newsfirstkannada.com

ಈ ವರ್ಷ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಹಿಂದೇಟು; ಕಾರಣವೇನು ಗೊತ್ತಾ?

Share :

12-08-2023

  ಕಳೆದ ವರ್ಷ ಬಹುತೇಕ ಶಾಲೆಗಳಲ್ಲಿ ಫೀಸ್ ಒನ್ ಟು ಡಬಲ್

  ಅನೇಕರನ್ನ ಕಳೆದ ಬಾರಿ ರಾಜ್ಯ ಪಠ್ಯಕ್ರಮದ ಶಾಲೆಗೆ ದಾಖಲು

  ಫೀಸ್​​ ಕಡಿಮೆಯಾಗಿದ್ದರಿಂದ ಕೇಂದ್ರ ಪಠ್ಯಕ್ಕೆ ಮತ್ತೆ ಡಿಮ್ಯಾಂಡ್

ಬೆಂಗಳೂರು: ಖಾಸಗಿ ಶಾಲೆಗಳ ದರ್ಬಾರ್​ ಹೆಚ್ಚಾಯ್ತು. ಒಮ್ಮೆ ಫೀಸ್​​ ಹೈಕ್​ ಮಾಡ್ತಾರೆ, ಮತ್ತೊಮ್ಮೆ CBSE ಸಿಲೆಬಸ್ ಎಂದು ಸುಳ್ಳು ಹೇಳಿ ದಾಖಲಾತಿ ಮಾಡಿಕೊಳ್ಳುತ್ತಾರೆ ಅನ್ನೋ ಸ್ಟೋರಿ ಓದಿದ್ದೆವು. ಆದರೀಗ, ಮತ್ತೊಂದು ವಿಚಾರ ಚರ್ಚೆಯಾಗ್ತಿದೆ. ರಾಜ್ಯ ಪಠ್ಯಕ್ರಮ ಶಾಲೆಗೆ ಮಕ್ಕಳನ್ನ ಸೇರಿಸಲು ಪಾಲಕರೇ ಹಿಂದೇಟು ಹಾಕ್ತಿದ್ದಾರಂತೆ.

ಈ ವರ್ಷ ದಾಖಲಾದ ಮಕ್ಕಳ ಸಂಖ್ಯೆ 1,01,51,162
ಕಳೆದ ವರ್ಷ ದಾಖಲಾದ ಮಕ್ಕಳ ಸಂಖ್ಯೆ 1,06,45,000

ಹೌದು, ಕಳೆದ ವರ್ಷಕ್ಕಿಂತ ಈ ಬಾರಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಶಿಕ್ಷಣ ಇಲಾಖೆ ಜುಲೈ 31ರವರೆಗೆ ಸಲ್ಲಿಕೆ ಮಾಡಿದ ಮಾಹಿತಿ ಪ್ರಕಾರ ಇದುವರೆಗೂ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆದ್ರೆ, ಕಳೆದ ವರ್ಷ 1,06,45,000 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ರು. ಅಲ್ಲಿಗೆ, ಶಿಕ್ಷಣ ಇಲಾಖೆ ವ್ಯಾಪ್ತಿಯ ರಾಜ್ಯ ಪಠ್ಯಕ್ರಮ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಲಕ್ಷಕ್ಕೂ ಹೆಚ್ಚು ಕುಸಿತವಾಗಿದೆಯಂತೆ. ಇದಕ್ಕೆ ಸಂಬಂಧಪಟ್ಟಂತೆ ಒಂದರಿಂದ 10 ನೇ ತರಗತಿ ವಿದ್ಯಾರ್ಥಿಗಳ ಡಾಟಾವನ್ನ ಶಿಕ್ಷಣ ಇಲಾಖೆ ಹಂಚಿಕೊಂಡಿದೆ.

ದಾಖಲಾತಿ ಕುಸಿಯಲು ಕಾರಣ

ಕೊರೊನಾ ಸಂದರ್ಭದಲ್ಲಿ ಅಂದ್ರೆ ಕಳೆದ ವರ್ಷ ಬಹುತೇಕ ಖಾಸಗಿ ಶಾಲೆಗಳಲ್ಲಿ ಫೀಸ್ ಒನ್ ಟು ಡಬಲ್ ಆಗಿತ್ತು. ಈ ಹಿನ್ನಲೆ ಅನೇಕರು ಕಳೆದ ಬಾರಿ ರಾಜ್ಯ ಪಠ್ಯಕ್ರಮದ ಶಾಲೆಗೆ ಮಕ್ಕಳನ್ನ ದಾಖಲಿಸಿದ್ದರು. ಈ ವರ್ಷ ಮತ್ತೆ ಫೀಸ್ ಮೊದಲಿನ ಹಾಗೇ ಆಗಿರುವುದರಿಂದ ಕೇಂದ್ರ ಪಠ್ಯ ಕ್ರಮಕ್ಕೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇನ್ನೂ ಒಂದನೇ ತರಗತಿಗೆ ದಾಖಲಾತಿಗೆ 6 ವರ್ಷ ಕನಿಷ್ಠ ವಯೋಮಾನ ನಿಗದಿ ಮಾಡಲಾಗಿದೆ. ಈ ನಿಯಮ 2025/26 ನೇ ಸಾಲಿನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಆದರೂ ಕೆಲ ಖಾಸಗಿ ಶಾಲೆಯಲ್ಲಿ ಈಗಾಗಲೇ ಈ ನಿಯಮ ಜಾರಿ ಮಾಡಿರುವ ಕಾರಣ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿ ಕುಸಿತವಾಗಿದೆ. ವಯೋಮಿತಿ ಕಾರಣಕ್ಕೆ ನರ್ಸರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಉಳಿಯುವಂತಾಗಿದೆ. ಇನ್ನೂ ಸರ್ಕಾರಿ ಶಾಲೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಸರ್ಕಾರಿ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳ ನಕಲು ಮಾಹಿತಿ ಸಲ್ಲಿಕೆ ಈ ಹಿಂದೆ ಮಾಡಿರಬಹುದು. ಆದ್ರೀಗ ಸೇರ್ಪಡೆಯಾಗುವ ಪ್ರತೀ ವಿದ್ಯಾರ್ಥಿಗೂ ಆಧಾರ್ ನಂಬರ್ ಕಡ್ಡಾಯವಾಗಿರುವುದರಿಂದ ನಕಲಿ ಮಾಹಿತಿಗೆ ಬ್ರೇಕ್​ ಬಿದ್ದಿದೆ. ಇನ್ನು ಪ್ರತೀ ವಿದ್ಯಾರ್ಥಿಗೂ ಸ್ಯಾಟ್ಸ್ ನಂಬರ್ ನೀಡೋ ಕಾರಣ ನಕಲಿ ಮಾಹಿತಿಗೆ ಬ್ರೇಕ್ ಬೀಳಲಿದೆ. ಇನ್ನು, ಕೊರೊನಾ ಬಳಿಕ ಬದಲಾದ ಜೀವನ ಶೈಲಿ, ವೃತ್ತಿಯಿಂದ ವಲಸೆ ನೀತಿ ಹೆಚ್ಚಳವಾಗಿದ್ದು, ಈ ಕಾರಣದಿಂದ ಮಕ್ಕಳ ಶಾಲೆಗೆ ಸೇರ್ಪಡೆಯಲ್ಲೂ ವ್ಯತ್ಯಯವಾಗಿರುವ ಸಾಧ್ಯತೆ ಇದೆ.

ಒಟ್ನಲ್ಲಿ, ಈ ಬಾರಿ 4 ಲಕ್ಷಕ್ಕೂ ಹೆಚ್ಚು ಮಕ್ಕಳು ರಾಜ್ಯ ಪಠ್ಯ ಕ್ರಮದಿಂದ ದೂರ ಉಳಿದಿದ್ದಾರೆ ಅಂತ ಅಂದಾಜಿಸಲಾಗಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವರ್ಷ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಹಿಂದೇಟು; ಕಾರಣವೇನು ಗೊತ್ತಾ?

https://newsfirstlive.com/wp-content/uploads/2023/07/School-1-1.jpg

Load More