newsfirstkannada.com

ಬಿಜೆಪಿಯ 8-10 ಹಾಲಿ ಸಂಸದರಿಗೆ ಕೊಕ್ ಫಿಕ್ಸ್‌?; ಬಿಜೆಪಿ ಹೈಕಮಾಂಡ್ ಹಿಟ್‌ ಲಿಸ್ಟ್‌ನಲ್ಲಿ ಇರೋದು ಯಾಱರು?

Share :

02-08-2023

    ಲೋಕಸಭಾ ಚುನಾವಣೆ ಹಿನ್ನೆಲೆ ಮಹತ್ವದ ಬದಲಾವಣೆ ಖಚಿತ

    ಬಿ.ಎಲ್. ಸಂತೋಷ್ ಮೂಲಕ ಹೈಕಮಾಂಡ್ ಖಡಕ್ ಸಂದೇಶ

    8-10 ಲೋಕಸಭಾ ಕ್ಷೇತ್ರಗಳ ಫೈನಲ್ ಮಾಡಿದ್ಯಾ ಹೈಕಮಾಂಡ್?

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮಹತ್ವದ ಬದಲಾವಣೆಗೆ ಬಿಜೆಪಿ ಮುಂದಾಗಿದೆ. ಕಾಂಗ್ರೆಸ್ ಗ್ಯಾರಂಟಿ ಭರವಸೆಗಳ ವಿರುದ್ಧ ಹೋರಾಡಲು ಸಜ್ಜಾಗಿರೋ ಕೇಸರಿ ಪಾಳಯದಲ್ಲಿ ಬದಲಾವಣೆ ಕೂಗು ಜೋರಾಗಿದೆ. ಪ್ರಮುಖವಾಗಿ 8-10 ಲೋಕಸಭಾ ಕ್ಷೇತ್ರಗಳಲ್ಲಿ ಹೊಸ ಮುಖಕ್ಕೆ ಮಣೆ ಹಾಕಲು ಚಿಂತನೆ ನಡೆಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೂಲಕ ಮಹತ್ವದ ಸಂದೇಶ ರವಾನೆ ಮಾಡಲಾಗಿದೆ.

ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ಈ 28ರಲ್ಲಿ ಸದ್ಯ 25 ಸಂಸದರು ಬಿಜೆಪಿ ಪಕ್ಷದಿಂದಲೇ ಗೆದ್ದು ಬೀಗಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಈ ಪೈಕಿ ಕನಿಷ್ಠ 8-10 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಕೊಕ್ ನೀಡಿ ಹೊಸ ಮುಖಗಳಿಗೆ ಮಣೆ ಹಾಕಬೇಕು ಎನ್ನಲಾಗಿದೆ. ಆಗಸ್ಟ್ ತಿಂಗಳಿನೊಳಗೇ ಹೊಸ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಬದಲಾವಣೆಯಾಗೋ ಕ್ಷೇತ್ರಗಳ್ಯಾವು? ಹೊಸ ಅಭ್ಯರ್ಥಿಗಳು ಯಾರು. ಅವರ ಹೆಸರುಗಳು ಹೊರ ಬರದಂತೆ ಮಾಹಿತಿ ಸಂಗ್ರಹಿಸಬೇಕು. ಬದಲಾವಣೆಯಾಗೋ ಕ್ಷೇತ್ರಗಳಲ್ಲೂ ಗೆಲ್ಲೋ ವಾತಾವರಣ ನಿರ್ಮಾಣವಾಗಬೇಕು. ಈ ಬಗ್ಗೆ ವರದಿ ನೀಡುವಂತೆ ರಾಜ್ಯಾಧ್ಯಕ್ಷ ನಳಿನ್ ಕಟೀಲ್​ಗೆ ಬಿ.ಎಲ್. ಸಂತೋಷ್ ಮೂಲಕ ಸಂದೇಶ ರವಾನೆ ಮಾಡಲಾಗಿದೆ. ಬಿಜೆಪಿ ಬದಲಾವಣೆ ಮಾಡೋ ಸಂಭಾವ್ಯ ಕ್ಷೇತ್ರಗಳಲ್ಲಿ ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಬಳ್ಳಾರಿಯೂ ಸೇರಿದೆ. ಈ ಕ್ಷೇತ್ರಗಳಲ್ಲಿ ಯಾರಿಗೆ ಮಣೆ ಹಾಕಿದ್ರೆ ಗೆಲುವು ಸಾಧ್ಯವಾಗುತ್ತೆ. ಇದರ ಸಂಪೂರ್ಣ ವರದಿಯನ್ನು ಬಿಜೆಪಿ ಹೈಕಮಾಂಡ್ ಕೇಳಿದೆ ಎನ್ನಲಾಗಿದೆ.

ಯಾವ್ಯಾವ ಕ್ಷೇತ್ರಕ್ಕೆ ಕೊಕ್ ಸಾಧ್ಯತೆ

1. ಚಾಮರಾಜನಗರ- ವಿ. ಶ್ರೀನಿವಾಸ ಪ್ರಸಾದ್
2. ತುಮಕೂರು- ಬಸವರಾಜು
3. ಚಿಕ್ಕಬಳ್ಳಾಪುರ- B.N ಬಚ್ಚೇಗೌಡ
4. ದಾವಣಗೆರೆ- ಜಿ.ಎಂ ಸಿದ್ದೇಶ್ವರ್
5. ಬೆಳಗಾವಿ- ಮಂಗಳ ಸುರೇಶ್ ಅಂಗಡಿ
6. ಉತ್ತರ ಕನ್ನಡ- ಅನಂತ ಕುಮಾರ್ ಹೆಗಡೆ
7. ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
8. ವಿಜಯಪುರ- ರಮೇಶ್ ಜಿಗಜಿಣಗಿ
9. ಬಳ್ಳಾರಿ- ದೇವೇಂದ್ರಪ್ಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬಿಜೆಪಿಯ 8-10 ಹಾಲಿ ಸಂಸದರಿಗೆ ಕೊಕ್ ಫಿಕ್ಸ್‌?; ಬಿಜೆಪಿ ಹೈಕಮಾಂಡ್ ಹಿಟ್‌ ಲಿಸ್ಟ್‌ನಲ್ಲಿ ಇರೋದು ಯಾಱರು?

https://newsfirstlive.com/wp-content/uploads/2023/08/BSY_NALIN_KUMAR.jpg

Load More