ಶಿಕ್ಷಣ ಕಲಿಯಬೇಕೆನ್ನುವ ಮಕ್ಕಳ ಉತ್ಸಾಹಕ್ಕೆ ‘ಭರವಸೆ’ಯ ಉತ್ತೇಜನ
3 ವರ್ಷದಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ ಭರವಸೆ ಟ್ರಸ್ಟ್
ಕೇವಲ 2 ದಿನದ ಕೆಲಸದಿಂದ ಹೇಗೆ ಕಾಣುತ್ತಿದೆ ಗೊತ್ತಾ ಸರ್ಕಾರಿ ಶಾಲೆ.?
ಮಂಡ್ಯದ ನಾಗಮಂಗಲ ತಾಲೂಕಿನಲ್ಲಿರುವ ಬೆಳ್ಳೂರು ಹೋಬಳಿ ಕಂಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅನೇಕ ವರ್ಷದಿಂದ ಸುಣ್ಣ-ಬಣ್ಣ ಕಾಣದೇ ಹಳೆಯ ಕಟ್ಟಡದಂತೆ ಕಾಣುತ್ತಿತ್ತು. ಇದಕ್ಕೀಗ ಹೊಸ ಲುಕ್ ಕೊಟ್ಟಿದ್ದರಿಂದ ಪ್ರವೇಟ್ ಶಾಲೆಗಿಂತ ನಮ್ಮ ಶಾಲೆಯೇನು ಕಡಿಮೆ ಇಲ್ಲವೇನು ಎಂಬುವಂತೆ ಕಾಣುತ್ತಿದೆ. ಆದರೆ ಇದಕ್ಕೆಲ್ಲ ಕಾರಣ ಭರವಸೆ ಟ್ರಸ್ಟ್. ಹೌದು ಟ್ರಸ್ಟ್ನ ಕರುನಾಡ ಸೇವಕರು ಸ್ವಯಂಪ್ರೇರಿತವಾಗಿ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಮೂಲಕ ಶಿಕ್ಷಣ ಕಲಿಯಬೇಕು ಎನ್ನುವ ಮಕ್ಕಳ ಉತ್ಸಾಹಕ್ಕೆ ಉತ್ತೇಜನ ನೀಡಿದ್ದಾರೆ.
ಕಳೆದ 3 ವರ್ಷದಿಂದ ಭರವಸೆ ಟ್ರಸ್ಟ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದೆ. ಹೀಗಾಗಿ ಟ್ರಸ್ಟ್ ಕಾರ್ಯಕರ್ತರು ತಮ್ಮದೇ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಜಾಗೃತಿ ಮೂಡಿಸುವುದರ ಜೊತೆಗೆ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದು ಶಾಲೆಗಳಿಗೆ ಮರು ಜೀವ ನೀಡುತ್ತಿದ್ದಾರೆ.
2 ದಿನಗಳ ಕಾಲ ಶಾಲೆಗೆ ಸುಣ್ಣ ಬಣ್ಣ ಬಳಿದ 30 ಕಾರ್ಯಕರ್ತರು
ಗ್ರಾಮದ ಶಾಲೆಯಲ್ಲಿ 50 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಳೆಯ ಕಟ್ಟಡಕ್ಕೆ ಕಳೆದ 15 ವರ್ಷದಿಂದ ಹನಿ ಸುಣ್ಣಬಣ್ಣ ಕಾಣದೇ ಹಳೆಯ ಬಂಗ್ಲೆಯಂತೆ ಇತ್ತು. ಸದ್ಯ ಶಾಲೆಗೆ ಸುಣ್ಣ ಬಣ್ಣ ಬಳಿದು ಸರ್ಕಾರಿ ಶಾಲೆಯನ್ನು ಸುಂದರಗೊಳಿಸಿ ಮುಂದಿನ ವರ್ಷಗಳಲ್ಲಿ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆಯಲ್ಲಿದೆ. ಈ ಬಾರಿ ಸಂಘಟನೆಯ ಸದಸ್ಯರು ಹಾಗೂ ಕಲಾವಿದರು ಸೇರಿದಂತೆ ಸುಮಾರು 30 ಕಾರ್ಯಕರ್ತರು 2 ದಿನಗಳ ಕಾಲ ಶಾಲೆಗೆ ಸುಣ್ಣ ಬಣ್ಣ ಬಳಿದು ಹೊಸ ಲುಕ್ ನೀಡಿದ್ದಾರೆ.
ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಕೆಲವೊಂದು ಬಣ್ಣ ಬಣ್ಣದ ಚಿತ್ತಾರವನ್ನು ಶಾಲೆಯ ಗೋಡೆ ಹಾಗೂ ಕಾಂಪೌಂಡ್ ಮೇಲೆ ಬಿಡಿಸಿದ್ದಾರೆ. ರಾಷ್ಟ್ರ ಕವಿ ಕುವೆಂಪು, ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಶ್ರೀಗಳ ಭಾವಚಿತ್ರ ಸೇರಿ ಹಲವು ಚಿತ್ರ ಹಾಗೂ ಸಂದೇಶಗಳನ್ನು ಶಾಲೆಯ ಗೋಡೆಯ ಮೇಲೆ ಕುಂಚದಿಂದ ಸೃಷ್ಟಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸೇರಿ, ಚಿತ್ರಕಲೆ ಕಲಿಯುವುದರ ಜೊತೆಗೆ, ಶಾಲೆಯ ಬದಲಾವಣೆಯನ್ನು ಕಂಡು ತುಂಬಾ ಖುಷಿಪಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ