ಒಡೆದ ಡ್ಯಾಂ, 6 ಸಾವಿರ ಸಾವು, 10 ಸಾವಿರ ಜನ ನಾಪತ್ತೆ
ಸಮುದ್ರದ ಅಲೆಗಳಲ್ಲಿ ತೇಲಿ ಬರುತ್ತಿರೋ ಮೃತದೇಹ
ಥೇಟ್ ನರಕದಂತೆ ಕಾಣುತ್ತಿದೆ ಲಿಬಿಯಾ ಕರಾವಳಿ ತೀರ
ಲಿಬಿಯಾದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಆಫ್ರೀಕಾದ ಲಿಬಿಯಾ ದೇಶದಲ್ಲಿ ಡೇನಿಯಲ್ ಚಂಡಮಾರುತದ ಅಬ್ಬರಕ್ಕೆ ಡೆರ್ನಾ ನಗರವೇ ಧ್ವಂಸವಾಗಿದೆ. ಭಾನುವಾರ ಪೂರ್ವ ಲಿಬಿಯಾಗೆ ಡೇನಿಯಲ್ ಸ್ಲೈಕ್ಲೋನ್ ಅಪ್ಪಳಿಸಿದ್ದು, ಕಂಡುಕೇಳರಿಯದ ಪ್ರವಾಹ ಉಂಟಾಗಿದೆ. ಘೋರ ಅತಿಘೋರ ಪ್ರವಾಹಕ್ಕೆ ಸಿಲುಗಿ ಅಪಾರ ಸಾವು-ನೋವು ಸಂಭವಿಸಿದೆ. ಮನಗೆಳ ಅವಶೇಷಗಳಡಿಯಲ್ಲಿ, ಬೀದಿಗಳಲ್ಲಿ, ಸಮುದ್ರದಲ್ಲಿ, ಎತ್ತ ಕಣ್ಣಾಯಿಸಿದ್ರೂ ಶವಗಳೇ ಕಾಣುತ್ತಿವೆ.
ಒಂದೊಂದು ದೃಶ್ಯಗಳು ಭೀಕರ. ಪ್ರವಾಹದ ಹೊಡೆತಕ್ಕೆ ಆಗಿರೋ ಅವಾಂತರ. ಜನರ ಪರಿಸ್ಥಿತಿ ಘನಘೋರ. ಇದು ಲಿಬಿಯಾ ದೇಶದಲ್ಲಿ ಡೇನಿಯಲ್ ಚಂಡಮಾರುತ ಮಾಡಿರೋ ಧ್ವಂಸ.
ಭಾರೀ ಮಳೆಗೆ ಪೂರ್ವ ಲಿಬಿಯಾದಲ್ಲಿ ಭೀಕರ ಪ್ರವಾಹ
ಲಿಬಿಯಾದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಮೆಡಿಟರೇನಿಯನ್ ಚಂಡಮಾರುತದ ಪ್ರವಾಹದಿಂದ ಬರೊಬ್ಬರಿ 6 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ರೆ, ನಾಪತ್ತೆಯಾದವರ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಪ್ರವಾಹದ ಒತ್ತಡದಿಂದ ಎರಡು ಡ್ಯಾಂಗಳು ಒಡೆದು, ಮೂರು ಬ್ರಿಡ್ಜ್ಗಳ ನೀರು ಸಿಕ್ಕ ಸಿಕ್ಕ ನಗರಗಳನ್ನ ಬಾಚಿಕೊಂಡು ನೀರಿನಲ್ಲಿ ಮುಳುಗಿಸಿಕೊಂಡು ಹೋಗಿವೆ. ರಣಭೀಕರ ಪ್ರವಾಹದಿಂದಾಗಿ ಲಿಬಿಯಾ ಜನರ ಬದುಕು ಬೀದಿಗೆ ಬಿದ್ದಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 6 ಸಾವಿರ ಜನರ ಜೀವ ತೆಗೆದಿರೋ ಡೆಡ್ಲಿ ಸೈಕ್ಲೋನ್‌ಗೆ ಲಿಬಿಯಾದ ಜನರು ಬೆಚ್ಚಿಬಿದ್ದಿದ್ದಾರೆ.
ಹುಡುಕುತ್ತಾ ಹೋದಷ್ಟು ಕೈಗೆ, ಕಾಲಿಗೆ ಸಿಗುತ್ತಿವೆ ಶವಗಳು
ಈಗಾಗಲೇ ರಕ್ಷಣಾ ತಂಡಗಳ ಸಿಬ್ಬಂದಿ ಬೀದಿ, ಕಟ್ಟಡ ಮತ್ತು ಸಮುದ್ರ ತೀರದಿಂದ ಶವ ಹೊರ ತೆಗೆಯುತ್ತಿದ್ದು, ಇನ್ನೂ ಸ್ಪಷ್ಟವಾಗಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಲೆಕ್ಕ ಸಿಗಲಾರದ ಸ್ಥಿತಿ ನಿರ್ಮಾಣವಾಗಿದೆ. ರಕ್ಷಣಾ ತಂಡ ಹುಡುಕುತ್ತಾ ಹೋದಷ್ಟು ಸಿಬ್ಬಂದಿಯ ಕೈಗೆ. ಕಾಲಿಗೆ ರಾಶಿ ರಾಶಿ ಶವಗಳ ಸಿಗುತ್ತಿವೆ.
ಸಮುದ್ರದ ಅಲೆಗಳಲ್ಲಿ ತೇಲಿ ಬರುತ್ತಿರೋ ಮೃತದೇಹಗಳು
ಲಿಬಿಯಾದಲ್ಲಿ ವಿನಾಶಕಾರಿ ಡೇನಿಯಲ್ ಚಂಡಮಾರುತದ ಅಬ್ಬರಕ್ಕೆ ಸಿಲುಕಿದ ಜನರು ಸತ್ತ ಮೀನುಗಳಂತೆ ಸಮುದ್ರ ಅಲೆಗಳಲ್ಲಿ ಮೃತದೇಹಗಳು ತೇಲಿ ಬರುತ್ತಿರುವುದನ್ನ ದೃಶ್ಯವನ್ನ ಪ್ರವಾಹದಲ್ಲಿ ಬದುಕುಳಿದ ಜನ ಸೆರೆ ಹಿಡಿದ್ದಿದ್ದಾರೆ.
ಒಂದರ ಮೇಲೊಂದು ಅಡ್ಡಾದಿಡ್ಡಿ ಬಿದ್ದಿರುವ ಕಾರು, ಬೈಕ್ಗಳು
ಡೇನಿಯಲ್ ಚಂಡಮಾರುತದ ಅಬ್ಬರ ಕಮ್ಮಿಯಾದ್ರು ಅದರ ಭೀಕರತೆಗೆ ಲಿಬಿಯಾ ನಲುಗಿದೆ. ರಣ ಭೀಕರ ಪ್ರವಾಹದಿಂದಾಗಿ ಒಂದರ ಮೇಲೊಂದು ಕಾರುಗಳು, ಬೈಕ್ಗಳು ಅಡ್ಡಾದಿಡ್ಡಿ ಬಿದ್ದಿವೆ.
ಎತ್ತ ಕಣ್ಣಾಯಿಸಿದರೂ.. ತೂರಿ ಬಿದ್ದ ಮನೆಗಳ ಅವಶೇಷ
360 ಡಿಗ್ರಿ ಪೂರ್ವ ಲಿಬಿಯಾ ನಗರದ ಮಧ್ಯ ನಿಂತು ಸುತ್ತ ನೋಡಿದ್ರೆ. 360 ಡಿಗ್ರಿ ಕಾಣ ಸಿಗೋದು ಬರೀ ತೂರಿ ಬಿದ್ದ ಮನೆಗಳ ಅವಶೇಷ.
ಥೇಟ್ ನರಕದ ರೀತಿ ಕಾಣುತ್ತಿದೆ ಲಿಬಿಯಾ ಕರಾವಳಿ ತೀರ
ಸದ್ಯದ ಸ್ಥಿತಿಯಲ್ಲಿ ಏನಾದ್ರು ಒಂದು ರೌಂಡ್ ಲಿಬಿಯಾ ನಗರಗಳನ್ನ ಸುತ್ತಾಡಿದ್ರೆ.. ನರಕನೂ ಹೀಗೆ ಇರುತ್ತೇನೆ ಅಂತ ಒಂದು ಕ್ಷಣ ಅನಿಸಿಬಿಡುತ್ತೆ.. ಹೌದು, ಲಿಬಿಯಾ ಕರಾವಳಿ ತೀರ ಥೇಟ್ ನರಕದ ರೀತಿ ಕಾಣುತ್ತಿದೆ.
ಲಿಬಿಯಾ ದೇಶದಲ್ಲಿ ಭೀಕರ ಚಂಡಮಾರುತ ಅಬ್ಬರಿಸಿದೆ. ಪೂರ್ವ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 6 ಸಾವಿರಕ್ಕೆ ತಲುಪಿದೆ. ಈ ಮೂಲಕ ನೋಡ ನೋಡ್ತಿದ್ದಂತೆ ಸಾವಿರಾರು ಜನರನ್ನು ಪ್ರಕೃತಿ ವಿಕೋಪ ಬಲಿ ಪಡೆದಿದೆ. ಅದರಲ್ಲೂ 7 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 30 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ. ಅಷ್ಟೇ ಅಲ್ಲದೆ ಲಿಬಿಯಾ ನಗರದಲ್ಲಿ 10 ಸಾವಿರ ಜನರು ಕಾಣೆಯಾಗಿದ್ದಾರೆ ಎಂದು ಅಂದಾಜಿಸಲಾಗಿದ್ದು, ಡೆರ್ನಾ ಮತ್ತು ಇತರ ಪಟ್ಟಣಗಳಿಂದ ಸಿರ ಸುಮಾರು 40 ಸಾವಿರ ಜನರನ್ನ ಸ್ಥಳಾಂತರಿಸಲಾಗಿದೆ. ಇನ್ನೂ ಕಟ್ಟಡಗಳನ್ನು ಕೆದಕುತ್ತಿದ್ದರೆ ಮತ್ತಷ್ಟು ಶವಗಳು ಸಿಗುತ್ತಿವೆ. ಹೀಗಾಗಿ ಲಿಬಿಯಾ ದೇಶದ ಪೂರ್ವ ಕರಾವಳಿ ಭಾಗ ಅಕ್ಷರಶಃ ಸ್ಮಶಾನದ ರೀತಿಯೇ ಕಾಣುತ್ತಿದೆ.
ಅಷ್ಟಕ್ಕೂ ಇಲ್ಲಿ ಆಗಿದ್ದೇನು ಅಂದ್ರೆ, ಡೇನಿಯಲ್ ಚಂಡಮಾರುತ ಇದೇ ಭಾನುವಾರ ರಾತ್ರಿ ಡೆರ್ನಾ ಕರಾವಳಿಗೆ ಅಪ್ಪಳಿಸಿತ್ತು. ಪರಿಣಾಮ ಡ್ಯಾಂ ಹೊಡೆದು ಭಾರಿ ಸ್ಫೋಟದ ಶಬ್ದ ಕೇಳಿಸಿತ್ತು. ಇದಾದ ಬಳಿಕ ನಡೆದಿದ್ದು ಘೋರ ದುರಂತ.
ತೈಲ ಸಂಪತ್ತು ಹೊಂದಿದ್ರೂ ಲಿಬಿಯಾ ಈಗ ಬಡರಾಷ್ಟ್ರವಾಗಿ ನರಳುತ್ತಿದೆ. ಇದೀಗ ದೇಶ ಭೀಕರ ಸೈಕ್ಲೋನ್ ಅಬ್ಬರಕ್ಕೆ ತತ್ತರಿಸಿದ್ದು, ಡೆರ್ನಾ ಹಾಗೂ ಇತರ ಪಟ್ಟಣಗಳಿಂದ 40,000 ಜನರ ಸ್ಥಳಾಂತರವಾಗಿದೆ. ಹಾಗೇ ವಿಶ್ವಸಂಸ್ಥೆ ಹಾಗೂ ವಿವಿಧ ದೇಶಗಳು ಲಿಬಿಯಾಗೆ ನೆರವಿನ ಹಸ್ತ ಚಾಚಿದ್ದು, ಜನರ ರಕ್ಷಣೆಗೆ ಮುಂದೆ ಬಂದಿವೆ. ಆದ್ರೂ ಇದಕ್ಕೆಲ್ಲ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಒತ್ತಾಯ ಕೂಡ ಕೇಳಿಬಂದಿದೆ.
ಒಟ್ಟಾರೆ, ಪ್ರಕೃತಿ ಎದುರು ಮನುಷ್ಯನ ಆಟ ನಡೆಯೋದಿಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗಿದೆ.. ಈಗ ಮತ್ತೆ ಅದು ಮರುಕಳಿಸಿದೆ. ಹೀಗೆ ದಿನದಿಂದ ದಿನಕ್ಕೆ ಭೂಮಿ ಮೇಲೆ ಪ್ರಕೃತಿ ವಿಕೋಪ ಹೆಚ್ಚಾಗುತ್ತಿವೆ. ಇದು ಜಾಗತಿಕ ಮಟ್ಟದಲ್ಲಿ ಪ್ರಕೃತಿ ಮಾತೆ ಸೃಷ್ಟಿಸ್ತಿರೋ ವಿಕೋಪಕ್ಕೆ ಹಿಡಿದ ಕೈನ್ನಡಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ