/newsfirstlive-kannada/media/post_attachments/wp-content/uploads/2024/12/venki2.jpg)
ಲಕ್ಷ್ಮೀ ನಿವಾಸ ಸೀರಿಯಲ್​ ಅದ್ಭುತವಾಗಿ ಮೂಡಿಬರ್ತಿದೆ. ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ತೂಕ ಇದ್ದು, ಕಲಾವಿದರು ವೀಕ್ಷಕರ ಮನಸ್ಸಲ್ಲಿ ಅಚ್ಚೊತ್ತಿದ್ದಾರೆ. ಅದರಲ್ಲೂ ವೆಂಕಿ ಪಾತ್ರ ಸೂಕ್ಷ್ಮವಾದ ಸಂವೇದನೆ ಹೊಂದಿದೆ. ವೆಂಕಿ ಕಣ್ಣಲ್ಲಿ ನೀರು ಬಂದ್ರೇ ವೀಕ್ಷಕರ ಕಣ್ಣು ತುಂಬಿಕೊಳ್ಳುತ್ತೆ.
/newsfirstlive-kannada/media/post_attachments/wp-content/uploads/2024/04/laxmi-nivasa.jpg)
ಈ ಥರದ ಒಬ್ಬ ಮಗ, ಅಣ್ಣ, ತಮ್ಮ ಇರಬೇಕು ಅಂತ ಅನಿಸುತ್ತೆ. ಅಷ್ಟು ಚಂದವಾದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ವೆಂಕಿ. ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ವೆಂಕಿ ಪಾತ್ರಕ್ಕೆ ಸಂಭಾಷಣೆನೇ ಇಲ್ಲ. ಮಾತು ಬಾರದ ಕಿವಿ ಕೇಳದ ಪಾತ್ರ ಅದು. ತುಂಬಾನೇ ಚಾಲೆಂಜಿಂಗ್​ ಇರೋ ಪಾತ್ರವನ್ನ ಮನಮುಟ್ಟುವಂತೆ ಅಭಿನಯಿಸುತ್ತಿದ್ದಾರೆ ನಟ. ಅವರ ಪಾತ್ರ ಪೋಷಣೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಧಾರಾವಾಹಿ ಕಥೆಯಲ್ಲಿ ಮಾತ್ರ ಆ ಸಂಬಂಧ ಸೀಮಿತವಾಗಿಲ್ಲ. ಅದರ ಆಚೆಗೂ ಪ್ರೀತಿ, ವಿಶ್ವಾಸ ಇದೆ.
/newsfirstlive-kannada/media/post_attachments/wp-content/uploads/2024/12/venki.jpg)
ವೆಂಕಿ ಪಾತ್ರಕ್ಕೆ ನಟ ಚಂದ್ರಶೇಖರ್ ಶಾಸ್ತ್ರಿ ಅವರು ಜೀವ ತುಂಬಿದ್ದಾರೆ. ರಂಗಭೂಮಿ ಕಲಾವಿದರಾದ ಶಾಸ್ತ್ರಿ ಅವರು ಅದ್ಭುತ ಕಲಾವಿದ. ದಾಸ ಪುರಂದರ ಧಾರಾವಾಹಿಯಲ್ಲಿ ಪಟಪಟ ಅಂತ ಅರಳು ಹುರಿದಂತೆ ಮಾತಾಡುತ್ತಿದ್ದ ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಅಲ್ಲಿಂದ ಕಟ್​ ಮಾಡಿದ್ರೇ ಸಂಪೂರ್ಣ ವಿಭಿನ್ನ ಪಾತ್ರ ಲಕ್ಷ್ಮೀ ನಿವಾಸದ ಮಾತು ಬಾರದ ವೆಂಕಟೇಶ್ ಅಂದ್ರೇ ವೆಂಕಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರ ಅಭಿನಯದ ಪಕ್ವತೆಗೆ ಈ ಎರಡೂ ಪಾತ್ರಗಳೇ ಸಾಕ್ಷಿ.
/newsfirstlive-kannada/media/post_attachments/wp-content/uploads/2024/12/venki1.jpg)
ಇನ್ನೂ, ವೆಂಕಿ ಜೊತೆಗೆ ಮಾತಾಡಬೇಕು ಅನ್ನೋದು ಎಷ್ಟೋ ವೀಕ್ಷಕರ ಆಸೆ. ಆದರೆ ಇದು ಈಡೇರುತ್ತಿಲ್ಲ ಅಂತ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿದ್ದರು. ಹೀಗಾಗಿನೇ ವೀಕ್ಷಕರಿಗಾಗಿಯೇ ಹೊಸ ಯೋಜನೆ ರೂಪಿಸಿದ್ದಾರೆ ನಟ ಚಂದ್ರಶೇಖರ್ ಶಾಸ್ತ್ರಿ. ನೀವು ಕೂಡ ವೆಂಕಿ ಜೊತೆ ಮಾತಾಡಬೇಕು ಅಂದ್ರೇ ನಿಮ್ಮ ಹತ್ತಿರ ಇರೋ ಹಳೆ ಪುಸ್ತಕದ ಜೊತೆಗೆ ವೆಂಕಿ ಪಾತ್ರದ ಬಗ್ಗೆ ನಿಮಗೆ ಏನು ಅನ್ಸುತ್ತೆ ಅಂತ ಒಂದೇರಡು ಸಾಲುಗಳಲ್ಲಿ ಬರೆದು, ನಿಮ್ಮ ಫೋನ್​ ನಂಬರ್​ ಹಾಕಿ, ಪುಸ್ತಕವನ್ನ ಶಾಸ್ತ್ರಿ ಅವರ ವಿಳಾಸಕ್ಕೆ ಕಳುಹಿಸಿ. ಪುಸ್ತಕ ತಲುಪಿದ ಕೂಡಲೇ ಅವರೇ ನಿಮಗೆ ಕರೆ ಮಾಡ್ತಾರೆ.ವೀಕ್ಷಕರ ಆಸೆಯನ್ನು ಈಡೇರಿಸಲು ಒಳ್ಳೆ ಪ್ರಯತ್ನ ಅಂತನೇ ಹೇಳಬಹುದು. ಪುಸ್ತಕ ಸಂಗ್ರಹದ ಜೊತೆಗೆ ವೀಕ್ಷಕರ ಜೊತೆಗೆ ಕನೆಕ್ಟ್​ ಆಗೋಕೆ ಚಂದದ ಉಪಾಯ ಕೂಡ ಮಾಡಿದ್ದಾರೆ ನಟ ಚಂದ್ರಶೇಖರ್ ಶಾಸ್ತ್ರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us