newsfirstkannada.com

Libya: ಡೇನಿಯಲ್ ಚಂಡಮಾರುತದ ಅಟ್ಟಹಾಸ.. 10 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ, 2000ಕ್ಕೂ ಹೆಚ್ಚು ಬಲಿ

Share :

13-09-2023

    ಲಿಬಿಯಾ ದೇಶದಲ್ಲಿ ವಿನಾಶ ಸೃಷ್ಟಿಸಿದ ಡೇನಿಯಲ್ ಚಂಡಮಾರುತ

    ಪ್ರವಾಹದ ಹೊಡೆತಕ್ಕೆ ಸಿಲುಕಿ ತೇಲಿ ಹೋಗುತ್ತಿರೋ ಕಾರುಗಳು

    ಅಪಾರ್ಟ್‌ಮೆಂಟ್‌ಗಳು ಮುಳುಗಡೆ.. ಕಟ್ಟಡಗಳು ಧ್ವಂಸ

ಜಾಗತಿಕ ಮಟ್ಟದಲ್ಲಿ ವಾತಾವರಣ ಬದಲಾವಣೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಭಾರತದ ಬಹುತೇಕ ಪ್ರದೇಶಗಳಲ್ಲಿ ಮಳೆಯೇ ಇಲ್ಲದೇ ಜನರು ಕಂಗಾಲಾಗಿದ್ದಾರೆ. ಆದರೆ, ಅದೆಷ್ಟೋ ದೇಶಗಳು ಪ್ರಕೃತಿಯ ವಿಕೋಪಕ್ಕೆ ತುತ್ತಾಗಿ ಸರ್ವನಾಶವಾಗುತ್ತಿವೆ. ಇದೀಗ ಈ ಲಿಸ್ಟ್‌ಗೆ ಲಿಬಿಯಾ ದೇಶ ಕೂಡಾ ಸೇರಿಕೊಂಡಿದೆ. ಲಿಬಿಯಾ ದೇಶದಲ್ಲಿ ಡೇನಿಯಲ್ ಚಂಡಮಾರುತದ ಅಟ್ಟಹಾಸಕ್ಕೆ ಇಡೀ ದೇಶವೇ ಧೂಳೀಪಟವಾಗಿದೆ. ಸಾವಿರಾರು ಜನರ ಸಾವು-ನೋವಿಗೆ ಕಾರಣವಾಗಿದೆ.

ಚಂಡಮಾರುತದ ಅಬ್ಬರ.. ಇಡೀ ನಗರವೇ ಧೂಳೀಪಟ

ಒಂದೊಂದು ದೃಶ್ಯಗಳು ಭೀಕರ. ಪ್ರವಾಹದ ಹೊಡೆತಕ್ಕೆ ಆಗಿರೋ ಅವಾಂತರ. ಜನರ ಪರಿಸ್ಥಿತಿ ಘನಘೋರ. ಇದು ಲಿಬಿಯಾ ದೇಶದಲ್ಲಿ ಡೇನಿಯಲ್ ಚಂಡಮಾರುತ ಮಾಡಿರೋ ಧ್ವಂಸ.

ಸೈಕ್ಲೋನ್‌ ಎಫೆಕ್ಟ್‌.. ಭಾರೀ ಮಳೆ.. ಪ್ರವಾಹಕ್ಕೆ 2000ಕ್ಕೂ ಹೆಚ್ಚು ಬಲಿ

ಆಫ್ರೀಕಾದ ಲಿಬಿಯಾ ದೇಶದಲ್ಲಿ ಡೇನಿಯಲ್‌ ಚಂಡಮಾರುತದ ಅಬ್ಬರಕ್ಕೆ ಡೆರ್ನಾ ನಗರವೇ ಧ್ವಂಸವಾಗಿದೆ.. ಭಾನುವಾರ ಪೂರ್ವ ಲಿಬಿಯಾಗೆ ಡೇನಿಯಲ್ ಸ್ಲೈಕ್ಲೋನ್ ಅಪ್ಪಳಿಸಿದ್ದು, ಕಂಡುಕೇಳರಿಯದ ಪ್ರವಾಹ ಉಂಟಾಗಿದೆ. ಘೋರ ಅತಿಘೋರ ಪ್ರವಾಹಕ್ಕೆ ಸಿಲುಗಿ ಅಪಾರ ಸಾವು-ನೋವು ಸಂಭವಿಸಿದೆ. ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ.

ಪ್ರವಾಹದ ಹೊಡೆತಕ್ಕೆ 10 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ

ಭಾರೀ ಪ್ರವಾಹದಿಂದಾಗಿ ಲಿಬಿಯಾದಲ್ಲಿ ಇದುವರೆಗೂ 2 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿ 10 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅದರಲ್ಲೂ ಡೆರ್ನಾ ನಗರದ ಪಕ್ಕದಲ್ಲಿರುವ ಜಲಾಶಯ ಒಡೆದ ಪರಿಣಾಮ ನದಿ ತೀರದ ಹಲವಾರು ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮೂರು ಸೇತುವೆಗಳೂ ನಾಶಗೊಂಡಿವೆ.

ಸುಮಾರು 60 ಲಕ್ಷ ಜನಸಂಖ್ಯೆಯಿರುವ ಲಿಬಿಯಾ ದೇಶವು ಡೇನಿಯಲ್ ಚಂಡಮಾರುತದ ದುಷ್ಪರಿಣಾಮವನ್ನ ಎದುರಿಸಿದೆ. ರಣಭೀಕರ ಪ್ರವಾಹದಲ್ಲಿ ಕಾರುಗಳು ಕೊಚ್ಚಿ ಹೋಗಿವೆ. ಕಟ್ಟಡಗಳು ಕುಸಿದು ಬಿದ್ದಿವೆ. ಸೇತುವೆಗಳು ಹಾಗೂ ರಸ್ತೆ ತುಂಬಾ ನೀರು ಹರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನೂ ಪೂರ್ವ ಲಿಬಿಯಾದ ಡೆರ್ನಾದಲ್ಲಿನ ಪರಿಸ್ಥಿತಿ ವಿನಾಶಕಾರಿಯಾಗಿದ್ದು, ಹಲವಾರು ಕಡೆಗಳಲ್ಲಿ ಮೃತದೇಹಗಳು ನೀರಲ್ಲಿ ತೇಲುತ್ತಿವೆ.

ಶಾಲಾ ಕಾಲೇಜು ಕ್ಲೋಸ್.. ಸೇನಾಪಡೆಗಳಿಂದ ರಕ್ಷಣಾ ಕಾರ್ಯ

ಈ ವಿನಾಶಕಾರಿ ಪ್ರವಾಹದಲ್ಲಿ ಮೃತಪಟ್ಟಿರುವವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುವ ಭೀತಿಯಿದೆ. ಇನ್ನೂ ಜನರನ್ನ ರಕ್ಷಿಸಲು ಸೇನಾಪಡೆಗಳು ಧಾವಿಸಿವೆ. ಇನ್ನೂ ಜನರ ರಕ್ಷಣೆಗೆ ಬಂದ ಏಳು ಮಂದಿ ಲಿಬಿಯನ್ ಸೇನಾ ಸಿಬ್ಬಂದಿಯೂ ಕಣ್ಮರೆಯಾಗಿದ್ದಾರೆ.. ಹೀಗಾಗಿ ಡೆರ್ನಾ ನಗರವನ್ನು ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ. ಚಂಡಮಾರುತದ ಮುನ್ನೆಚ್ಚರಿಕೆಯಾಗಿ ಶಾಲಾ-ಕಾಲೇಜುಗಳನ್ನ ಮುಚ್ಚಲಾಗಿದೆ.

ಪೂರ್ವ ಲಿಬಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಇನ್ನೂ ಪರಿಸ್ಥಿತಿ ನಿಭಾಯಿಸಲು ಲಿಬಿಯಾ ರಾಷ್ಟ್ರದ ಹಂಗಾಮಿ ಪ್ರಧಾನಿಯಾಗಿರುವ ಒಸಾಮಾ ಹಮದ್ ಪೂರ್ವ ಲಿಬಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಜೊತೆಗೆ ದೇಶಾದ್ಯಂತ ರಾಷ್ಟ್ರಧ್ವಜಗಳನ್ನು ಅರ್ಧಮಟ್ಟಕ್ಕೆ ಇಳಿಸಿ ಮೂರು ದಿನಗಳ ಕಾಲ ಶೋಕಾಚರಣೆಯನ್ನ ಘೋಷಣೆ ಮಾಡಿದ್ದಾರೆ.

ಒಟ್ಟಾರೆ, ವಿಶ್ವದ ಬಹುತೇಕ ರಾಷ್ಟ್ರಗಳು ಪ್ರವಾಹದ ಹೊಡೆತಕ್ಕೆ ಸಿಲುಕಿ ನರಲುತ್ತಿವೆ.. ಇದೀಗ ಲಿಬಿಯಾ ಕೂಡಾ ಎಂದೂ ಕಂಡು ಕೇಳರಿಯದ ರಣರಕ್ಕಸ ಸೈಕ್ಲೋನ್‌ಗೆ ತುತ್ತಾಗಿದೆ.. ಇದು ಜಾಗತಿಕ ಮಟ್ಟದಲ್ಲಿ ಪ್ರಕೃತಿ ಮಾತೆ ಸೃಷ್ಟಿಸ್ತಿರೋ ವಿಕೋಪಕ್ಕೆ ಹಿಡಿದ ಕೈನ್ನಡಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Libya: ಡೇನಿಯಲ್ ಚಂಡಮಾರುತದ ಅಟ್ಟಹಾಸ.. 10 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ, 2000ಕ್ಕೂ ಹೆಚ್ಚು ಬಲಿ

https://newsfirstlive.com/wp-content/uploads/2023/09/Libya.jpg

Load More