷಿಸಿರೋ 2 ಸಾವಿರ ರೂಪಾಯಿ ಸಿಗುವ ಮಹತ್ವಾಕಾಂಕ್ಷಿ ಯೋಜನೆ. ಆದ್ರೆ, ಈ ಸ್ಕೀಂ ಬಗ್ಗೆ ಸರ್ಕಾರ ಇದೀಗ ಉಲ್ಟಾ ಹೊಡೆದಿದೆ. ಮೊದಲು, ಟ್ಯಾಕ್ಸ್ ಪೇಯರ್ಸ್‌ ಮನೆಗೆ ಗೃಹಲಕ್ಷ್ಮೀ ಬರಲ್ಲ ಅಂತಾ ಸರ್ಕಾರ ಹೇಳಿತ್ತು. ಮನೆಯಲ್ಲಿ ಗಂಡ ಅಥವಾ ಮಗ ಯಾರೇ ಸರ್ಕಾರಕ್ಕೆ ತೆರಿಗೆ ಕಟ್ತಿದ್ರೆ, ಜಿಎಸ್‌ಟಿ ಕಟ್ಟುತ್ತಿದ್ದರೆ ಅವರ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆ ಸಿಗಲ್ಲ ಅಂತಾನೇ ಸರ್ಕಾರ ಹೇಳಿತ್ತು. ಆದರೆ ಇದೀಗ ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗ ತೆರಿಗೆ ಕಟ್ಟಿದ್ರೆ ಯಜಮಾನಿಗೆ 2000 ರೂ ಸಿಗಲ್ವಾ?; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

https://newsfirstlive.com/wp-content/uploads/2023/06/laxmi-5.jpg

Load More