newsfirstkannada.com

ಅಂದು ಹೊಗಳಿ, ಇಂದು ತೆಗಳುತ್ತಿರುವ ಗವಾಸ್ಕರ್​.. ​ಅಷ್ಟಕ್ಕೂ ರೋಹಿತ್​ ಶರ್ಮಾ ಮೇಲೆ ಕಿಡಿಕಾರುತ್ತಿರೋದ್ಯಾಕೆ?  

Share :

11-07-2023

    ದ್ರಾವಿಡ್​​ ಸಾಮರ್ಥ್ಯವನ್ನೂ ಪ್ರಶ್ನಿಸಿದ ಲೆಜೆಂಡ್

    ಹಿಗ್ಗಾಮುಗ್ಗಾ ವಾಗ್ದಾಳಿ​ ನಡೆಸಿದ ಸುನಿಲ್​ ಗವಾಸ್ಕರ್​​.!

    ರೋಹಿತ್​ - ದ್ರಾವಿಡ್​​ಗೆ ವಿಂಡೀಸ್​​ನಲ್ಲಿ ‘ರಿಯಲ್​ ಟೆಸ್ಟ್​​’

ಇಂಡೋ – ವಿಂಡೀಸ್​ ಟೆಸ್ಟ್​ ಸರಣಿಗೆ ಕೌಂಟ್​​ಡೌನ್​ ಶುರುವಾಗಿದೆ. ಇನ್ನೊಂದು ದಿನ ಕಳೆದ್ರೆ ಡೊಮಿನಿಕಾದಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಭರ್ಜರಿ ಸಿದ್ಧತೆ ನಡೆಸಿರೋ ಟೀಮ್​ ಇಂಡಿಯಾ ಶುಭಾರಂಭದ ನಿರೀಕ್ಷೆಯಲ್ಲಿದೆ. ಇದರ ನಡುವೆ ಕ್ಯಾಪ್ಟನ್​​ ರೋಹಿತ್​ ಶರ್ಮಾ ಸಾಮರ್ಥ್ಯದ ಬಗ್ಗೆ ಬಿಗ್​ ಡಿಬೆಟ್​ ನಡೀತಿದೆ. ಲೆಜೆಂಡ್​ ಸುನಿಲ್​ ಗವಾಸ್ಕರ್​ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಟೀಮ್​ ಇಂಡಿಯಾದ ನಾಯಕನ ಪಟ್ಟದಿಂದ ಕೊಹ್ಲಿಯನ್ನ ಕೆಳಗಿಳಿಸಿದಾಗ ರೋಹಿತ್​ ಶರ್ಮಾ ಪರ ಲೆಜೆಂಡ್​ ಸುನಿಲ್​ ಗವಾಸ್ಕರ್​ ಬ್ಯಾಟಿಂಗ್​ ಮಾಡಿದ್ರು. ಐಪಿಎಲ್​ನಲ್ಲಿ 5 ಟ್ರೋಫಿ ಗೆಲ್ಲಿಸಿಕೊಟ್ಟ ಮುಂಬೈಕರ್​​, ಟೀಮ್​ ಇಂಡಿಯಾದ ನಾಯಕನಾಗಿಯೂ ಸಕ್ಸಸ್​ ಕಾಣ್ತಾರೆ ಅನ್ನೋ ಗವಾಸ್ಕರ್​​ ಅಭಿಪ್ರಾಯವಾಗಿತ್ತು. ಇಷ್ಟೇ ಅಲ್ಲ.. ಕ್ಯಾಪ್ಟನ್​ ರೋಹಿತ್​​ ಶರ್ಮಾ – ಕೋಚ್​​ ರಾಹುಲ್​ ದ್ರಾವಿಡ್​​ ಟೀಮ್​ ಇಂಡಿಯಾದಲ್ಲಿ ಕ್ರಾಂತಿ ಮಾಡ್ತಾರೆ ಎಂದಿದ್ರು. ಆದ್ರೆ, ಈಗ ಆಗಿರೋದೆ ಬೇರೆ..!

ನಾಯಕನಾಗಿ ವೈಫಲ್ಯ ಕಂಡ ರೋಹಿತ್​ ಶರ್ಮಾ.!

ತವರು ಮುಂಬೈ ಆಟಗಾರ ಎಂಬ ವ್ಯಾಮೋಹಕ್ಕೋ ಏನೋ ರೋಹಿತ್​ ಶರ್ಮಾ ಪರ ಗವಾಸ್ಕರ್​​ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೊಹ್ಲಿ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ಆ ಸ್ಥಾನಕ್ಕೆ ರೋಹಿತ್​ ಸೂಕ್ತ ಎಂದಿದ್ರು. ಇಷ್ಟೇ ಅಲ್ಲ, ರೋಹಿತ್​ ಶರ್ಮಾ ಭಾರೀ ಬದಲಾವಣೆ ತರ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು. ಆದ್ರೆ, ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. ಗವಾಸ್ಕರ್​ ಕೂಡ ವರಸೆ ಬದಲಿಸಿದ್ದಾರೆ. ಅಂದು ಭರ್ಜರಿ ಬ್ಯಾಟಿಂಗ್​ ಮಾಡಿದ್ದ ರೋಹಿತ್​ ಪರವೇ ಇಂದು ಕಿಡಿಕಾರ್ತಿದ್ದಾರೆ.

ರೋಹಿತ್​ ನಿರಾಸೆ ಮೂಡಿಸಿದ್ದಾರೆ

‘ನಾನು ರೋಹಿತ್​ ಶರ್ಮಾರಿಂದ ಇನ್ನೂ ಹೆಚ್ಚನ್ನ ನಿರೀಕ್ಷಿಸಿದ್ದೆ. ಭಾರತ ಬೇರೆ. ವಿದೇಶದಲ್ಲಿ ಏನು ಮಾಡ್ತೀರಿ ಅನ್ನೋದು ನಿಜವಾದ ಪರೀಕ್ಷೆ. ಅಲ್ಲಿ ರೋಹಿತ್​ ನಿರಾಸೆ ಮೂಡಿಸಿದ್ದಾರೆ. ಟಿ20 ಮಾದರಿಯಲ್ಲಿ ಕೂಡ. ಐಪಿಎಲ್​ನಲ್ಲಿ ಆಡಿದ ಅನುಭವವಿದೆ. ನಾಯಕನಾಗಿ 100ಕ್ಕೂ ಹೆಚ್ಚು ಪಂದ್ಯ ಆಡಿದ್ದಾರೆ. ಐಪಿಎಲ್​ ಆಡಿದ ಉತ್ತಮ ಆಟಗಾರರ ತಂಡವಿದ್ದೂ ಫೈನಲ್​ಗೂ ಕ್ವಾಲಿಫೈ ಆಗಲಿಲ್ಲ ಅನ್ನೋದು ನಿರಾಶದಾಯಕ’
ಸುನಿಲ್​ ಗವಾಸ್ಕರ್​, ಮಾಜಿ ಕ್ರಿಕೆಟಿಗ

ನಾಯಕನಾಗಿ ರೋಹಿತ್​ ಫೇಲ್​ ಎಂದ್ರಾ ಗವಾಸ್ಕರ್​.?

ಟಿ20 ವಿಶ್ವಕಪ್​ನ ಹೀನಾಯ ನಿರ್ಗಮನ ಮಾತ್ರವಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೋಲಿನ ಬಗ್ಗೆಯೂ ಗವಾಸ್ಕರ್​ ಪ್ರಶ್ನಿಸಿದ್ದಾರೆ. ಫೈನಲ್​ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ರೋಹಿತ್​ ಶರ್ಮಾ, ನಮಗೆ ಸಿದ್ಧತೆಗೆ 20 ದಿನಗಳು ಬೇಕಿದ್ವು ಎಂದಿದ್ರು. ಇದನ್ನ ಈಗ ಗವಾಸ್ಕರ್​ ಪ್ರಶ್ನಿಸಿದ್ದು, ವಿಂಡೀಸ್​ ಪ್ರವಾಸದಲ್ಲಿ ಈಗ ಏನ್​ ಮಾಡ್ತಿದ್ದೀರಿ ಎಂದು ಕೇಳಿದ್ದಾರೆ.

ಈಗ ಪಂದ್ಯವನ್ನ ಆಡ್ತಾ ಇದ್ದೀರಾ.?

ಯಾವ ಬಗೆಯ ಸಿದ್ದತೆಯ ಬಗ್ಗೆ ನೀವು ಕೇಳಿದ್ರಿ. ಈಗ ವೆಸ್ಟ್​ ಇಂಡೀಸ್​ಗೆ ಹೋಗಿದ್ದಿರಿ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಸೋತ ಉದಾಹರಣೆ ಎದುರಿಗೆ ಇದೆ. ಈಗ ಪಂದ್ಯವನ್ನ ಆಡ್ತಾ ಇದ್ದೀರಾ.? ಹಾಗಾದ್ರೆ, 20-25 ದಿನದ ಬಗ್ಗೆ ಯಾಕೆ ಮಾತಾಡಿದ್ರಿ. ನೀವು ಸಿದ್ಧತೆಯ ಬಗ್ಗೆ ಮಾತನಾಡಿದ್ರೆ, 15 ದಿನ ಮುಂಚೆ ಹೋಗಿ, 2 ವಾರ್ಮ್​ಅಪ್​ ಪಂದ್ಯಗಳನ್ನಾಡಿ. ಸತ್ಯ ಏನಂದ್ರೆ, ಮುಖ್ಯವಾದ ಆಟಗಾರರು ಬೇಗ ಹೋಗಲು ಇಷ್ಟ ಪಡಲ್ಲ. ಯಾಕಂದ್ರೆ ಏನಾದ್ರೂ ನಾವು ಆಯ್ಕೆಯಾಗ್ತೀವಿ ಎಂದು ಅವರಿಗೆ ತಿಳಿದಿದೆ.
ಸುನಿಲ್​ ಗವಾಸ್ಕರ್​, ಮಾಜಿ ಕ್ರಿಕೆಟಿಗ

ದ್ರಾವಿಡ್​​ ಸಾಮರ್ಥ್ಯವನ್ನೂ ಪ್ರಶ್ನಿಸಿದ ಲೆಜೆಂಡ್​.!

ರೋಹಿತ್​ ಶರ್ಮಾ ಮಾತ್ರವಲ್ಲ. ಕೋಚ್​ ದ್ರಾವಿಡ್​ರನ್ನೂ ಸುನಿಲ್​ ಗವಾಸ್ಕರ್​ ಬಿಟ್ಟಿಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯದಲ್ಲಿ ಟ್ರಾವಿಡ್​​ ಹೆಡ್ ವಿರುದ್ಧ ಬೌನ್ಸರ್​ ಅಸ್ತ್ರವನ್ನ ಪ್ರಯೋಗಿಸದ್ದರ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ. ಬೌನ್ಸರ್ ಟ್ರಾವಿಸ್​ ಹೆಡ್​ರ ವೀಕ್​ನೆಸ್​ ಪಾಯಿಂಟ್​ ಎಂದು ಗೊತ್ತಿದ್ರೂ, ಆ ಅಸ್ತ್ರವನ್ನ ಪ್ರಯೋಗಿಸಲೇ ಇಲ್ಲ ಏಕೆ ಎಂದು ಗವಾಸ್ಕರ್​​, ದ್ರಾವಿಡ್​ ಗೇಮ್​​ ಪ್ಲಾನ್​ ಅನ್ನ ಟೀಕಿಸಿದ್ದಾರೆ.

ಇನ್ನು ಕೋಚಿಂಗ್​ ಸ್ಟಾಫ್​ಗಳ ಕಾರ್ಯವೈಖರಿಯನ್ನೂ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಬ್ಯಾಟ್ಸ್​​ಮನ್​ ಮತ್ತೆ ಮತ್ತೆ ಒಂದೇ ತೆರನಾಗಿ ಔಟ್​ ಆಗ್ತಿದ್ರೂ, ನೀವು ಟೆಕ್ನಿಕ್​ ಬದಲಾಯಿಸಲು ಯಾಕೆ ಮುಂದಾಗಲಿಲ್ಲ ಎಂದು ಕೇಳಿದ್ದಾರೆ.

ಗವಾಸ್ಕರ್​ ಇಷ್ಟೇಲ್ಲಾ ಟೀಕೆ ಮಾಡಿದ ಬಳಿಕ ವೆಸ್ಟ್​ ಇಂಡೀಸ್​​ ಪ್ರವಾಸ ರೋಹಿತ್​ ಶರ್ಮಾ ಹಾಗೂ ರಾಹುಲ್​ ದ್ರಾವಿಡ್​​ ಪಾಲಿಗೆ ರಿಯಲ್​ ಟೆಸ್ಟ್​ ಆಗಿ ಮಾರ್ಪಟ್ಟಿದೆ. ಕೋಚ್​ – ಕ್ಯಾಪ್ಟನ್​ ಸರಣಿ ಗೆದ್ದು ಮಾಜಿ ಕ್ಯಾಪ್ಟನ್​ ಪ್ರಶ್ನೆಗಳಿಗೆ ಖಡಕ್​​ ಉತ್ತರ ನೀಡ್ತಾರಾ.? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಹೊಗಳಿ, ಇಂದು ತೆಗಳುತ್ತಿರುವ ಗವಾಸ್ಕರ್​.. ​ಅಷ್ಟಕ್ಕೂ ರೋಹಿತ್​ ಶರ್ಮಾ ಮೇಲೆ ಕಿಡಿಕಾರುತ್ತಿರೋದ್ಯಾಕೆ?  

https://newsfirstlive.com/wp-content/uploads/2023/07/Sunil-gavaskar.jpg

Load More