ಸಿಲಿಕಾನ್ ಸಿಟಿ ಬೆಂಗಳೂರನ್ನ ಚಿರತೆಗಳ ಗೆಸ್ಟ್ಹೌಸ್ ಮಾಡಿಕೊಂಡ್ವಾ?
ಅಪಾರ್ಟ್ಮೆಂಟ್ ಸುತ್ತ ಹಾಯಾಗಿ ಓಡಾಡಿಕೊಂಡಿದ್ದ ಜನರಿಗೆ ಆತಂಕ
ಕಿಲಾಡಿ ಚಿರತೆಗಳು ಎಲ್ಲರ ಕಣ್ಣಿಗೆ ಮಣ್ಣೆರಚಿ ತಲೆ ಮರೆಸಿಕೊಂಡಿವೆ
6 ದಿನಗಳಿಂದ ಬೆಂಗಳೂರಿನ ಜನರ ನಿದ್ದೆಗೆಡಿಸಿದ್ದಾನೆ ಚಿರತೆರಾಯ. ಒಂದಲ್ಲ ಎರಡೆರಡು ಚಿರತೆಗಳು ಜನರನ್ನು ಜೀವಭಯದಲ್ಲಿ ಬದುಕುವಂತೆ ಮಾಡಿವೆ. ಈ ನಡುವೆ ಈ ಖತರ್ನಾಕ್ ಚಿರತೆಗಳು ಅರಣ್ಯಾಧಿಕಾರಿಗಳು ಇಟ್ಟ ಬೋನಿಗೆ ಬೀಳದೆ ಚಮಕ್ ಕೊಡ್ತಿವೆ. ರಾತ್ರಿ ಮತ್ತೊಮ್ಮೆ ಕಾಣಿಸಿಕೊಂಡು ಭಯ ಹುಟ್ಟಿಸಿವೆ.
ರಾತ್ರಿಯಿಡೀ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಹುಡುಕಿದ್ರೂ ಚಿರತೆಗಳು ಸಿಗುತ್ತಿಲ್ಲ. ಹಗಲೊತ್ತಲ್ಲಿ ಟ್ರಾಂಕ್ವಿಲೈಸರ್ ಗನ್ ಹಾಗೂ ಬಂದೂಕು ಹಿಡಿದುಕೊಂಡು ಅರಣ್ಯಾಧಿಕಾರಿಗಳು ಚಿರತೆ ಹಿಡಿಯಲು ನಿಂತಿದ್ದಾರೆ. ಅಲ್ಲದೇ ಮೈಸೂರಿನ ಸ್ಪೆಷಲ್ ಟೀಮ್ ಬಲೆ ಸಮೇತ ಅಖಾಡಕ್ಕಿಳಿದಿದೆ. ಆಗಸದಿಂದಲೂ ಡ್ರೋನ್ ಕಣ್ಣಿಟ್ಟಿದೆ. ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡ್ರೂ ಕಿಲಾಡಿ ಚಿರತೆಗಳು ಎಲ್ಲರ ಕಣ್ಣಿಗೆ ಮಣ್ಣೆರಚಿ ತಲೆ ಮರೆಸಿಕೊಂಡಿದೆ.
6 ತಂಡಗಳಿಂದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ
ಬೆಂಗಳೂರಿನಲ್ಲಿ 6 ದಿನಗಳಿಂದ ಜನರ ನಿದ್ದೆಗೆಡಿಸಿರುವ 2 ಚಿರತೆಗಳು ಆತಂಕಕ್ಕೀಡು ಮಾಡಿವೆ. ಕೂಡ್ಲುಗೇಟ್ನ ರವಿಕೃಷ್ಣಾರೆಡ್ಡಿ ಲೇಔಟ್ನಲ್ಲಿ ಅಪಾರ್ಟ್ಮೆಂಟ್ ಒಳಗೆ ಹಾಗೂ ಸುತ್ತಮುತ್ತ ಚಿರತೆ ಗಿರಕಿ ಹೊಡೆಯುತ್ತಿವೆ. ಇದರಿಂದ ಜನರು ಭಯಭೀತರಾಗಿದ್ದು ರಾತ್ರಿ ಹೊತ್ತು ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಹೀಗಾಗಿ ಕಳೆದೆರಡು ದಿನಗಳಿಂದ ಕೆಆರ್ ಪುರಂ, ಬನ್ನೇರುಘಟ್ಟ, ಆನೇಕಲ್, ಪ್ರಾದೇಶಿಕ ವಲಯ ಹಾಗೂ ವನ್ಯಜೀವಿ ಸಂರಕ್ಷಣಾ ತಂಡಗಳಿಂದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಇಷ್ಟಾದ್ರೂ ಕಾಣಿಸಿಕೊಳ್ಳದ ಚಿರತೆ ಕಳೆದ ತಡರಾತ್ರಿ ಮೂರನೇ ಕಣ್ಣು ಅಂದ್ರೆ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದೆ. ಕಂಪೌಂಡ್ ಮೇಲೆ ಚಿರತೆ ದೃಶ್ಯ ಬೆಚ್ಚಿ ಬೀಳಿಸುವಂತಿದೆ.
ಒಟ್ಟು 6 ಬೋನ್ ಅಳವಡಿಸಿರುವ ಅರಣ್ಯ ಇಲಾಖೆ
ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದ ಕಟ್ಟಡದಲ್ಲಿ ಚಿರತೆ ಇರೋದು ಪಕ್ಕಾ ಆಗಿದೆ. ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು, ಪೊಲೀಸರು, ಮೈಸೂರಿನ ಸ್ಪೆಷಲ್ ಟೀಮ್ ಕೂಡ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಒಟ್ಟು 6 ಬೋನ್ ಅಳವಡಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಬನ್ನೇರುಘಟ್ಟ, ಮೈಸೂರಿನಿಂದ ಇಬ್ಬರು ವೈದ್ಯರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಾತ್ರವಲ್ಲದೆ ಚಿರತೆಯ ಹೆಜ್ಜೆ ಜಾಡು ಕಂಡು ಬಂದ ಜಾಗದಲ್ಲಿ ಅರಣ್ಯಾಧಿಕಾರಿಗಳು ಬೋನ್ ಅಳವಡಿಸಿದ್ದಾರೆ. ಒಂದು ಅಥವಾ 2 ದಿನಕ್ಕೆ ಒಮ್ಮೆ ಮಾಂಸಹಾರಿ ಪ್ರಾಣಿಗಳು ಬೇಟೆಯಾಡುತ್ತವೆ. ಇನ್ನು ಈ ಪ್ರದೇಶದಲ್ಲಿ ಚಿರತೆ ಕಂಡು 3-4 ದಿನ ಕಳೆದಿದೆ. ಹೀಗಾಗಿ ಚಿರತೆ ಶೀಘ್ರದಲ್ಲೇ ಪ್ರತ್ಯಕ್ಷವಾಗುವ ಸಾಧ್ಯತೆ ಇದೆ.
ಹಳೇ ಕಟ್ಟಡದಲ್ಲಿ ಈಗಾಗಲೇ 2 ಬೋನ್
ಇನ್ನು ಚಿರತೆ ಕಾರ್ಯಾಚರಣೆ ಬಗ್ಗೆ ಮಾತನಾಡಿರುವ ಡಿಸಿಎಫ್ ರವೀಂದ್ರ ಕುಮಾರ್, 4 ತಂಡದ ಮೂಲಕ ಕಾರ್ಯಾಚರಣೆ ನಡೆದಿದೆ. ಲೆಪರ್ಡ್ ಪೋರ್ಸ್ ತಂಡ ನಿರಂತರ ಹುಡುಕಾಟ ಮಾಡ್ತಿದೆ. ಕಂಪ್ಲೀಟ್ ಕಟ್ಟಡದ 4 ಮಹಡಿ ಸುತ್ತಾಡಿದ್ದೇವೆ. ಸುತ್ತಮುತ್ತಲಿನ ಜಾಗವನ್ನು ಕೂಡ ಸರ್ಚ್ ಮಾಡಲಾಗಿದೆ. ಕಳೆದ ರಾತ್ರಿ ಓಡಾಡಿದ ಪಗ್ ಮಾರ್ಕ್ ಸಿಕ್ಕಿದೆ. ಹೆಜ್ಜೆ ಗುರುತು ಆಧರಿಸಿ ಕಾರ್ಯಾಚರಣೆ ಮಾಡಲಾಗಿದೆ. ಥರ್ಮಲ್ ಇಮೇಜ್ ಬರುವ ಡ್ರೋನ್ ಕೂಡ ಬಳಸಲಾಗಿದೆ. ಹುಡುಕಾಟದ ಬಳಿಕ ಚಿರತೆ ಈ ಜಾಗದಲ್ಲಿ ಇಲ್ಲ ಎನ್ನುವುದು ಗೊತ್ತಾಗಿದೆ. ಹಳೇ ಕಟ್ಟಡದಲ್ಲಿ ಈಗಾಗಲೇ 2 ಬೋನ್ ಇಡಲಾಗಿದೆ. ಒಟ್ಟು 4 ಬೋನ್ ಇಟ್ಟು ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ. ಮತ್ತೆ ಚಿರತೆ ಕೃಷ್ಣಾರೆಡ್ಡಿ ಬಡಾವಣೆ ಕಡೆಗೆ ಬಂದರೆ ಸೆರೆಗೆ ಕ್ರಮ ಕೈಗೊಂಡಿದ್ದೇವೆ ಅಂತ ಹೇಳಿದ್ದಾರೆ.
ಹಗಲು ರಾತ್ರಿ ಎನ್ನದೇ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ರೌಂಡ್ಸ್ ಹಾಕ್ತಿದ್ದಾರೆ. ಆದ್ರೆ ಕಿಲಾಡಿ ಚಿರತೆ ಅರಣ್ಯ ಇಲಾಖೆ ಕಳೆದ ರಾತ್ರಿ ಎರಡೆರಡು ಬೋನ್ಗಳನ್ನಿಟ್ಟು ಹುಡುಕಾಡಿದ್ರೂ ಬೀಳದೆ ಅಪಾರ್ಟ್ಮೆಂಟ್ ಸುತ್ತ-ಮುತ್ತ ಹಾಯಾಗಿ ಓಡಾಡಿಕೊಂಡು ಜನರಿಗೆ ಆತಂಕ ತಂದೊಡ್ಡಿವೆ. ಇನ್ನು ಚಿರತೆ ಓಡಾಡಿದ ಸ್ಥಳದ ರಸ್ತೆಯನ್ನೂ ಬಂದ್ ಮಾಡಲಾಗಿದೆ.
ಸದ್ಯ ಬೆಂಗಳೂರಿಗರ ನಿದ್ದೆ ಕೆಡಿಸಿದ ಚಿರತೆ ಸೆರೆಗೆ ಕಾರ್ಯಾಚರಣೆ ಸ್ಥಳಕ್ಕೆ ಡಾಕ್ಟರ್ ಕಿರಣ್ ತಂಡ ಟ್ರಾಕ್ವೆಲಿನ್ ಗನ್ ಸಮೇತ ಎಂಟ್ರಿ ಕೊಟ್ಟಿದೆ. ಮಾತ್ರವಲ್ಲದೆ ಚಿರತೆ ಹಿಡಿಯಲು ಬನ್ನೇರುಘಟ್ಟ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಮೈಸೂರಿನಿಂದ ಕರೆಸಲಾಗಿರೋ ಸ್ಪೆಶಲ್ ಟೀಮ್ ಸಿಬ್ಬಂದಿಯೂ ಕಾರ್ಯಾಚರಣೆಗಿಳಿದಿದ್ದಾರೆ. ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರು ಚಿರತೆಗಳ ಗೆಸ್ಟ್ಹೌಸ್ ಆದಂತಾಗಿದೆ. ಬೋರ್ ಆದ್ರೆ ಆಗಾಗ್ಗೆ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಲಗ್ಗೆ ಇಡುತ್ತಿವೆ. ಇದರಿಂದ ಜನರು ಭಯಭೀತರಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರವೇ ಚಿರತೆಗಳನ್ನು ಸೆರೆಹಿಡಿದು ಕಾಡಿಗೆ ಬಿಟ್ಟು ಜನರ ಆತಂಕವನ್ನ ದೂರ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ